ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್: ಸಮಗ್ರ ಶೀತಲ ಘಟಕ ನಿರ್ಮಾಣ

By Rajendra
|
Google Oneindia Kannada News

Refrigerated Warehouse in bidar
ಬೆಂಗಳೂರು, ಸೆ.18: ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಗ್ರಹಣೆ ಕುರಿತಂತೆ ಮೂಲಭೂತ ಸೌಲಭ್ಯ ಸೃಷ್ಟಿಸುವಲ್ಲಿ ಅಪೇಡಾದಿಂದ ರಾಜ್ಯಕ್ಕೆ ಅತ್ಯುತ್ತಮ ಮಟ್ಟದ ಪ್ರೋತ್ಸಾಹ ದೊರೆಯುತ್ತಿದೆ. ರಾಜ್ಯದಲ್ಲಿನ ರೈತರು ಮತ್ತು ರಫ್ತುದಾರರಿಗೆ ರಫ್ತುಪ್ರಮಾಣ ಹೆಚ್ಚಿಸಲು ಇದು ನೆರವಾಗುತ್ತಿದೆ ಎಂದು ಕೃಷಿ ಸಚಿವ ಹಾಗೂ ಕೆಪೆಕ್ ಸಂಸ್ಥೆಯ ಅಧ್ಯಕ್ಷ ಎಸ್.ಎ. ರವೀಂದ್ರನಾಥ್ ತಿಳಿಸಿದರು.

ಅವರು ಇಂದು ಬೀದರ್ ಜಿಲ್ಲೆಯಲ್ಲಿ ಸಮಗ್ರ ಶೀಥಲ ಘಟಕವನ್ನು ನಿರ್ಮಿಸುವ ಸಂಬಂಧದಲ್ಲಿ ಅಪೇಡಾ ನವದೆಹಲಿ ಮತ್ತು ಕೆಪೆಕ್ ಬೆಂಗಳೂರು ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೆ ಹಣ್ಣು ತರಕಾರಿ ಸಂಗ್ರಹಣಾ ವ್ಯವಸ್ಥೆ ಮಾಡಲಾಗಿದೆ. ಅಪೇಡಾ ನೆರವಿನಿಂದ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ 5.64 ಕೋಟಿ ರೂ. ನೆರವಿನಿಂದ ಸಮಗ್ರ ಶೀಥಲಗೃಹವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಬಳಸಿಕೊಂಡು ರಾಜ್ಯದಿಂದ ಕೆಪೆಕ್ ನಿಗಮವು ನೆದರ್‌ಲ್ಯಾಂಡ್‌ಗೆ 32 ಟನ್ ದಾಳಿಂಬೆಯನ್ನು ರಫ್ತು ಮಾಡಿದೆ. ಈ ಪ್ರದೇಶದ ರೈತರು ಇನ್ನೂ ಹೆಚ್ಚು ಹೆಚ್ಚು ದಾಳಿಂಬೆ ಹಾಗೂ ದ್ರಾಕ್ಷಿ ರಫ್ತು ಮಾಡಲು ಆಸಕ್ತಿ ತೋರುತ್ತಿದ್ದು ಶೀಥಲಗೃಹದ ಬಳಕೆಗೆ ಮುಂದೆ ಬಂದಿದ್ದಾರೆಂದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X