ಹರಿದು ಬಂದ ತುಂಗಭದ್ರೆ ನೀರಿನಲ್ಲಿ ಕೊಚ್ಚಿಹೋದ ಭತ್ತ
ದಾವಣಗೆರೆ, ಆಗಸ್ಟ್ 13: ತುಂಗಾಭದ್ರಾ ನದಿ ಭರ್ತಿಯಾದ ಹಿನ್ನೆಲೆಯಲ್ಲಿ ನೀರನ್ನು ಹೊರಬಿಡಲಾಗಿದ್ದು, ನದಿ ಪಾತ್ರದಲ್ಲಿರುವ ಪ್ರದೇಶಗಳು, ಕೃಷಿ ಜಮೀನುಗಳು ಸಂಪೂರ್ಣ ಮುಳುಗಡೆಯಾಗಿವೆ. ಇದರಿಂದ ಇತ್ತೀಚೆಗೆ ಭತ್ತ ನಾಟಿ ಮಾಡಿದ್ದ ರೈತರು ನಷ್ಟ ಅನುಭವಿಸುವಂತಾಗಿದೆ.
ದಾವಣಗೆರೆಯ ಹರಿಹರ ಹೊನ್ನಾಳಿ, ಹರಪ್ಪನಹಳ್ಳಿ ತಾಲ್ಲೂಕಿನಲ್ಲಿ ರೈತರು ನೂರಾರು ಎಕರೆ ಭತ್ತ ನಾಟಿ ಮಾಡಿದ್ದರು. ಆದರೆ ನಾಟಿ ಮಾಡಿದ ಕೆಲವೇ ದಿನಗಳಲ್ಲಿ ತುಂಗಾಭದ್ರ ಹೊಳೆ ನೀರಿನಿಂದ ಭತ್ತ ನಾಟಿ ಮಾಡಿದ್ದ ಪ್ರದೇಶ ಸಂಪೂರ್ಣ ಮುಳುಗಡೆಯಾಗಿದೆ.
ಈಗ ಹೊಳೆಯ ನೀರಿನ ಪ್ರಮಾಣ ತಗ್ಗಿದೆ. ಆದರೆ ಭತ್ತದ ಪೈರುಗಳು ಸಂಪೂರ್ಣ ಕೊಳೆತು ನೀರಲ್ಲಿ ನೀರಾಗಿ ಹೋಗಿದೆ.

ಲಾಭ ಪಡೆವ ಆಸೆಯಿಂದ ಸಾಲ ಮಾಡಿ ಭತ್ತ ಬೆಳೆದ ರೈತರಿಗೆ ಆಕಾಶವೇ ಕಳಿಚಿ ಬಿದ್ದಂತಾಗಿದೆ. ನಾಟಿ ಮಾಡಲು ಒಂದು ಎಕರೆಗೆ 30 ರಿಂದ 40 ಸಾವಿರ ಖರ್ಚು ತಾಗುತ್ತದೆ. ಈಗ ಮತ್ತೆ ನಾಟಿ ಮಾಡಲು 30 ರಿಂದ 40 ಸಾವಿರ ಖರ್ಚು ಭರಿಸಬೇಕಾಗುತ್ತದೆ. ಪ್ರತಿ ವರ್ಷವೂ ಹೊಳೆ ನೀರು ಬಂದು ಹೀಗೆ ಫಲ ನಾಶವಾಗುತ್ತಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ.
ಕೇವಲ ಶಾಸಕರು, ಅಧಿಕಾರಿಗಳು ಬಂದು ಭೇಟಿ ನೀಡಿ ಹೋಗುತ್ತಾರೆ ವಿನಃ ಯಾವುದೇ ಪರಿಹಾರ ನೀಡಿಲ್ಲ. ಇದರಿಂದ ನಷ್ಟವನ್ನು ಅನುಭವಿಸುವ ರೈತರು ಸಾಲವನ್ನು ಮಾಡಿಕೊಳ್ಳುವುದಷ್ಟೇ ಆಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications