ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mandaus Cyclone Effect: ರಾಯಚೂರು ಜಿಲ್ಲೆಯಲ್ಲಿ ನೆಲಕ್ಕುರುಳಿದ ಭತ್ತ, ಅನ್ನದಾತ ಹೈರಾಣ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌, 16: ಬಂಗಾಳ ಕೊಲ್ಲಿಯಿಂದ ಅಪ್ಪಳಿಸಿದ ಮಾಂಡೋಸ್ ಚಂಡಮಾರುತ ಇದೀಗ ರಾಯಚೂರು ಜಿಲ್ಲೆಯ ರೈತರ ಬೆಳೆಗಳ ಮೇಲೆ ಪ್ರಭಾವ ಬೀರಿದೆ. ಹೀಗೆ ಸತತವಾಗಿ ಸುರಿದ ತುಂತುರು ಮಳೆ ಅನ್ನದಾತರಿಗೆ ಆತಂಕ ತಂದೊಡ್ಡಿದೆ.

ರಾಶಿ ಮಾಡಿದ ಭತ್ತ ಹಾಗೂ ಕೊಯ್ಲುಗೆ ಬಂದ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕಚ್ಚಿವೆ. ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ತಾಲೂಕಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಿದ್ದರು. ಇದರಲ್ಲಿ ಅರ್ಧದಷ್ಟು ಬೆಳೆ ಈಗಾಗಲೇ ರಾಶಿಯಾಗಿದೆ. ಇನ್ನು ಭತ್ತ ಕೊಯ್ಯುವ ಯಂತ್ರಗಳ ಕೊರತೆಯಿಂದ ಅರ್ಧದಷ್ಟು ಭತ್ತ ಹೊಲದಲ್ಲೇ ಬಿದ್ದಿದೆ. ಇರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ತುಂತುರು ಮಳೆಯಿಂದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗುವ ಹಂತಕ್ಕೆ ತಲುಪಿದೆ.

ಅಕಾಲಿಕ ಮಳೆಗೆ ಶಿವಮೊಗ್ಗ ತತ್ತರ: ಅಡಿಕೆ, ಭತ್ತದ ಬೆಳೆ ನಾಶಅಕಾಲಿಕ ಮಳೆಗೆ ಶಿವಮೊಗ್ಗ ತತ್ತರ: ಅಡಿಕೆ, ಭತ್ತದ ಬೆಳೆ ನಾಶ

ಪ್ರದೇಶವಾರು ಭತ್ತದ ಬೆಳೆಯ ವಿವರ
ಜಾಲಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು 9430 ಹೆಕ್ಟೇರ್, ಅರಕೇರಾ 7711, ಗಬ್ಬೂರು 8268, ದೇವದುರ್ಗ ಹೋಬಳಿಯಲ್ಲಿ 4591 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗಿದೆ.ಇನ್ನು ಟೇಲೆಂಡ್ ಭಾಗ ಎಂದು ಗುರುತಿಸಿಕೊಂಡ ಅರಕೇರಾ ಹಾಗೂ ಗಬ್ಬೂರು ಹೋಬಳಿಗೆ ನೀರು ಬರುವುದು ವಿಳಂಬವಾಗಿದೆ. ಜಾಲಹಳ್ಳಿಗೆ ಹೋಲಿಸಿದರೆ ಇಲ್ಲಿ ಭತ್ತ ನಾಟಿಗೆ 8-10 ದಿನ ಬಿಡುವು ಬೇಕಾಗುತ್ತದೆ. ಈ ಭಾಗದಲ್ಲಿ ರಾಶಿ ವಿಳಂಬವಾಗಿದ್ದು, ಇಂತಹ ಸಮಯದಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

Mandaus Cyclone Effect: Paddy crop destroyed in Raichur district, Farmers worried

ಭತ್ತ ಕಾಪಾಡಿಕೊಳ್ಳಲು ರೈತರ ಪರದಾಟ
ಜಾಲಹಳ್ಳಿ ಹೋಬಳಿಯಲ್ಲಿ ಬಹುತೇಕ ರೈತರು ಭತ್ತ ರಾಶಿ ಮಾಡಿದ್ದು, ಜಮೀನು, ರಸ್ತೆಯ ಅಕ್ಕಪಕ್ಕ, ಖಾಲಿ ಜಾಗದಲ್ಲಿ ಕವಳ ಒಣಗಲು ಹಾಕಿದ್ದಾರೆ. ಮಳೆ ಏನಾದರೂ ಮತ್ತೆ ಸುರಿದರೆ ಭತ್ತದ ರಾಶಿ ನೀರಿನಲ್ಲಿ ಕೊಚ್ಚಿಹೋಗುತ್ತದೆ ಎನ್ನುವ ಆತಂಕದಲ್ಲಿ ರೈತರು ಇದ್ದಾರೆ. ಎರಡು ದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು, ಭತ್ತ ನೆಲಕ್ಕುರಳಿ ಯಂತ್ರಗಳಿಂದ ಕೊಯ್ಯಲು ಬಾರದಂತಾಗಿದೆ. ಭತ್ತ ನೆಲಕ್ಕುರಳಿ ಎರಡ್ಮೂರು ದಿನ ಕಳೆದರ ಸಸಿ ಒಡೆಯುವ ಆತಂಕವಿದೆ. ರಾಶಿ ಮಾಡಿದ ಭತ್ತ ಬಿಸಿಲು ಗಾಳಿಗೆ ಒಣಸಿಸಿದರೆ ಗುಣಮಟ್ಟದಿಂದ ಇರದಲಿದೆ. ಮಳೆ ಬರುತ್ತಿರುವ ಕಾರಣ ತಾಡಪಾಲ್‌ನಡಿ ಭತ್ತವನ್ನು ಮುಚ್ಚಿಡಲಾಗುತ್ತಿದ್ದು, ಇದೀಗ ಗುಣಮಟ್ಟ ಹಾಳಾಗುವ ಭೀತಿ ಎದುರಾಗಿದೆ.

Mandaus Cyclone Effect: Paddy crop destroyed in Raichur district, Farmers worried

ಅಕಾಲಿಕ ಮಳೆ, ರೈತರಿಗೆ ಆತಂಕ ಶುರು
ರೈತರು ಸಾವಿರಾರು ರೂಪಾಯಿ ಸಾಲಮಾಡಿ ಭತ್ತವನ್ನು ಬೆಳೆದಿದ್ದಾರೆ. ಕೈಗೆ ಬರುವ ಸಂದರ್ಭದಲ್ಲಿ ಅಕಾಲಿಕ ಮಳೆ ಬೀಳುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆ ಗಾಳಿಗೆ ಭತ್ತ ನೆಲಕ್ಕುರುಳಿ ಹಾಳಾದರೆ, ಇನ್ನು ರಾಶಿ ಮಾಡಿದ ಭತ್ತ ಒಣಗಲು ಹಾಕದ ಪರಿಸ್ಥಿತಿ ಎದುರಾಗಿದೆ. ಇದರಿಂದ ರೈತರು ವರ್ಷವಿಡಿ ಸಮಸ್ಯೆ ಎದುರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಕಕ್ಕಲದೊಡ್ಡಿ ಗ್ರಾಮ ರೈತ ಮಲ್ಲರೆಡ್ಡಿ ಮಾಡಬಾಳ ಹೇಳಿದರು.

English summary
Mandaus Cyclone Effect to Raichur district, Farmers worried by Paddy crop destroyed. Paddy crop destroyed in Raichur district, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X