ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧಿ ಹಿಟ್ಟಿನ ಬೆಲೆ: ದಾಸ್ತಾನಲ್ಲಿರುವ 25ಲಕ್ಷ ಟನ್ ಗೋಧಿ ಮಾರಾಟ, FCI ನಿಂದ ಫೆ.1ಕ್ಕೆ ಇ-ಹರಾಜು ಆರಂಭ

ಗೋಧಿ ಹಿಟ್ಟಿನ ಬೆಲೆ ನಿಯಂತ್ರಣ ಸಲುವಾಗಿ ದಾಸ್ತಾನಿನಲ್ಲಿ ಗೋಧಿ ಮಾರಾಟಕ್ಕೆ ಕೇಂದ್ರ ನಿರ್ಧರಿಸಿದೆ. ಇದರ ಬೆನ್ನಲ್ಲೆ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಇ ಹರಾಜು ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದು, ಹೇಗೆ ಮತ್ತು ಯಾರಿಗೆ ಎಷ್ಟು

|
Google Oneindia Kannada News

ಬೆಂಗಳೂರು, ಜನವರಿ 29: ಗೋಧಿ ಹಿಟ್ಟಿನ ಬೆಲೆ ನಿಯಂತ್ರಣ ಸಲುವಾಗಿ ದಾಸ್ತಾನಿನ ಗೋಧಿ ಮಾರಾಟಕ್ಕೆ ಕೇಂದ್ರ ನಿರ್ಧರಿಸಿದೆ. ಇದರ ಬೆನ್ನಲ್ಲೆ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಇದೇ ಫೆಬ್ರುವರಿ 01 ರಿಂದ ಹರಾಜು ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದೆ.

ಶನಿವಾರ ಈ ಸಂಬಂಧ ಎಫ್‌ಸಿಐ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೆ ಮೀನಾ ಅವರು, ಉದ್ದೇಶಿತ ಗೋಧಿ ಪೈಕಿ ಈಗ ಒಟ್ಟು ಸುಮಾರು 25 ಲಕ್ಷ ಟನ್ ಗೋಧಿಯನ್ನು ಬೃಹತ್ ಗ್ರಾಹಕರಿಗೆ ಮಾರಾಟ ಮಾಡಲಾಗುವುದು. ಗೋಧಿ ಪ್ರತಿ ಕ್ವಿಂಟಾಲ್‌ಗೆ 2,350 ರೂ ಮೀಸಲು ಬೆಲೆ ಮತ್ತು ಸರಕು ಸಾಗಣೆ ವೆಚ್ಚದಲ್ಲಿ ವಾರದ ಇ-ಹರಾಜನ್ನು ಪ್ರಾರಂಭಿಸಲಿದ್ದೇವೆ ಎಂದು ಹೇಳಿದೆ.

ಕೇಂದ್ರದ ನಿರ್ಧಾರದಿಂದ ಗೋಧಿ ಹಿಟ್ಟಿನ ಚಿಲ್ಲರೆ ಬೆಲೆ ಇಳಿಕೆ, ಸರ್ಕಾರದ ಆ ನಿರ್ಧಾರ ಯಾವುದು?ಕೇಂದ್ರದ ನಿರ್ಧಾರದಿಂದ ಗೋಧಿ ಹಿಟ್ಟಿನ ಚಿಲ್ಲರೆ ಬೆಲೆ ಇಳಿಕೆ, ಸರ್ಕಾರದ ಆ ನಿರ್ಧಾರ ಯಾವುದು?

ಕೇಂದ್ರ ಆಹಾರ ಸಚಿವಾಲಯ ಬುಧವಾರವಷ್ಟೇ ಏರುತ್ತಿರುವ ಗೋಧಿ ಹಿಟ್ಟಿನ (ಆಟ್ಟಾ) ಬೆಲೆ ನಿಯಂತ್ರಣಕ್ಖಾಗಿ ಮುಕ್ತ ಮಾರಾಟ ಮಾರುಕಟ್ಟೆ ಯೋಜನೆ (OMSS) ಅಡಿಯಲ್ಲಿ ಈಗಾಗಲೇ ದಾಸ್ತಾನು ಮಾಡಿಕೊಂಡಿರುವ ಬಫರ್ ಸ್ಟಾಕ್‌ ಪೈಕಿ ಒಟ್ಟು 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಮಾರಾಟಕ್ಕೆ ಬಿಡಲಾಗುವುದು ಎಂದು ತಿಳಿಸಿತ್ತು.

Out Of 30 Lakh Tonnes Wheat Sold, FCI Will Sell 25 Lakh Tonnes Wheat In E-Auction From Feb 1.

ಉದ್ದೇಶಿತ 30 ಲಕ್ಷ ಟನ್‌ ಗೋಧಿ ಪೈಕಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವು ಹರಾಜು ಮೂಲಕ ಹಿಟ್ಟಿನ ಗಿರಣಿಗಾರರಂತಹ ಬೃಹತ್ ಗ್ರಾಹಕರಿಗೆ 25 ಲಕ್ಷ ಟನ್‌ ಗೋಧಿ ಮಾರಾಟ ಮಾಡಲಿದೆ. ಅದರಲ್ಲಿ 2 ಲಕ್ಷ ಟನ್‌ ಗೋಧಿ ರಾಜ್ಯಗಳು,ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ಮೂರು ಲಕ್ಷ ಟನ್‌ ಗೋಧಿಯನ್ನು ಸಂಸ್ಥೆಗಳು ಮತ್ತು ರಾಜ್ಯ-ಪಿಎಸ್‌ಯುಗಳಿಗೆ ನೀಡಲಿದೆ. ಈ ಗೋಧಿ ಪಡೆದು ನಂತರ ರಿಯಾಯಿತಿ ದರಕ್ಕೆ ಹಿಟ್ಟು ಮಾಡಿದ ಬಳಿಕ ಅದುಕೇಜಿಗೆ 29.50 ರೂ.ಗೆ ಸಿಗಲಿದೆ ಎಂದರು.

ಪ್ರತಿ ಕ್ವಿಂಟಲ್‌ಗೆ 2,350 ರೂ.ನಂತೆ ಮಾರಾಟ

ಪ್ರತಿ ಬುಧವಾರಕ್ಕೊಮ್ಮೆ ವಾರಕ್ಕೊಮ್ಮೆ ಇ-ಹರಾಜು ನಡೆಯಲಿದ್ದು, ಇದು ಫೆಬ್ರವರಿ 1ರಿಂದ ಆರಂಭವಾಗಿ ಮಾರ್ಚ್ 15 ರವರೆಗೆ ನಡೆಯಲಿದೆ. ಗೋಧಿ ಒಂದು ಕ್ವಿಂಟಲ್‌ಗೆ 2,350 ರೂ. ಮತ್ತು ಸರಕು ಸಾಗಣೆ ಶುಲ್ಕವನ್ನು ಮೀಸಲು ಬೆಲೆಯಲ್ಲಿ ನೀಡಲಾಗುವುದು. ಒಬ್ಬನೇ ಖರೀದಿದಾರನು ಗರಿಷ್ಠ 3,000 ಟನ್ ಮತ್ತು ಕನಿಷ್ಠ 10 ಟನ್ ವರೆಗೆ ಹರಾಜು ಕೂಗಬಹುದು ಎಂದು ಸೂಚಿಸಲಾಗಿದೆ. ಸಣ್ಣ ವ್ಯಾಪಾರಿಗಳು ಮತ್ತು ಹಿಟ್ಟಿನ ಗಿರಣಿದಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.

ಇ-ಹರಾಜಿಗೆ ಟೆಂಡರ್ ಪಾಲ್ಗೊಳ್ಳಲು ಸ್ಥಳೀಯ ಹಿಟ್ಟಿನ ಗಿರಣಿಗಾರರು, ವ್ಯಾಪಾರಿಗಳು ಹಾಗೂ ಗೋಧಿ ಉತ್ಪನ್ನ ತಯಾರಕರು ಭಾಗವಹಿಸಲು ಎಫ್‌ಸಿಐ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಲಾಗಿದೆ. ರಾಜ್ಯವಾರು ಮಾರಾಟ ನೋಡುವುದಾದರೆ ಮಧ್ಯಪ್ರದೇಶ ಹಾಗೂ ಪಂಜಾಬ್‌ನಲ್ಲಿ ತಲಾ 5 ಲಕ್ಷ ಟನ್, ಮಹಾರಾಷ್ಟ್ರ ರಾಜ್ಯದಲ್ಲಿ 4ಲಕ್ಷ ಟನ್, ರಾಜಸ್ತಾನ್ 2.5 ಲಕ್ಷ ಟನ್, ಬಿಹಾರ್ 1.55 ಲಕ್ಷ ಟನ್, ಪಶ್ಚಿಮ ಬಂಗಾಳ 1.25 ಲಕ್ಷ ಟನ್ ಹಾಗೂ ಹರಿಯಾಣ ರಾಜ್ಯದಲ್ಲಿ ಒಂದು ಲಕ್ಷ ಗೋಧಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

Out Of 30 Lakh Tonnes Wheat Sold, FCI Will Sell 25 Lakh Tonnes Wheat In E-Auction From Feb 1.

ಅಗತ್ಯಗಳನ್ನು ಪೂರೈಸು ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಎಫ್‌ಸಿಐ ಜನವರಿ 26 ರವರೆಗೆ ಸುಮಾರು 156.96 ಲಕ್ಷ ಟನ್ ಗೋಧಿ ದಾಸ್ತಾನು ಹೊಂದಿದೆ. ಏಪ್ರಿಲ್ 1ರಂದು ದೇಶದಲ್ಲಿ ಬಫರ್ ನಾರ್ಮ್ ಅಗತ್ಯತೆ 75 ಲಕ್ಷ ಟನ್‌ಗಿಂತ ಹೆಚ್ಚರಲಿದ್ದು, ಆಗ 96 ಲಕ್ಷ ಟನ್ ಗೋಧಿ ಬಫರ್ ಸ್ಟಾಕ್ ಇರಲಿದೆ.

ದೇಶೀಯ ಉತ್ಪಾದನೆಯಲ್ಲಿ ಸ್ವಲ್ಪ ಕುಸಿತ ಹಾಗೂ ಬೆಲೆ ಏರಿಕೆ ಪರಿಣಾಮವಾಗಿ ಕೇಂದ್ರ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿತ್ತು. ಭಾರತದ ಗೋಧಿ ಉತ್ಪಾದನೆಯು 2021-22 ಬೆಳೆ ವರ್ಷದಲ್ಲಿ (ಜುಲೈ-ಜೂನ್) ಹಿಂದಿನ ವರ್ಷದಲ್ಲಿ 109.59 ಮಿಲಿಯನ್ ಟನ್‌ಗಳಿಂದ 106.84 ಮಿಲಿಯನ್ ಟನ್‌ಗಳಿಗೆ ಕುಸಿದಿತ್ತು.

English summary
Out of 30 lakh tonnes wheat sold, FCI will sell 25 lakh tonnes of wheat in E-Auction from February 1st
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X