ಮಂಗಳೂರು : ಶನಿವಾರದಿಂದ ಫಲಪುಷ್ಪ ಪ್ರದರ್ಶನ

ಮಂಗಳೂರು, ಫೆ.13 : ಮಂಗಳೂರಿನ ಕದ್ರಿ ಉದ್ಯಾನವನ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ. ಮಂಗಳ ಯಾನವನ್ನು ಪ್ರತಿಬಿಂಬಿಸುವ ಮಾದರಿಯನ್ನು ನಾನಾ ಬಣ್ಣದ 80 ಸಾವಿರ ಡಚ್ ಗುಲಾಬಿ ಹಾಗೂ ಇತರೆ ಲಿಲ್ಲಿ ಹೂಗಳಿಂದ ತಯಾರಿಸಲಾಗಿದ್ದು, ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ಸಿರಿ ತೋಟಗಾರಿಕೆ ಸಂಘದ ವತಿಯಿಂದ ಕದ್ರಿ ಉದ್ಯಾನವನದಲ್ಲಿ ಫೆ.14ರಿಂದ 17ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತರಕಾರಿ ಕೆತ್ತನೆ, ಬೋನ್ಸಾಯಿ, ಆಂಥೋರಿಯಂ ಪ್ರದರ್ಶನ, ತೋಟಗಾರಿಕೆ ಇಲಾಖೆಯಿಂದ ಬೆಳೆದ ತರಹೇವಾರಿ ತರಕಾರಿ, ಹೂಗಿಡಗಳು ಪ್ರದರ್ಶನವೂ ಇರುತ್ತದೆ. [ಲಾಲ್ ಭಾಗ್ ಪ್ಲವರ್ ಶೋ ಚಿತ್ರಗಳು]

Kadri Park

ಫೆ. 14ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಅರಣ್ಯ ಸಚಿವ ಬಿ.ರಮಾನಾಥ್ ರೈ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ತೋಟಕಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ. ಸುಮಾರು 75 ಮಳಿಗೆಗಳಲ್ಲಿ ನರ್ಸರಿ, ತರಕಾರಿ ಹಾಗೂ ಹೂ ಗಿಡಗಳ ಬೀಜ, ನಾನಾ ಗೊಬ್ಬರ, ಯಂತ್ರೋಪಕರಣ, ಸ್ತ್ರೀಶಕ್ತಿ ಸಂಘಗಳ ಗೃಹೋತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.

Yogesh

ಪ್ರವೇಶದರ : ವಯಸ್ಕರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಹಾಗೂ ಶಾಲೆ ವತಿಯಿಂದ ಗುಂಪಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಒಟ್ಟು 7 ಲಕ್ಷ ರೂ. ವೆಚ್ಚದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+