'ಕೃಷಿಕರಿಗಾಗಿ ಮೋದಿ ಸರಕಾರ ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಿಲ್ಲ'
ಕೃಷಿ ಸಾಲ ಮನ್ನಾ ವಿಚಾರವಾಗಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬುಧವಾರ ಮಾತನಾಡಿ, ರೈತರ ಸಲುವಾಗಿ ಮೋದಿ ಸರಕಾರದಷ್ಟು ಬೇರೆ ಯಾವ ಸರಕಾರವೂ ಕೆಲಸ ಮಾಡಿಲ್ಲ ಎಂದಿದ್ದಾರೆ.
ನಾನು ಏನು ಹೇಳಲು ಸಾಧ್ಯ? ನೀವು ಒಪ್ಪಿ, ಬಿಡಿ ನಾನೇ ಚಾಂಪಿಯನ್ ಅನ್ನೋ ರೀತಿ ಇದು. ಸರಕಾರ ಎಲ್ಲವನ್ನೂ ಗಮನಿಸುತ್ತಾ ಕೆಲಸ ಮಾಡುತ್ತಿದೆ. ಸದ್ಯದ ಸರಕಾರ ರೈತರ ಸಲುವಾಗಿ ಮಾಡುತ್ತಿರುವಷ್ಟು ಕೆಲಸವನ್ನು ಈ ವರೆಗೆ ಬೇರೆ ಯಾವುದೇ ಸರಕಾರ ಮಾಡಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಕೃಷಿಕರ ಸಾಲ ಮನ್ನಾ ವಿಚಾರವಾಗಿ ಪ್ರಧಾನಿ ಮೋದಿ ನಿದ್ದೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರ ಎಂಬಂತೆ ಮಾತನಾಡಿರುವ ನೀತಿ ಆಯೋಗದ ಉಪಾಧ್ಯಕ್ಷ, ಯಾರೂ ಈ ವರೆಗೆ ಸ್ವಾಮಿನಾಥನ್ ವರದಿ ಶಿಫಾರಸುಗಳನ್ನು ಸ್ವೀಕರಿಸಿರಲಿಲ್ಲ. ಆದರೆ ಈ ಸರಕಾರ ಸ್ವೀಕಾರ ಮಾಡಿತು. ರೈತರಿಗೆ ನೀಡುವ ಸಾಲವನ್ನು 10.50 ಲಕ್ಷ ಕೋಟಿಗೆ ಏರಿಸಿತು ಎಂದಿದ್ದಾರೆ.

ರಾಹುಲ್ ಗಾಂಧಿ ಅವರ ಸರಕಾರಗಳು ಅವುಗಳ ಕೆಲಸ ಮಾಡಲಿ. ಇತರರು ತಮ್ಮ ಕೆಲಸ ಮಾಡುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಏರಿದ ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಲಾಗಿದೆ. ರಾಜಸ್ತಾನದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.












Click it and Unblock the Notifications