ರೈತರ ಖಾತೆಗೆ 18000 ಕೋಟಿ ರೂ ನೇರ ಜಮಾ; ಮೋದಿ

ನವದೆಹಲಿ, ಡಿಸೆಂಬರ್ 25: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ದೇಶದ 6 ರಾಜ್ಯಗಳ 9 ಕೋಟಿ ರೈತರನ್ನು ಉದ್ದೇಶಿಸಿ ಸಂವಾದ ನಡೆಸಿದ್ದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಏಳನೇ ಕಂತಿನ ಹಣ ಬಿಡುಗಡೆ ಮಾಡಿದರು. 9 ಕೋಟಿ ರೈತರ ಖಾತೆಗೆ ನೇರವಾಗಿ 18000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಶುಕ್ರವಾರ ಸಂಸತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಮರ್ಪಿಸಿದ ನಂತರ ದೆಹಲಿಯ ಮೆಹ್ರೌಲಿಯ ಕಿಸಾನ್ ಸಮ್ಮೇಳನಕ್ಕೆ ಆಗಮಿಸಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಏಳನೇ ಕಂತಿನ ಹಣ ಬಿಡುಗಡೆ ಮಾಡಿದ ನಂತರ ರೈತರೊಂದಿಗೆ ವಿಡಿಯೋ ಸಂವಾದ ಆರಂಭಿಸಿದರು. ಮುಂದೆ ಓದಿ...

"18 ಸಾವಿರ ಕೋಟಿ ರೂ ನೇರ ರೈತರ ಖಾತೆಗೆ"

ಶುಕ್ರವಾರ, ಡಿ.25ರಂದು 18,000 ಕೋಟಿ ರೂ ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗಿದೆ. ಯಾವುದೇ ಮಧ್ಯವರ್ತಿ, ಕಮಿಷನ್ ಇಲ್ಲದೇ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ತಿಳಿಸಿದರು.

"ಬಂಗಾಳದ ರೈತರು ಯೋಜನೆಯಿಂದ ವಂಚಿತ"

ಬಂಗಾಳದ ರೈತರು ಈ ಯೋಜನೆಯಿಂದ ವಂಚಿತವಾಗಿದ್ದಾರೆ. ರೈತರಿಗೆ ಈ ಕೇಂದ್ರದ ಯೋಜನೆಗಳನ್ನು ತಲುಪಿಸದ ಏಕೈಕ ರಾಜ್ಯವೆಂದರೆ ಬಂಗಾಳ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಮತಾ ಬ್ಯಾನರ್ಜಿ ಸಿದ್ಧಾಂತಗಳು ಬಂಗಾಳವನ್ನು ನಾಶಪಡಿಸುತ್ತಿವೆ. ರೈತರ ಕುರಿತ ಆಕೆಯ ಕ್ರಮಗಳು ನನ್ನನ್ನು ನೋಯಿಸಿವೆ ಎಂದರು.

"ಪಂಜಾಬ್ ರೈತರಿಗೆ ತಪ್ಪು ಮಾಹಿತಿ ನೀಡಲಾಗಿದೆ"

ಕೃಷಿ ಕಾಯ್ದೆ ವಿಚಾರದಲ್ಲಿ ಪಂಜಾಬ್ ರೈತರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಕೇರಳದಲ್ಲಿ ಎಪಿಎಂಸಿ, ಮಂಡಿಗಳು ಇಲ್ಲ. ಅಲ್ಲಿ ಏಕೆ ಪ್ರತಿಭಟನೆ ನಡೆಯುತ್ತಿಲ್ಲ?. ಇಂದು ಎಲ್ಲಾ ರೈತರಿಗೂ ತಿಳಿದಿದೆ. ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಈ ಕಾಯ್ದೆಗಳು ರೈತರಿಗೆ ಪೂರಕವಾಗಿದೆ ಎಂದು ಹೇಳಿದರು.

 ಕೃಷಿ ಯೋಜನೆ ಪ್ರಯೋಜನಗಳ ಮಾಹಿತಿ ಪಡೆದ ಮೋದಿ

ಕೃಷಿ ಯೋಜನೆ ಪ್ರಯೋಜನಗಳ ಮಾಹಿತಿ ಪಡೆದ ಮೋದಿ

ಹಣ ಬಿಡುಗಡೆ ನಂತರ ಪ್ರಧಾನಿ ನರೇಂದ್ರ ಮೋದಿ, ಆರು ರಾಜ್ಯದ ರೈತರೊಂದಿಗೆ ಮಾತನಾಡಿದರು. ತಮ್ಮ ಕೃಷಿ ಕಾಯ್ದೆಗಳ ಕುರಿತು, ಕೃಷಿ ಯೋಜನೆಗಳ ಕುರಿತು ಮಾಹಿತಿ ಪಡೆದರು. ರೈತರಿಗೆ ಈ ಯೋಜನೆಗಳಿಂದಾದ ಪ್ರಯೋಜನಗಳ ಕುರಿತು ಮಾಹಿತಿ ಪಡೆದರು. ಒಡಿಶಾದ ರೈತ ನವೀನ್, ಮಧ್ಯಪ್ರದೇಶ ಧಾರ್ ನ ಮನೋಜ್ ಪತಿದಾರ್,ಹರಿಯಾಣದ ಫತೇಬಾದ್ ನ ರೈತ ಹರಿ ಸಿಂಗ್ ಬಿಷ್ನಾಯ್, ಹಲವು ರೈತರೊಂದಿಗೆ ಸಂವಾದ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+