ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಶಿಕ್ಷಣ ಪಠ್ಯದಲ್ಲಿ ನೈಸರ್ಗಿಕ ಕೃಷಿ ವಿಧಾನ ಸೇರ್ಪಡೆ ಶೀಘ್ರ

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಕೇಂದ್ರ ಸರ್ಕಾರವು ಕೃಷಿ ಶಿಕ್ಷಣದ ಪಠ್ಯಕ್ರಮದಲ್ಲಿ ನೈಸರ್ಗಿಕ ಜಾರಿಗೊಳಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾರ ತಿಳಿಸಿದರು.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹಮ್ಮಿಕೊಂಡಿದ್ದ 'ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗಾರ'ದಲ್ಲಿ ಮಾತನಾಡಿದ ಅವರು,

ಮಂಡ್ಯದ ವಿ. ಸಿ. ಫಾರಂನಲ್ಲಿ ಡಿ. 2, 3ರಂದು ಕೃಷಿ ಮೇಳ ಮಂಡ್ಯದ ವಿ. ಸಿ. ಫಾರಂನಲ್ಲಿ ಡಿ. 2, 3ರಂದು ಕೃಷಿ ಮೇಳ

ಕಡಿಮೆ ವೆಚ್ಚದ ನೈಸರ್ಗಿಕ ಕೃಷಿಯು ಇಂದಿನ ದಿನಮಾನಗಳಲ್ಲಿ ಅಗತ್ಯವಾಗಿದೆ. ಅಧಿಕ ಆದಾಯ ನೀಡಬಹುದಾದ ಈ ನೈಸರ್ಗಿಕ ಕೃಷಿ ಇದೀಗ ಕೃಷಿ ಶಿಕ್ಷಣದ ಭಾಗವಾಗಲಿದೆ. ಕೃಷಿ ಶಿಕ್ಷಣ ಪಠ್ಯಕ್ರಮದಲ್ಲಿ ನೈಸರ್ಗಿಕ ಕೃಷಿ ವಿಧಾನಗಳನ್ನು ಶೀಘ್ರದಲ್ಲೇ ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ವಿವರಿಸಿದರು.

Natural Agriculture Is Will Be Parts Of Agriculture Education Soon Narendra Singh Tomar Said

ಭಾರತದ ಜನಸಂಖ್ಯೆಗೆ ಹೋಲಿಸಿದರೆ ಆಹಾರ ಧಾನ್ಯಗಳ ಕೊರತೆಯನ್ನು ಹಲವು ಭಾರಿ ಎದುಸಿದ್ದೇವೆ. ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ.

ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಭಾರತ ಅಧಿಕ ಆಹಾರ ಧಾನ್ಯಗಳನ್ನು ಬೆಳೆಯುತ್ತಿದೆ ಎಂದರು.

ಆರೋಗ್ಯಕರ ಮನಸ್ಸು, ದೇಹಕ್ಕಾಗಿ ಉತ್ತರ ಆರೋಗ್ಯಕರ ಆಹಾರ ಸೇವಿಸಬೇಕು. ಅದಕ್ಕಾಗಿ ನಾವು ಆರೋಗ್ಯಕರ ಕೃಷಿ ಪದ್ಧತಿ ಮತ್ತು ಆರೋಗ್ಯಕರ ಮಾನವ ತತ್ವಗಳನ್ನು ಅನುಸರಿಸಬೇಕು. ಅದಕ್ಕಾಗಿ ನೈಸರ್ಗಿಕ ಕೃಷಿಯತ್ತ ಸಾಗಬೇಕು. ಪರಿಪೂರ್ಣತೆಯ ಕೃಷಿ ಎಂದರೆ ಅದು ನೈಸರ್ಗಿಕ ಕೃಷಿ ಎಂದು ಅದರ ಮಹತ್ವ ತಿಳಿಸಿದರು.

ಕೃಷಿಯಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದು

ಯಾವುದೇ ಕೃಷಿಯಾಗಲಿ ಅದರಲ್ಲಿ ಜಾನುವಾರುಗಳ ಕೊಡುಗೆ ಪ್ರಮುಖವಾದದ್ದು. ಅದರಲ್ಲೂ ರೈತನಿಗೆ ನೈಸರ್ಗಿಕ ಕೃಷಿಯಲ್ಲಿ ದುಡಿಯಲು ಸ್ಥಳೀಯ ಗೋವಿನ ಸಗಣಿ ಮತ್ತು ಗೋಮೂತ್ರ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಭಾರತದ ರೈತರು ನೈಸರ್ಗಿಕ ಕೃಷಿ ಅಳವಡಿಸಿಕೊಂಡರೆ, ರಸ್ತೆಗಳಲ್ಲಿ ಕಾಣಸಿಗುವ ಹಸುಗಳ ಸಮರ್ಪಕವಾಗಿ ಬಳಕೆ ಆಗುತ್ತದೆ. ಗುಜರಾತ್‌ನ ಡ್ಯಾಂಗ್ ಜಿಲ್ಲೆಯಲ್ಲಿ ಶೇ.100ರಷ್ಟು ನೈಸರ್ಗಿಕ ಕೃಷಿ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶದ ರೈತರು ನೈಸರ್ಗಿಕ ಕೃಷಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ತೂಮರ್ ಹೇಳಿದರು.

Natural Agriculture Is Will Be Parts Of Agriculture Education Soon Narendra Singh Tomar Said

ಭಾರತದಲ್ಲಿ ಕೃಷಿ ತನ್ನದೇ ಆದ ಮಹತ್ವ ಹೊಂದಿದೆ. ರಾಸಾಯನಿಕ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ.

ಮಣ್ಣು ಸ್ನೇಹಿ ಬ್ಯಾಕ್ಟೀರಿಯಾಗಳು ಸಾಯುತ್ತಿವೆ. 25 ವರ್ಷಗಳ ನಂತರ ದೇಶ ಎದುರಿಸಲಿರುವ ಬಿಕ್ಕಟ್ಟಿನಿಂದ ಪಾರುಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿಯವರು ನೈಸರ್ಗಿಕ ಕೃಷಿ ಪದ್ಧತಿಗೆ ಮರು ಚಾಲನೆ ನೀಡಿದ್ದಾರೆ. ಆ ಮೂಲಕ ರೈತರ ಆದಾಯ ಹೆಚ್ಚಳದತ್ತ ಸರ್ಕಾರ ಗಮನಹರಿಸಿದೆ ಎಂದರು.

English summary
Natural Agriculture is will be Parts of Agriculture Education soon Union agriculture Minister Narendra Sing Tomer said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X