ರೈತರ ಸಾಲಮನ್ನಾ ಸಾಧ್ಯವೇ ಇಲ್ಲ: ಮಧ್ಯಪ್ರದೇಶ ಕೃಷಿ ಸಚಿವ
ಮಧ್ಯಪ್ರದೇಶದಲ್ಲಿ 6 ರೈತರನ್ನು ಬಲಿತೆಗೆದುಕೊಂಡ ರೈತರ ಹೋರಾಟ ಇನ್ನೂ ಶಾಂತಸ್ಥಿತಿಗೆ ಮರಳಿಲ್ಲ. ಈ ನಡುವೆ ರೈತರ ಸಾಲಮನ್ನಾ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಧ್ಯಪ್ರದೇಶದ ಕೃಷಿಸಚಿವ, ಗೌರಿ ಶಂಕರ್ ಬಿಸೆನ್, ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ!
ಇಂದು (ಜೂನ್ 10) ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದರು.

ನಾವು ಈಗಾಗಲೇ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದೇವೆ. ಬಡ್ಡಿರಹಿತ ಸಾಲ ನೀಡುತ್ತಿರುವಾಗ ಸಾಲಮನ್ನಾವನ್ನೂ ಮಾಡುವುದೆಂದರೆ ಖಂಡಿತ ಸಾಧ್ಯವಿಲ್ಲ. ಇದರಿಂದ ಸರ್ಕಾರದ ಮೇಲೆ ತೀವ್ರ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.
ನಾನೆಂದಿಗೂ ಸಾಲಮನ್ನಾ ಪರವಲ್ಲ. ಅಧಿಕಾರಕ್ಕೆ ಬರುವ ಮೊದಲು ರೈತರಿಗೆ ಶೇ. 3ರ ಬಡ್ಡಿದರದಲ್ಲಿ ಸಾಲ ನೀಡುತ್ತೇವೆಂದು ಹೇಳಿದ್ದೆವು. ಅಧಿಕಾರಕಕೆ ಬಂದ ನಂತರ ಕೇವಲ ಶೇ.1ರ ಬಡ್ಡಿದರದಲ್ಲಿ ಸಾಲ ನೀಡಲು ಆರಂಭಿಸಿದೆವು. ನಂತರ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡತೊಡಗಿದೆವು.
ಆದರೆ ಇದೀಗ ಸಾಲಮನ್ನಾ ಮಾಡುವ ಬೇಡಿಕೆಯನ್ನು ಈಡೇರಿಸುವುದು ಸಾಧ್ಯವಿಲ್ಲ. ಇದರಿಂದ ಕೇವಲ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಷ್ಟೇ ಅಲ್ಲ, ರೈತರ ಮೇಳೂ ವ್ಯತಿರಿಕ್ತಪರಿಣಾಮ ಬೀರುತ್ತದೆ ಎಂದವರು ಹೇಳಿದ್ದಾರೆ.












Click it and Unblock the Notifications