ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಆದಾಯಕ್ಕೆ ತೆರಿಗೆ ಹಾಕುವ ಆಲೋಚನೆ ಇಲ್ಲ: ಅರುಣ್ ಜೇಟ್ಲಿ

ನೀತಿ ಆಯೋಗದ ಸದಸ್ಯರೊಬ್ಬರು ಕೃಷಿ ವರಮಾನಕ್ಕೂ ಆದಾಯ ತೆರಿಗೆ ವಿಧಿಸಬಹುದು ಎಂದು ಆಡಿದ ಮಾತು ಚರ್ಚೆಗೆ ಕಾರಣವಾಗಿತ್ತು. ಅದರೆ ಅಂಥ ಯಾವ ಆಲೋಚನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ

|
Google Oneindia Kannada News

ನವದೆಹಲಿ, ಏಪ್ರಿಲ್ 26: ಕೃಷಿ ಆದಾಯದ ಮೇಲೆ ತೆರಿಗೆ ಹಾಕುವ ಯಾವ ಆಲೋಚನೆಯೂ ಸರಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ತುಂಬ ಸೂಕ್ಷ್ಮವಾದ ಈ ವಿಚಾರದ ಬಗ್ಗೆ ಈಚೆಗೆ ಭಾರೀ ಚರ್ಚೆಯಾಗುತ್ತಿತ್ತು. ಸಚಿವರ ಹೇಳಿಕೆಯಿಂದ ಸ್ಪಷ್ಟನೆ ಸಿಕ್ಕಂತಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೃಷಿ ಆದಾಯಕ್ಕೆ ತೆರಿಗೆ ವಿಧಿಸುವುದಕ್ಕೆ ಕೇಂದ್ರ ಸರಕಾರಕ್ಕೆ ಸಾಂವಿಧಾನಿಕ ಅಧಿಕಾರ ಇಲ್ಲ ಎಂದಿದ್ದಾರೆ. ನೀತಿ ಆಯೋಗದ ಸದಸ್ಯ ಬೀಬೆಕ್ ದೆಬ್ರಾಯ್ ಮಂಗಳವಾರ ನೀಡಿದ್ದ ಹೇಳಿಕೆಯೊಂದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಒಂದಿಷ್ಟು ಮಿತಿಯ ನಂತರ ಇರುವ ಕೃಷಿ ಆದಾಯಕ್ಕೆ ತೆರಿಗೆ ವಿಧಿಸಬೇಕು. ಇದರಿಂದ ತೆರಿಗೆ ಸಂಗ್ರಹದ ವ್ಯಾಪ್ತಿ ಹೆಚ್ಚುತ್ತದೆ ಎಂದು ಹೇಳಿದ್ದರು.[ಮಗಳ ಮದುವೆಗೆ ಟೀ ಮಾರೋನು ಕೊಟ್ಟಿದ್ದು 1.50 ಕೋಟಿ ವರದಕ್ಷಿಣೆ]

No Plan To Impose Any Tax On Agricultural Income, Assures Arun Jaitley

ನೀತಿ ಆಯೋಗವು ಬುಧವಾರ ಹೇಳಿಕೆ ನೀಡಿದ್ದು, ದೆಬ್ರಾಯ್ ಅವರ ಸಲಹೆಯು ಆಯೋಗದ ಅಭಿಪ್ರಾಯವಲ್ಲ. ಜತೆಗೆ ಇಂಥ ಯಾವುದೇ ವಿಚಾರವು ಏಪ್ರಿಲ್ 23ರಂದು ನಡೆದ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ತಿಳಿಸಲಾಗಿದೆ. "ಕೃಷಿ ವಲಯಕ್ಕೆ ತೆರಿಗೆ ಹಾಕಬೇಕು ಅನ್ನೋದು ಬಿಬೇಕ್ ದೆಬ್ರಾಯ್ ಅವರ ಸ್ವಂತ ಅಭಿಪ್ರಾಯವೇ ಹೊರತು ನೀತಿ ಆಯೋಗದ್ದಲ್ಲ" ಎಂದು ತಿಳಿಸಿದೆ.

English summary
The government has no plans to impose any tax on agricultural income, Finance Minister Arun Jaitley said on Wednesday putting to rest recent speculation on a politically sensitive issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X