ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ಹರಾಜು: ಬೆಲೆ ಪ್ರತಿ ಕ್ವಿಂಟಾಲ್ ಗೆ ಎಷ್ಟೊಂದಾ?

|
Google Oneindia Kannada News

ನಾಸಿಕ್, ಡಿಸೆಂಬರ್ 03: ಭಾರತದ ಶೇ 60ರಷ್ಟು ಈರುಳ್ಳಿ ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಅನಿಯಮಿತ ಮಳೆ, ಅಕಾಲಿಕ ಮಳೆ, ಜಲ ಪ್ರವಾಹ ಎಲ್ಲವೂ ಈರುಳ್ಳಿ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿವೆ.

ಮಹಾರಾಷ್ಟ್ರದ ಕಲ್ವಾಣ್ ಎಪಿಎಂಸಿ ಹರಾಜಿನಲ್ಲಿ ಸೋಮವಾರದಂದು ಬೇಸಿಗೆ ವೈವಿಧ್ಯದ ರೋಸ್ ತಳಿ ಈರುಳ್ಳೀ ಬೆಲೆ ಪ್ರತಿ ಕ್ವಿಂಟಾಲ್ ಗೆ 11,000 ರು ಗೇರಿದೆ. ಹೋಲ್ ಸೇಲ್ ದರಲ್ಲಿ ನಾಸಿಕ್ ಜಿಲ್ಲೆಯಲ್ಲೇ ಅತ್ಯಧಿಕ ಬೆಲೆ ನೀಡಬೇಕಾಗಿದೆ ಎಂದು ನಾಸಿಕ್ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಗಳು ಹೇಳಿವೆ. ಕಳೆದ ತಿಂಗಳು ಕ್ವಿಂಟಾಲ್ ಗೆ 9,000 ರು ಗೇರಿದ್ದು ಅತ್ಯಧಿಕ ಮೊತ್ತ ಎಂದು ದಾಖಲಾಗಿತ್ತು.

ಈರುಳ್ಳಿ ದಾಸ್ತಾನು: ಇಸ್ರೇಲ್, ಬ್ರೆಜಿಲ್ ನಿಂದ ಭಾರತ ಕಲಿಯಬೇಕಿದೆ ಈರುಳ್ಳಿ ದಾಸ್ತಾನು: ಇಸ್ರೇಲ್, ಬ್ರೆಜಿಲ್ ನಿಂದ ಭಾರತ ಕಲಿಯಬೇಕಿದೆ

ಪ್ರತಿಕೂಲ ಹವಾಮಾನ, ಬೆಳೆ ಪದ್ಧತಿ ಅವಧಿ ಮೇಲಿನ ನಿಯಂತ್ರಣ ಎಲ್ಲವೂ ಸರ್ಕಾರದ ಹಿಡಿತದಲ್ಲಿಲ್ಲ, ಆದರೆ, ಕೈಲಿರುವ ಈರುಳ್ಳಿ ಉಳಿಸಿಕೊಳ್ಳುವುದು, ರಫ್ತು ಮಾಡುವುದು, ಆಮದು ಮೇಲೆ ನಿಯಂತ್ರಣ ಹೊಂದುವುದು ಸರ್ಕಾರದ ಕೈಲಿದೆ.

Onion price rises to Rs 11,000 per quintal mark

ಆಗಸ್ಟ್ ತಿಂಗಳಿನಲ್ಲಿ ಪ್ರತಿ ಕ್ವಿಂಟಾಲ್ ಗೆ ಸುಮಾರು 1,000 ರು ನಿಂದ 3,000 ರು ನಷ್ಟಿತ್ತು. ಸರಾಸರಿಯಲ್ಲಿ 2,400 ರು ಪ್ರತಿ ಕ್ವಿಂಟಾಲ್ ಗೆ ನೀಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಕ್ವಿಂಟಾಲ್ ಗೆ 3000 ರು ನಿಂದ 4000 ರು, ಸರಾಸರಿ 3200 ರು ನಷ್ಟಿತ್ತು.ಅಕ್ಟೋಬರ್ ತಿಂಗಳಲ್ಲಿ ಗರಿಷ್ಠ ಮೊತ್ತ 4500 ರು ಪ್ರತಿ ಕ್ವಿಂಟಾಲ್ ಗೆ ತೆರಬೇಕಾಗಿತ್ತು. ಸರಾಸರಿಯಲ್ಲಿ 3800 ರು ನಷ್ಟಿತ್ತು.

ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?

ಆದರೆ, ದೇಶದ ಅತಿದೊಡ್ಡ ಹೋಲ್ ಸೆಲ್ ಈರುಳ್ಳಿ ಮಾರುಕಟ್ಟೆಯಲ್ಲಿ ಕನಿಷ್ಠ 3000 ರು ಪ್ರತಿ ಕ್ವಿಂಟಾಲ್ ನಿಂದ ಗರಿಷ್ಠ 8401 ರು ನಷ್ಟಿದೆ. ಸರಾಸರಿ ಬೆಲೆ 7100 ರು ನಷ್ಟಿತ್ತು.

English summary
The wholesale price of onions of the summer variety rose to Rs 11,000 per quintal on Monday during the auction at the Kalwan Agriculture Produce Market Committee (APMC) here in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X