Get Updates
Get notified of breaking news, exclusive insights, and must-see stories!

ರೈತನಿಗೆ ನಮೋನಮಃ : ನ್ಯೂಜೆರ್ಸಿ ಕನ್ನಡಿಗರಿಂದ ಅನ್ನದಾತನ ಸ್ಮರಣೆ

ವಿಜೃಂಭಣೆಯಿಂದ ಜರುಗಿದ ಒಂಭತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹಲವಾರು ಮನರಂಜನಾತ್ಮಕ, ಕ್ರೀಡಾತ್ಮಕ ಕಾರ್ಯಕ್ರಮಗಳ ಜೊತೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ರೈತನ ಸ್ಮರಣೆಯ ನೃತ್ಯರೂಪಕ 'ರೈತ ನಿನಗೆ ನಮೋನಮಃ'.

ಇದು ರೈತನ ದೈನಂದಿನ ಜೀವನವನ್ನು ಸಹಸ್ರಾರು ಜನರಿಗೆ ಮನಮುಟ್ಟುವಂತೆ ಮಾಡಿ, ಅವನ ಜೀವನದ ಆಗುಹೋಗುಗಳನ್ನು ನಮ್ಮ ಜೀವನದ ಕನ್ನಡಿಯಲ್ಲಿ ನೋಡುವಂತೆ ಮಾಡಲು ಸಂಪೂರ್ಣ ಯಶಸ್ವಿಯಾಯಿತು. ಈ ನೃತ್ಯರೂಪಕವನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಲಾಯಿತು. ['ಕನ್ನಡಿಗರ ಸಹನೆ ಪರೀಕ್ಷೆ ಮಾಡಬೇಡಿ, ಎಚ್ಚರಿಕೆ']

Raitha ninage Namo Namaha, Dance drama by Brindavana, New Jersey

ನೂರಾರು ರೈತರ ಆತ್ಮಹತ್ಯೆಯ ಕಥೆಗಳನ್ನು ಕೇಳಿರುವ ನಮಗೆ, ಅವರ ದುಃಖ-ದುಮ್ಮಾನ ಹಂಚಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸುವ ಕಥಾಹಂದರ ಹೊಂದಿತ್ತು ಈ ರೂಪಕ.

ವರ್ಷದ ವಿವಿಧ ಋತುಗಳಲ್ಲಿ ಸಂತೋಷ ಹಂಚುವ ರೀತಿ, ಜಾತ್ರೆಯ ಸಂಭ್ರಮ, ಬಾರದ ಮಳೆಯಿಂದ ಆಗುವ ಬರ, ಅದರಿಂದ ಬೆಳೆ ಹಾಳಾಗಿ ಆತ್ಮಹತ್ಯೆಗೆ ಶರಣಾಗುರುವ ರೈತ, ಕಷ್ಟ ಬಂದಾಗ ಯಾವ ರೀತಿ ಎದುರಿಸಬೇಕು ಎಂದು ತೋರುವ ರೈತಾಪಿ ಜನರ ಜೀವನವನ್ನು ಮನಮೋಹಕವಾಗಿ ದೃಶ್ಯರೂಪಕದಲ್ಲಿ ಬೃಂದಾವನ ಕನ್ನಡ ಕೂಟದವರು ಪ್ರದರ್ಶಿಸಿದರು. [ರಾಕ್ಷಸಿ ಅಂದರೆ ಜಯಲಲಿತಾ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ]

Raitha ninage Namo Namaha, Dance drama by Brindavana, New Jersey

ಶಿವ ಶರಣರ ವಚನದ ಪ್ರಾರ್ಥನೆಯ ನೃತ್ಯದೊಂದಿಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮ, ಮಾಯದಂಥಾ ಮಳೆ ಬಂತಣ್ಣ, ಘಲ್ಲು-ಘಲ್ಲೆನುತ ಕನ್ನಡದ ಜನಪದ ಹಾಡುಗಳಿಗೆ ಹಲವಾರು ನೃತ್ಯಗಾರರು ನೃತ್ಯ ಪ್ರದರ್ಶನ ಮಾಡಿದರು.

ರೈತಾಪಿ ಜನರ ಸಂಭ್ರಮದ ಸುಗ್ಗಿ ಸಮಯದ ನಂತರ ಜಾತ್ರೆಯ ಸನ್ನಿವೇಶಗಳು ಗರತಿಯರ ಮನೋಜ್ಞ ಕಂಸಾಳೆ ನೃತ್ಯ.. ಬಾರದ ಮಳೆಗೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ" ಕವನಕ್ಕೆ ಮನಕರಗಿಸುವ ನೃತ್ಯ ಮುಂತಾದ ಹಲವು ನೃತ್ಯಗಳು ಬಹಳ ಕಾಲ ನೆನಪಿನಲ್ಲಿರುವಂತಹದು. [ಉಮಾಶ್ರೀ ಮೇಡಂ, ನೀವು ಕಲಾವಿದರಿಗೆ ಮಾಡಿದ ಅಪಮಾನ ಸರಿಯೆ?
]

Raitha ninage Namo Namaha, Dance drama by Brindavana, New Jersey

ಅಂತ್ಯದಲ್ಲಿ ವಿವಿಧ ರೀತಿಯ ವೃತ್ತಿಗಾರರು ಬಂದು ರೈತನಿಗೆ ತಮ್ಮ ಪ್ರಣಾಮಗಳ ಮೂಲಕ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವ ದೃಶ್ಯ ಸಮಯೋಜಿತವಾಗಿತ್ತು.. "ಅಕ್ಕ"ದಲ್ಲಿ ಅನ್ನದಾತನ ಸ್ಮರಣೆ, ಸಮ್ಮೇಳನ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದಿತು.

ನ್ಯೂ ಜೆರ್ಸಿ ಬೃಂದಾವನ ಕನ್ನಡ ಸಂಘದ ಸದಸ್ಯರಿಂದ ನಡೆದ ಈ ಕಾರ್ಯಕ್ರಮ ಯಾವುದೇ ವೃತ್ತಿಪರ ಕಲಾವಿದರಿಗೂ ಕಡಿಮೆಯಿಲ್ಲದೆ ಈ ರೂಪಕವನ್ನು ನಿರೂಪಿಸಿ, ನೆರೆದ ಅಭಿಮಾನಿಗಳ ಭಾರೀ ಕರತಾಡನಕ್ಕೆ ಭಾಜನರಾದರು. ವಿದ್ವಾನ್ ಕೃಷ್ಣ ಪ್ರಸಾದ್ ಮುಂತಾದವರ ಪ್ರಶಂಶೆಗೆ ಪಾತ್ರರಾದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+