ಕರ್ನಾಟಕದಲ್ಲಿ 'ಸೀದಾ ರೂಪಾಯಿ' ಸರ್ಕಾರವಿದೆ : ಮೋದಿ

ದಾವಣಗೆರೆ, ಫೆಬ್ರವರಿ 27 : ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ರೈತ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ 'ರೈತಬಂಧು' ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿದರು. ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಒಂದೇ ತಿಂಗಳ ಅಂತರದಲ್ಲಿ ಮೋದಿ 3ನೇ ಬಾರಿಗೆ ಭೇಟಿ ನೀಡಿದ್ದಾರೆ. ರೈತ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆಗಿದ್ದರು. ಮಂಗಳವಾರ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದು, ಭರ್ಜರಿಯಾಗಿ ಪ್ರಚಾರ ನಡೆಸುತ್ತಿವೆ.

ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರವಿಲ್ಲ 'ಸೀದಾ ರೂಪಾಯಿ' ಸರ್ಕಾರವಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಬಾರದು

Narendra Modi address farmers rally in Davanagere

Feb 27, 2018, 5:03 pm IST

ಈ ಬಾರಿ ಬಿಜೆಪಿ ಸರ್ಕಾರ..ಬನ್ನಿ ಬಿಜೆಪಿ...ಬನ್ನಿ ಬಿಜೆಪಿ. ಕರ್ನಾಟಕದ ಜನರಿಗೆ ಅನಂತ ಅನಂತ ವಂದನೆಗಳು ಎಂದು ಮೋದಿ ಭಾಷಣ ಮುಗಿಸಿದರು.
Feb 27, 2018, 5:01 pm IST

ರೈತ ನಾಯಕನ ಜನ್ಮದಿನ ಇಂದು. ನಾವು ಒಂದು ಸಂಕಲ್ಪ ಮಾಡೋಣ. ಕರ್ನಾಟಕದ ಕಲ್ಯಾಣ ಮಾಡುತ್ತೇವೆ ಎಂದು ನಾವು ಸಂಕಲ್ಪ ಮಾಡೋಣ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರವನ್ನು ರಚನೆ ಮಾಡೋಣ
Feb 27, 2018, 5:00 pm IST

ಸಚಿವರ ಮನೆಗಳ ಮೇಲೆ ದಾಳಿ ನಡೆದರೆ ಕಂತೆ-ಕಂತೆ ನೋಟುಗಳು ಸಿಗುತ್ತವೆ. ಈ ಹಣ ಎಲ್ಲಿಂದ ಬಂತು?. ಕರ್ನಾಟಕ ಸರ್ಕಾರವನ್ನುಒಂದು ನಿಮಿಷವೂ ಅಧಿಕಾರದಲ್ಲಿರಲು ಬಿಡಬಾರದು
Feb 27, 2018, 4:58 pm IST

ಸರ್ವ ಶಿಕ್ಷಣ ಅಭಿಮಾನ, ರಾಷ್ಟ್ರೀಯ ಸ್ವಾಥ್ಯ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸಾಕಷ್ಟು ಅನುದಾನ ನೀಡಿದೆ.
Feb 27, 2018, 4:55 pm IST

ಕೇಂದ್ರ ಸರ್ಕಾರ ನೀಡಿದರೂ 500 ಕೋಟಿ ರೂ.ಗಳನ್ನು ಖರ್ಚು ಮಾಡದೇ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಜನರ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ
Feb 27, 2018, 4:54 pm IST

ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದೆ. ಆದರೆ, ಕಮೀಷನ್ ಪಡೆಯುವಾಗ ಯಾವುದೇ ಯೋಜನೆ ಜನರನ್ನು ತಲುಪುವುದಿಲ್ಲ. ಈಗಲೂ ಸರ್ಕಾರ ಕೇಂದ್ರ ಕೊಟ್ಟ ಅನುದಾನ ಖರ್ಚು ಆಗಿಲ್ಲ
Feb 27, 2018, 4:52 pm IST

ದಾವಣಗೆರೆ- ಹಾವೇರಿ, ದಾವಣಗೆರೆ-ಚಿತ್ರದುರ್ಗ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿ ಮಾಡುವ ಕೆಲಸ ಆರಂಭವಾಗಿದೆ
Feb 27, 2018, 4:50 pm IST

ಸಿದಾ ರೂಪಾಯಿ ಸರ್ಕಾರ ಕರ್ನಾಟಕಕ್ಕೆ ಬೇಡ. ನಮಗೆ ಪಾರದರ್ಶಕವಾದ ಸರ್ಕಾರ ಬೇಕು. ಕಾಂಗ್ರೆಸ್ ಸರ್ಕಾರ ನಮಗೆ ಬೇಡ
Feb 27, 2018, 4:49 pm IST

ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕದಲ್ಲಿದೆ. ಅದು ಸೀದಾ ರೂಪಾಯಿ ವಾಲಾ ಸರ್ಕಾರ, ಎಲ್ಲಾ ಕೆಲಸಗಳಿಗೆ ಹಣ ಪಡೆಯಲಾಗುತ್ತದೆ.
Feb 27, 2018, 4:47 pm IST

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕರ್ನಾಟಕಕ್ಕೆ 11 ಸಾವಿರ ಕೋಟಿ ರೂ. ನೀಡಿದ್ದೇವೆ. ಕೃಷಿಕರಿಗೆ ಬೆಂಬಲ ಬೆಲೆ ನೀಡಲು ಎಂಎಸ್‌ಪಿ ಜಾರಿಗೆ ತರುತ್ತಿದ್ದೇವೆ
Feb 27, 2018, 4:45 pm IST

ಕಾಂಗ್ರೆಸ್ ಪಕ್ಷದ ನಾಯಕರಿಗೆ ನಾನು ಕೇಳುವೆ. 60 ವರ್ಷಗಳಲ್ಲಿ ರೈತರ ಬಗ್ಗೆ ನೀವು ಏಕೆ ಚಿಂತನೆ ಮಾಡಲಿಲ್ಲ. ಅಧಿಕಾರಕ್ಕೆ ಬಂದ 18 ತಿಂಗಳಿನಲ್ಲಿ ನಾವು ರೈತರ ಹಿತದ ಬಗ್ಗೆ ಆಲೋಚನೆ ನಡೆಸಿ ಕಾರ್ಯಕ್ರಮ ಜಾರಿಗೆ ತಂದೆವು
Feb 27, 2018, 4:44 pm IST

ಕೃಷಿಕರ ಆದಾಯವನ್ನು ಎರಡು ಪಟ್ಟು ಹೆಚ್ಚು ಮಾಡಲು ಸರ್ಕಾರ ಯೋಜನೆ ರೂಪಿಸಿದೆ. 2022ರಲ್ಲಿ ಇದನ್ನು ಮಾಡಿ ತೋರಿಸುತ್ತೇವೆ. ಅದಕ್ಕಾಗಿ ಮಣ್ಣಿನ ಕಾರ್ಡ್ ನೀಡುವ ಯೋಜನೆ ಆರಂಭಿಸಿದ್ದೇವೆ
Feb 27, 2018, 4:43 pm IST

ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಬೆಳೆ ನಷ್ಟವಾದರೂ, ಮಳೆ ಬಾರದಿದ್ದರೂ ರೈತರಿಗೆ ನೆರವಾಗುವಂತಹ ಯೋಜನೆ ಇದಾಗಿದೆ.
Feb 27, 2018, 4:41 pm IST

ದೇಶದಲ್ಲಿ ರೈತರಿಗೆ ಸಾಕಷ್ಟು ಕಷ್ಟವಿದೆ. ಹೆಚ್ಚಿನ ಬೆಳೆ, ಕಡಿಮೆ ಬೆಳೆ ಬಂದರೂ ಕಷ್ಟ. ಮಳೆ ಕಡಿಮೆ, ಹೆಚ್ಚು ಬಂದರೂ ಕಷ್ಟ
Feb 27, 2018, 4:40 pm IST

ಕಾಂಗ್ರೆಸ್ ಸಂಸ್ಕೃತಿಯಲ್ಲಿ ಒಳ್ಳೆಯದು ಕಾಣುವುದಿಲ್ಲ. ಆದ್ದರಿಂದ, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಕಾಂಗ್ರೆಸ್ ಹಠಾವೋ ಎಂಬ ಕೂಗು ಕೇಳುತ್ತಿದೆ.
Feb 27, 2018, 4:39 pm IST

ಕರ್ನಾಟದ ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷವನ್ನು ತೊಲಗಿಸಲು ಉತ್ಸಾಹದಿಂದ ಇದ್ದಾರೆ. ನಮ್ಮ ಈಗಿನ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ
Feb 27, 2018, 4:38 pm IST

ಕರ್ನಾಟಕದ ಮಣ್ಣು ಸಹ ಕಾಂಗ್ರೆಸ್ ಅನ್ನು ಉಳಿಸಲು ಸಾಧ್ಯವಿಲ್ಲ. ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗಲಿದೆ
Feb 27, 2018, 4:38 pm IST

ರೈತ ಬಂದು ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮುಷ್ಠಿಅಕ್ಕಿ ಅಭಿಯಾನವನ್ನು ಆರಂಭಿಸಿದ್ದೀರಿ
Feb 27, 2018, 4:36 pm IST

ಸರ್ದಾರ್ ವಲ್ಲಭವಾಯಿ ಪಟೇಲ್ ಪ್ರತಿಮೆಗಾಗಿ ರೈತರಿಂದ ಕಬ್ಬಿಣ ತುಣುಕು ಸಂಗ್ರಹಿಸಲಾಗಿದೆ. ಅದನ್ನು ಏಕತೆಯ ಮೂರ್ತಿ ಮಾಡಲು ಉಪಯೋಗಿಸಲಾಗಿದೆ.
Feb 27, 2018, 4:35 pm IST

ಕರ್ನಾಟಕ ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ನಮನ ಸಲ್ಲಿಸಿದ ಮೋದಿ, ಪಕ್ಷದ ತಳ ಮಟ್ಟದ ಕಾರ್ಯಕರ್ತರಿಗೂ ನನ್ನ ನಮನ ಎಂದ ಮೋದಿ
Feb 27, 2018, 4:33 pm IST

ಇಂದು ನಮ್ಮ ನಾಯಕ ಯಡಿಯೂರಪ್ಪ ಅವರ ಜನ್ಮದಿನದಲ್ಲಿ ಪಾಲ್ಗೊಂಡು ಅವರನ್ನು ಸನ್ಮಾನಿಸುವ ಅವಕಾಶ ಸಿಕ್ಕಿದೆ
Feb 27, 2018, 4:32 pm IST

ಕರ್ನಾಟಕ ರೈತರ ಆಶೀರ್ವಾದ ಪಡೆಯಲು ಇಂದು ನನಗೆ ಅವಕಾಶ ಸಿಕ್ಕಿದೆ.
Feb 27, 2018, 4:30 pm IST

ಸಾಗರೋಪಾದಿಯಲ್ಲಿ ಸೇರಿರುವ ಜನರೇ ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಮೋದಿ ಭಾಷಣ ಆರಂಭಿಸಿದರು
Feb 27, 2018, 4:30 pm IST

ನರೇಂದ್ರ ಮೋದಿ ಭಾಷಣ ಆರಂಭ
Feb 27, 2018, 4:29 pm IST

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದವನ್ನು ಬಗೆಹರಿಸಲಾಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
Feb 27, 2018, 4:24 pm IST

ನನಗೆ 60 ವರ್ಷವಾದಾಗ ಆಶೀರ್ವಾದ ಮಾಡಲು ಅಟಲ್ ಬಿಹಾರಿ ವಾಜಪೇಯಿ ಬಂದಿದ್ದರು. ನನ್ನ ಸೌಭಾಗ್ಯ 75 ವರ್ಷವಾದಾಗ ನರೇಂದ್ರ ಮೋದಿ ಅವರು ಬಂದಿದ್ದಾರೆ
Feb 27, 2018, 4:22 pm IST

ನನ್ನ ಜೀವನವನ್ನು ಇನ್ನು ಮುಂದೆ ನೇಗಿಲ ಯೋಗಿಯ ಕಲ್ಯಾಣಕ್ಕಾಗಿ ಮುಡುಪಾಗಿಡುವೆ : ಯಡಿಯೂರಪ್ಪ ಹೇಳಿಕೆ
Feb 27, 2018, 4:22 pm IST

ಸಮಾವೇಶ ಉದ್ದೇಶಿಸಿ ಬಿ.ಎಸ್.ಯಡಿಯೂರಪ್ಪ ಅವರ ಭಾಷಣ
Feb 27, 2018, 4:16 pm IST

ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
Feb 27, 2018, 4:07 pm IST

ಕೇಂದ್ರ ಸಚಿವ ಅನಂತ್ ಕುಮಾರ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಜಿ.ಎಂ.ಸಿದ್ದೇಶ್ವರ, ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+