Onion Price Hike: ರಾಯಚೂರು ಜಿಲ್ಲೆಯ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ ಬೆಲೆ, ದರಗಳ ವಿವರ ಹೀಗಿದೆ

ರಾಯಚೂರು, ಅಕ್ಟೋಬರ್‌, 29: ಜಿಲ್ಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ₹30 ಹೆಚ್ಚಳವಾಗಿದೆ. ಕಳೆದ ವಾರ ₹40ರಿಂದ ₹50 ಇದ್ದ ಬೆಲೆ ಇದೀಗ ದಿಢೀರ್ ₹70ರಿಂದ ₹80ಕ್ಕೆ ಏರಿಕೆಯಾಗಿದೆ. ಸಣ್ಣ, ಮಧ್ಯಮ ಗಾತ್ರದ ಈರುಳ್ಳಿ ₹50ರಿಂದ 60ಕ್ಕೆ ಹಾಗೂ ದೊಡ್ಡ ಗಾತ್ರದ ಈರುಳ್ಳಿ ₹80ಕ್ಕೆ ಮಾರಾಟವಾಗುತ್ತಿವೆ.

ದೊಡ್ಡ ಗಾತ್ರದ ಈರುಳ್ಳಿ ರಾಯಚೂರು, ಸಿರವಾರ ಹಾಗೂ ತುರ್ವಿಹಾಳದಲ್ಲಿ ಪ್ರತಿ ಕೆಜಿಗೆ ₹70ರಿಂದ 80 ಇದ್ದರೆ, ದೇವದುರ್ಗದಲ್ಲಿ ₹70, ಮಾನ್ವಿಯಲ್ಲಿ ₹65 ಇದೆ. ಮಧ್ಯಮ ಗಾತ್ರದ ಈರುಳ್ಳಿ ಕವಿತಾಳ, ಸಿರವಾರ, ಮುದಗಲ್‌ನಲ್ಲಿ ₹60, ಸಣ್ಣ ಗಾತ್ರದ ಈರುಳ್ಳಿ ಹಟ್ಟಿಚಿನ್ನದಗಣಿ, ಜಾಲಹಳ್ಳಿಯಲ್ಲಿ ₹50ಕ್ಕೆ ಮಾರಾಟ ಆಗುತ್ತಿದೆ.

Onion Price Hike: Onion Price details in raichur district markets, customers are worried

"ನವರಾತ್ರಿ ಹಾಗೂ ವಿಜಯದಶಮಿಯಲ್ಲಿ ವ್ರತಾಚರಣೆಯಲ್ಲಿ ತೊಡಗಿದ್ದ ಕಾರಣ ಆಹಾರ ಸೇವನೆ ಕಡಿಮೆಯಾಗಿತ್ತು. ಹಬ್ಬ ಮುಗಿಯತ್ತಲೇ ನಾಟಿ ಕೋಳಿ ಬೆಲೆಯೂ ಏರಿದೆ. ಇದರೊಂದಿಗೆ ಮಾಂಸಾಹಾರ ಸೇವನೆಯೂ ಹೆಚ್ಚಾಗಿದೆ. ಇದುವೆ ಬೆಲೆ ಏರಿಕೆಗೆ ಕಾರಣ" ಎಂದು ವ್ಯಾಪಾರಸ್ಥರಾದ ಫಾರೂಖ್ ಹಾಗೂ ಹಣಮಂತ ಹೇಳಿದರು.

ಹೊಸ ಕೆಂಪು ಈರುಳ್ಳಿ ಬರುವವರೆಗೂ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಮುಂದುವರೆಯಲಿದೆ. ಸದ್ಯ ಬೇಸಿಗೆಗೆ ಈರುಳ್ಳಿ ಬರುತ್ತಿದ್ದು, ನಾಸಿಕದ ಲಾಸಲ್ ಗಾಂವ್ ಮಾರುಕಟ್ಟೆಯಲ್ಲಿ ಈ ಹೊಸ ಈರುಳ್ಳಿ ಕ್ವಿಂಟಲ್‌ಗೆ ₹600ರಿಂದ ₹700ಕ್ಕೆ ಮಾರಾಟ ಆಗುತ್ತಿದೆ. ಈರುಳ್ಳಿ ಬೆಳೆಯುವ ಪ್ರದೇಶವಾದ ಮನ್ಮಾಡ್, ನಿಫಾಡ್, ನಾಸಿಕ್, ಯೆವ್ಲಾ ಮತ್ತು ಚಂದವಾಡ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಿಗೂ ನಾಸಿಕ್‌ನಿಂದಲೇ ಈರುಳ್ಳಿ ಪೂರೈಕೆಯಾಗುತ್ತಿದೆ.

ಕೇಂದ್ರ ಸರ್ಕಾರ ಈರುಳ್ಳಿ ಮೇಲೆ ರಫ್ತು ನಿಷೇಧ ಹೇರಿದ ನಂತರ ರೈತರು ನಾಸಿಕನಲ್ಲಿ ಈರುಳ್ಳಿ ಮಾರುಕಟ್ಟೆಯನ್ನೇ ಬಂದ್‌ ಮಾಡಿದ್ದರು. ರಫ್ತು ನಿಷೇಧ ಮಾಡಿದ್ದರಿಂದ ಈರುಳ್ಳಿ ಬೆಲೆ ಕುಸಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ದೀಪಾವಳಿ ಹಬ್ಬ ಎರಡು ವಾರ ಬಾಕಿ ಇರುವಾಗಲೇ ಈರುಳ್ಳಿ ಬೆಲೆ ಏರಿದ್ದು, ಇದರಿಂದ ಈರುಳ್ಳಿ ಬೆಳೆಗಾರರಿಗೆ ಖುಷಿ ಉಂಟು ಮಾಡಿದರೂ ಗ್ರಾಹಕರ ನಿದ್ದೆಗೆಡಿಸಿದೆ.

ಹೂವಿನ ಕೃಷಿಯಲ್ಲಿ ಮಹಿಳೆ ಸಾಧನೆ

ಮಸ್ಕಿ ತಾಲ್ಲೂಕಿನ ನೆಲಕೊಳ ಗ್ರಾಮದ ರೈತ ಮಹಿಳೆ ನೂರ್‌ಬೀ ಮಹ್ಮದ್ ಜಾಫರ್ ಅವರು ಎಂಟು ವರ್ಷಗಳಿಂದ ಹೂವಿನ ಕೃಷಿಯಲ್ಲಿ ತೊಡಗಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಸ್ವ-ಸಹಾಯ ಗುಂಪಿನಲ್ಲಿ ₹1 ಲಕ್ಷ ಸಾಲ ಪಡೆದು ಹೂವಿನ ಕೃಷಿ ಆರಂಭಿಸಿದ ನೂರ್‌ಬೀ ಒಂದು ಎಕರೆ ಜಮೀನಿನಲ್ಲಿ ಕನಕಾಂಬರ, ದುಂಡು ಮಲ್ಲಿಗೆ ಮತ್ತು ಸುಗಂಧ ರಾಜ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಜಮೀನಿನಲ್ಲಿ ಒಂದು ಕೊಳವೆಬಾವಿ ಇದೆ. ಗುಜರಿಯಿಂದ ಖರೀದಿಸಿ ತಂದ ಹಳೇ ಪೈಪ್‌ಗಳಿಂದ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಪತಿ ಮಹ್ಮದ್ ಜಾಫರ್ ಸಹ ನೂರ್‌ಬೀಗೆ ಸಾಥ್‌ ನೀಡಿದ್ದಾರೆ.

ಬೇರು ಕೊಳೆ ರೋಗ ಬಾಧೆ ಹಿನ್ನೆಲೆಯಲ್ಲಿ ದುಂಡು ಮಲ್ಲಿಗೆಯನ್ನು ತೆಗೆದು ಹಾಕಿದ್ದು, ಪ್ರಸ್ತುತ ಪತ್ರಿನಿತ್ಯ 4 ಕೆ.ಜಿ. ಕನಕಾಂಬರ ಮತ್ತು 15 ಕೆ.ಜಿ. ಸುಗಂಧರಾಜ ಸಿಗುತ್ತಿದೆ. ಕನಕಾಂಬರ 1.ಕೆ.ಜಿ. ₹250 ಮತ್ತು ಸುಗಂಧರಾಜ 1ಕೆ.ಜಿ. ಗೆ ₹70 ರಂತೆ ಸಗಟು ವ್ಯಾಪಾರಿಗಳು ಜಮೀನಿಗೆ ಬಂದು ಖರೀದಿಸುತ್ತಾರೆ.

ತೋಟಗಾರಿಕೆ ಇಲಾಖೆಯಿಂದ ಇದುವರೆಗೂ ಯಾವುದೇ ಸಹಾಯಧನ ಪಡೆದಿಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಬೇಕಿದೆ. ಅಧಿಕಾರಿಗಳು ಸ್ಪಂದಿಸಿದರೆ ಅನುಕೂಲವಾಗುತ್ತದೆ ಎಂದು ನೆಲಕೊಳದ ಮಹ್ಮದ್ ಜಾಫರ್ ಹೇಳಿದ್ದಾರೆ.

ಇಬ್ಬರು ಮಹಿಳಾ ಕೂಲಿಕಾರರ ಸಹಾಯದೊಂದಿಗೆ ನೂರ್ ಬೀ ಬೆಳಗ್ಗೆ 10 ಗಂಟೆಗೆ ಹೂ ಬಿಡಿಸಿ ಖರೀದಿದಾರರಿಗೆ ಪೂರೈಸುತ್ತಾರೆ. ಕಟ್ಟಡ ಕಾರ್ಮಿಕ ಪತಿ ಮಹ್ಮದ್‍ ಜಾಫರ್‌ ಅವರೂ ಹೂ ಬಿಡಿಸಲು ಸಹಾಯ ಮಾಡುತ್ತಾರೆ. ಕೂಲಿಕಾರರ ಖರ್ಚು ತೆಗೆದು ನಿತ್ಯ ₹1400 ಉಳಿತಾಯವಾಗುತ್ತಿದೆ.

ಒಂದು ಕುಟುಂಬ ಸ್ವಾವಲಂಬಿಯಾಗಿ ಜೀವನ ನಡೆಸಲು ಬೇಕಾದಷ್ಟು ಆದಾಯ ಬರುತ್ತದೆ. ಬೇರೆಯವರ ಜಮೀನಿಗೆ ಹೋಗಿ ಕೂಲಿ ಕೆಲಸ ಮಾಡುವ ಬದಲಿಗೆ ನಮ್ಮ ಜಮೀನಿನಲ್ಲಿ ನಾವು ದುಡಿಯುತ್ತೇವೆ ನೂರ್‌ಬಿ ಹೇಳಿದ್ದಾರೆ. ಇನ್ನು ಬೆಂಗಳೂರಿನ ಐಐಎಚ್‌ಆರ್‌ (ಇಂಡಿಯನ್ ಇನ್ಸಿಟಿಟ್ಯೂಟ್‌ ಆಫ್‌ ಹಾರ್ಟಿಕಲ್ಚರ್‌) ಮತ್ತು ಬಾಗಲಕೋಟಿಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳಿಂದ ಮಾಹಿತಿ ಪಡೆದಿದ್ದಾಗಿ ಮಹ್ಮದ್ ಜಾಫರ್ ಹೇಳಿದರು.

ರಾಯಚೂರು ಜಿಲ್ಲೆಯಲ್ಲಿ ಕೆಲವೇ ರೈತರು ಸುಗಂಧ ರಾಜ ಬೆಳೆಯುತ್ತಿದ್ದು, ಅವರಲ್ಲಿ ನೂರ್‌ಬೀ ಮೊದಲಿಗರು. ಮೂರು ವರ್ಷ ಸತತ ಹೂವು ನೀಡುವ ಸುಗಂಧರಾಜ ಗಿಡವನ್ನು ಮೂರು ವರ್ಷಗಳ ನಂತರ ತೆಗೆದು ಹೊಸದಾಗಿ ನಾಟಿ ಮಾಡಲಾಗುತ್ತದೆ. ಆಗ ಗಿಡದ ಬೇರುಗಳನ್ನು 50 ಕೆ.ಜಿ.ಗೆ ₹2 ಸಾವಿರದಂತೆ ಮಾರಾಟ ಮಾಡಿ ಆದಾಯ ಗಳಿಸುವುದಾಗಿ ನೂರ್ ಬೀ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+