ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ನೋಂದಣಿ ಆರಂಭ

ಬೆಂಗಳೂರು, ಜೂನ್ 18 : 2020ನೇ ಸಾಲಿನ ಮುಂಗಾರು ಹಂಗಾಮು ಆರಂಭಗೊಂಡಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ನೋಂದಣಿಯೂ ಪ್ರಾರಂಭವಾಗಿದೆ.

Recommended Video

      Sachin Tendulkars real reason behind retirement was revealed by coach Gary Kristen|Oneindia Kannada

      ಮುಂಗಾರು ಹಂಗಾಮಿನಲ್ಲಿ ಹತ್ತಿ (ನೀರಾವರಿ) & ಹೆಸರು (ಮಳೆಯಾಶ್ರಿತ) ಬೆಳೆಗಳ ವಿಮೆಗಾಗಿ ನೋಂದಾವಣೆ ಮಾಡಲು ಜುಲೈ 15 ಕೊನೆಯ ದಿನವಾಗಿದೆ. ಭತ್ತ (ಮಳೆಯಾಶ್ರಿತ/ನೀರಾವರಿ), ಜೋಳ (ಮಳೆಯಾಶ್ರಿತ/ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ / ನೀರಾವರಿ), ಸಜ್ಜೆ (ಮಳೆಯಾಶ್ರಿತ / ನೀರಾವರಿ)ಗೆ ನೋಂದಣಿ ಮಾಡಬಹುದು.

      ಸೂರ್ಯಕಾಂತಿ (ಮಳೆಯಾಶ್ರಿತ/ನೀರಾವರಿ), ಅಲಸಂದಿ (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ತೊಗರಿ (ಮಳೆಯಾಶ್ರಿತ/ನೀರಾವರಿ), ಹುರಳಿ (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ನಲೆಗಡಲೆ (ಶೇಂಗಾ) (ಮಳೆಯಾಶ್ರಿತ/ನೀರಾವರಿ), ಹತ್ತಿ (ಮಳೆಯಾಶ್ರಿತ), ಈರುಳ್ಳಿ (ನೀರಾವರಿ/ ಮಳೆಯಾಶ್ರಿತ), ಟೊಮೆಟೊ ಬೆಳೆಗಳ ವಿಮೆಗಾಗಿ ನೋಂದಾಯಿಸಲು ಜುಲೈ 31 ಕೊನೆ ದಿನ.

      PMFBY Register Begins For Monsoon Rain Crops

      ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ಸಂಬಂಧಿಸಿದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಥವಾ ಬ್ಯಾಂಕ್ ಶಾಖೆಯಲ್ಲಿ ಬೆಳೆ ವಿಮೆ ಪ್ರೀಮಿಯಮ್ ತುಂಬಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

      ಹೆಚ್ಚಿನ ವಿವರಗಳಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಾಮಾನ್ಯ ಸೇವಾ ಕೇಂದ್ರ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ, ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+