ಮನದಲ್ಲೇ ಮಾತಾಡಿಸುವ ನಾಡಿನ ಘಟನೆಗಳ ಚಿತ್ರ ವೇದಿಕೆ

ಬೆಂಗಳೂರು, ಸೆಪ್ಟೆಂಬರ್, 08 : ಇಡೀ ಪ್ರಪಂಚವನ್ನು ವಾಸ್ತವತೆಯ ನೆಲೆಯಲ್ಲಿ ಅವಲೋಕಿಸುತ್ತಾ ಸಾಗಿದಾಗ ಹಲವಾರು ಸತ್ಯಾಸತ್ಯಗಳು ಕಣ್ಣಿಗೆ ಗೋಚರಿಸುತ್ತದೆ. ಇದರಿಂದ ಕೆಲವು ಘಟನೆಗಳ ಕುರಿತಾಗಿ ಸೂಕ್ಷ್ಮ ಅರಿವು ಬೆಳೆಯ ತೊಡಗುತ್ತದೆ. ಬಳಿಕ ಮನಸ್ಸುಗಳು ಆ ವಿಚಾರದ ಬಗ್ಗೆ ಆಳವಾಗಿ ಚಿಂತಿಸಲು ಪ್ರಾರಂಭಿಸುತ್ತದೆ.

ನಮ್ಮ ನಡುವೆ ನಡೆಯುವ ಹಲವಾರು ಘಟನೆಗಳು ಕೆಲವೊಮ್ಮೆ ಸಂತೋಷ ನೀಡಬಹುದು ಅಥವಾ ಮಾನವೀಯತೆಯನ್ನು ಎಚ್ಚರಿಸಬಹುದು, ಇಲ್ಲವಾದಲ್ಲಿ ಆ ವ್ಯವಸ್ಥೆಯ ಕುರಿತಾಗಿ ಅಸಹ್ಯ ಮೂಡುವಂತೆ ಮಾಡಿ ಮನದಲ್ಲಿ ಧಿಕ್ಕಾರದ ಕಿಚ್ಚು ಹೊತ್ತಿಸಲೂಬಹುದು.[ಮಹಿಳೆಯರ ಭಾವಯಾನ ತೆರೆದಿಟ್ಟ ಸುದ್ದಿ ಚಿತ್ರಗಳು]

ಈ ಎಲ್ಲಾ ಸಂದರ್ಭಗಳು, ಪರಿಸ್ಥಿತಿಗಳು ನಮ್ಮ ಮುಂದಿನ ಬದುಕಿನ ತಿರುವಿಗೂ ನಾಂದಿಯಾದರೆ ಅದರಲ್ಲಿ ಅಚ್ಚರಿ ಇರಲಾರದು. ಇವೆಲ್ಲಾವನ್ನು ಸಾಧ್ಯವಾಗಿಸುವುದು ನಮ್ಮ ಸುತ್ತಮುತ್ತ ನಡೆಯುವ ವಿವಿಧ ಘಟನೆಗಳು ಮತ್ತು ಮತ್ತೊಂದು ಛಾಯಾಚಿತ್ರಗಳು.

ನಾಡಿನ ಹಲವಾರು ಘಟನೆಗಳನ್ನು ಸೆರೆಹಿಡಿರುವ ಛಾಯಾಚಿತ್ರಗಳು ಯಾವ ಭಾವವನ್ನು ನಿಮ್ಮಲ್ಲಿ ಮೂಡಿಸುತ್ತದೆ ಎಂದು ನೀವೇ ಈ ಛಾಯಾಚಿತ್ರಗಳನ್ನು ನೋಡಿ ಅನುಭವಿಸಿ. [ ಚಿತ್ರ: ಪಿಟಿಐ]

ನಾವು ಸರ್ಕಾರ ಸ್ವಚ್ಛಗೊಳಿಸುತ್ತೇವೆ

ನಾವು ಸರ್ಕಾರ ಸ್ವಚ್ಛಗೊಳಿಸುತ್ತೇವೆ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಅಲ್ಲಿ ಇಲ್ಲಿ ಸಂಭವಿಸುತ್ತಲೇ ಇದೆ. ಇನ್ನೊಂದೆಡೆ ಮಳೆ ಬಾರದೆ ಭೂಮಿ ಆಕಾಶಕ್ಕೆ ಬಾಯ್ದೆರೆದು ನಿಂತಿದೆ. ಇಂತಹ ಸಂದರ್ಭದಲ್ಲಿ ರೈತ ಮಹಿಳೆಯರು ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಿದ್ದಾರೆ. ಇವರ ಬೇಡಿಕೆಗಳಿ ಮೀನಾ ಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ಪರಕೆ ಹಿಡಿದು ಧಿಕ್ಕಾರದ ಧ್ವನಿ ಎತ್ತಿದ್ದಾರೆ.

ಮೋದಿಯೊಂದಿಗೆ ಒಂದೇ ಒಂದು ಫೋಟೋ

ಮೋದಿಯೊಂದಿಗೆ ಒಂದೇ ಒಂದು ಫೋಟೋ

ಯುನೈಟೆಡ್ ಸ್ಟೇಟ್ಸ್ ನ ನ್ಯಾಷನಲ್ ಅಕಾಡೆಮಿ ಆಫ್ ರೆಕಾರ್ಡಿಂಗ್ ಆರ್ಟ್ಸ್ ಆಂಡ್ ಸೈನ್ಸಸ್ ಸಂಸ್ಥೆಯು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಗೀತಗಾರರಿಗೆ ಗ್ರಾಮ್ಯ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿ ಪಡೆದ ಭಾರತೀಯ ಮೂಲದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜನಾಕಾರ ರಿಕ್ಕಿ ಕೇಜ್ ಈ ಬಾರಿ ನಡೆದ 57ನೇ ವಾರ್ಷಿಕ ಸಮಾರಂಭದಲ್ಲಿ ಅವರು ಪ್ರಶಸ್ತಿ ಪಡೆದಿದ್ದಾರೆ. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಾಗ ಹೀಗೆ ಒಂದು ನಗೆ ಬೀರಿದರು.

ಎಲ್ಲಾ ಕ್ಯಾಮಾರಗಳು ಆನ್

ಎಲ್ಲಾ ಕ್ಯಾಮಾರಗಳು ಆನ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಮುಖಂಡರೊಂದಿಗೆ ಸಭೆ ನಡೆಸಲು ದೆಹಲಿಗೆ ಆಗಮಿಸಿದ್ದ ವೇಳೆ ಅವರನ್ನು ತಮ್ಮ ವೀಡಿಯೋ ಕ್ಯಾಮಾರದಲ್ಲಿ ಸೆರೆಹಿಡಿಯುತ್ತಾ ನಿಂತಿರುವ ಮಾಧ್ಯಮ ಮಿತ್ರರು. ಕಾಯಕವೇ ಕೈಲಾಸ..

ಪೊಲೀಸರಾದರು ಸಾರಥಿಗಳು

ಪೊಲೀಸರಾದರು ಸಾರಥಿಗಳು

ಬೆಂಗಳೂರಿನಲ್ಲಿ ರೈತರು ತಮ್ಮ ವಿವಿಧ ಬೇಡಿಕೆ ಕುರಿತಾಗಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಕಾರ್ಯವನ್ನು ಖಂಡಿಸಿ, ಅವರ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತ ಮುಖಂಡರನ್ನು ಪೊಲೀಸರೇ ಹೊತ್ತ್ಯೋಯ್ದರು. ಅವರೇ ಸಾರಥಿಗಳಾದರು.

ಹುಟ್ಟು ಹಬ್ಬದ ಶುಭಾಶಯಗಳು

ಹುಟ್ಟು ಹಬ್ಬದ ಶುಭಾಶಯಗಳು

ಭಾರತದ ಸಾಹಿತಿ, ಸಂಗೀತಗಾರ, ಕವಿ ಹಾಗೂ ಸಿನಿಮಾ ನಿರ್ದೇಶಕರಾದ ಭೂಪಾನ್ ಹಜಾರಿಕಾ ಅವರು ಅಸ್ಸಾಮಿ ಭಾಷೆಯಲ್ಲಿ ಹಲವಾರು ಹಾಡುಗಳನ್ನು ಬರೆದಿದ್ದಾರೆ. ಇಂದು ಇವರ 89 ನೇ ಹುಟ್ಟುಹಬ್ಬದ ಪ್ರಯುಕ್ತ ಗುವಾಹಟಿಯ ಪ್ರಶಾಂತಿ ಉದ್ಯಾನದಲ್ಲಿರುವ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗಣ್ಯರು ಶುಭಾಶಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+