ರೈತರ ಸಮಸ್ಯೆ ಬಗ್ಗೆ ಮೋದಿ ಮನ್ ಕೀ ಬಾತ್

ನವದೆಹಲಿ, ಮಾ. 22 : 'ಭೂ ಸ್ವಾಧೀನ ತಿದ್ದುಪಡಿ ವಿಧೇಯಕ ರೈತರ ವಿರೋಧಿಯಲ್ಲ, ಇದನ್ನು ಜಾರಿಗೆ ತರುವುದು ಬಿಡುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ತಮ್ಮ ರೆಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್' ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಕೇಂದ್ರ ಸರ್ಕಾರ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದೆ ಎಂದು ಘೋಷಿಸಿದರು.

ರೈತ ವಿರೋಧ ವಿಧೇಯಕವಲ್ಲ : ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಬಹುಚರ್ಚಿತ ಭೂ ಸ್ವಾಧೀನ ತಿದ್ದುಪಡಿ ವಿಧೇಯಕದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭೂ ಸ್ವಾಧೀನ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರುತ್ತಿರುವುದು ರೈತರ ಹಿತರಕ್ಷಣೆಗಾಗಿ, ಇದು ರೈತರ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

Narendra Modi

ಮೋದಿ ಮಾತಿನ ಮುಖ್ಯಾಂಶಗಳು ಇಲ್ಲಿವೆ

* ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರುವುದು ಬಿಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ. [ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡದಿದ್ದರೆ ಹೋರಾಟ]

* ರೈತರ ಒಪ್ಪಿಗೆ ಪಡೆಯದೆ ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಕೈಗಾರಿಕೆಗಳ ಸ್ಥಾಪನೆಯಂತಹ ಉದ್ದೇಶಕ್ಕಾಗಿ ಭೂಮಿ ಪಡೆಯಲು ಪ್ರತ್ಯೇಕ ನಿಯಮಾವಳಿ ರೂಪಿಸಲಾಗುತ್ತದೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]

* ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಧಾವಿಸುವಂತೆ ನಾನು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುತ್ತೇನೆ. ಕೇಂದ್ರ ಸರ್ಕಾರ ರೈತರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಸಿದ್ಧವಿದೆ.

* ಪ್ರವಾಹ, ಪ್ರಕೃತಿ ವಿಕೋಪ ಮುಂತಾದ ಸಂದರ್ಭಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಸಚಿವರು, ಶಾಸಕರು, ಸಂಸದರು ಆಯಾ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ನೆರವು ನೀಡಬೇಕು.

* ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲಾ ರಾಜ್ಯದ ರೈತರನ್ನು ತಲುಪಬೇಕು. ಜನಪ್ರತಿನಿಧಿಗಳು ರೈತರಿಗೆ ಯೋಜನೆಗಳನ್ನು ತಲುಪಿಸಲು ಸಹಕಾರ ನೀಡಬೇಕು.

* ಹಿಂದಿನ ಸರ್ಕಾರ ಏನು ಮಾಡಿತು ಎಂಬುದು ಮುಖ್ಯವಲ್ಲ. ನಮ್ಮ ಸರ್ಕಾರ ರೈತರಿಗೆ ಸಾಕಷ್ಟು ಪರಿಹಾರ ನೀಡುತ್ತದೆ.

* ರೈತರಿಗೆ ಮಣ್ಣಿನ ಆರೋಗ್ಯದ ಕಾರ್ಡ್‌ ನೀಡಲಾಗುತ್ತದೆ. ನಮ್ಮ ಆರೋಗ್ಯದಷ್ಟು ರೈತರ ಜಮೀನಿನ ಮಣ್ಣಿನ ಆರೋಗ್ಯವೂ ಮುಖ್ಯವಾದದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+