ಮಹದಾಯಿ: ಕರ್ನಾಟಕ ಕೇಳಿದ್ದೆಷ್ಟು? ನ್ಯಾಯಾಧಿಕರಣ ಕೊಟ್ಟಿದ್ದೆಷ್ಟು?
ಬೆಂಗಳೂರು, ಆಗಸ್ಟ್ 14: ಗೋವಾ-ಕರ್ನಾಟಕ ರಾಜ್ಯಗಳ ಮಧ್ಯೆ ಕಂದಕ ಉಂಟುಮಾಡಿದ್ದ ಮಾಡಿದ್ದ ಮಹದಾಯಿ ವಿವಾದದ ಕುರಿತು ಇಂದು ನ್ಯಾಯಾಧಿಕರ ತಮ್ಮ ಅಂತಿಮ ಪೀರ್ಪು ಪ್ರಕಟಿಸಿದೆ.
ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ 13.42 ಟಿಎಂಸಿ ಅಡಿ , ಗೋವಾಕ್ಕೆ 24 ಟಿಎಂಸಿ ಮತ್ತು ಮಹರಾಷ್ಟ್ರಕ್ಕೆ 1.30 ಟಿಎಂಸಿ ನೀರು ದೊರೆಯಲಿದೆ.
ಈ ತೀರ್ಪಿನ ಬಗ್ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ತೀರ್ಪು ರಾಜ್ಯಕ್ಕೆ ಸಿಕ್ಕ ಜಯವೆಂದಿದ್ದರೆ. ಇನ್ನು ಕೆಲವರು ಅನ್ಯಾಯವಾಗಿದೆ ಎಂದು ಹುಯಿಲಿಟ್ಟಿದ್ದಾರೆ.
ರಾಜ್ಯ ಸರ್ಕಾರವು ಮಹದಾಯಿ ಜಲಾನಯನ ಪ್ರದೇಶದಿಂದ ತಮಗೆ 36.558 ಟಿಎಂಸಿ ಅಡಿ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ ಸಿಕ್ಕಿರುವುದು 13.42 ಟಿಎಂಸಿ ಅಡಿ ಮಾತ್ರ. ಈ ನೀರನ್ನು ಯಾವುದಕ್ಕೆ ಬಳಸಿಕೊಳ್ಳಬೇಕು ಎಂದು ಸಹ ನ್ಯಾಯಾಧಿಕರಣ ಹೇಳಿದೆ.

3.90 ಟಿಎಂಸಿ ಅಡಿ ನೀರು ಮಾತ್ರ ತಿರುವ ಬಹುದು
ಮಹದಾಯಿ ಜಲಾನಯನ ಪ್ರದೇಶದಿಂದ 3.90 ಟಿಎಂಸಿ ಅಡಿ ನೀರು ಮಾತ್ರ ತಿರುವಬಹುದಾಗಿದೆ. ಮಹದಾಯಿ ಜಲಾನಯನದಿಂದ ಮಲಪ್ರಭಾ ಅಣೆಕಟ್ಟೆಗೆ 1.8 ಟಿಎಂಸಿ ನೀರನ್ನು ಹರಿಸಲು ಕೋರ್ಟ್ ಅನುಮತಿಸಿದೆ. ಜೊತೆಗೆ ಕಳಸಾ-ಬಂಡೂರಿ ಯೋಜನೆಗೆ 2.72 ಟಿಎಂಸಿ ಅಡಿ ನೀರನ್ನು ಹರಿಸಬಹುದಾಗಿದೆ. ಮಹದಾಯಿ ಜಲಾನಯನ ಪ್ರದೇಶದಿಂದ ಹೊರಕ್ಕೆ ಒಟ್ಟು 3.90 ಟಿಎಂಸಿ ಅಡಿ ನೀರನ್ನು ಮಾತ್ರವೇ ಹರಿಸಲು ಕೋರ್ಟ್ ಹೇಳಿದೆ.

ರಾಜ್ಯದ ಬೇಡಿಕೆ ಎಷ್ಟಿತ್ತು?
ಮಹದಾಯಿ ಜಲಾನಯನ ಪ್ರದೇಶದಿಂದ ನೀರನ್ನು ತಿರುವು ಮಾಡಿಕೊಳ್ಳಲು ಅಥವಾ ಹೊರಕ್ಕೆ ಹರಿಸಿಕೊಂಡು ಬೇರೆಯ ಯೋಜನೆಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರವು 13.08 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿತ್ತು. ಕಳಸಾ ನಾಲೆಗೆ 3.56 ಟಿಎಂಸಿ ಅಡಿ, ಬಂಡೂರಾ ನಾಲೆಗೆ 4 ಟಿಎಂಸಿ ಮತ್ತು ಕಾಳಿ ನದಿಗೆ ಹರಿಸಿ ಕೆಎಚ್‌ಪಿಇ ಯೋಜನೆ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು 5.52 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿತ್ತು. ನ್ಯಾಯಾಧಿಕರಣವು 3.90 ಟಿಎಂಸಿ ಅಡಿ ನೀರು ಮಾತ್ರ ನೀಡಿದ್ದು, ಕಾಳಿ ನದಿಗೆ ಹರಿಸುವ ನೀರಿನ ಬೇಡಿಕೆಯನ್ನು ತಳ್ಳಿ ಹಾಕಿದೆ.

ಕುಡಿಯುವ ನೀರಿಗೆ ಮತ್ತು ನೀರಾವರಿಗೆ
ಮಹದಾಯಿ ಜಲಾನಯನ ಪ್ರದೇಶದಿಂದ ಕುಡಿಯುವ ನೀರಿಗೆ ಮತ್ತು ನೀರಾವರಿಗೆ ರಾಜ್ಯ ಸರ್ಕಾರವು 1.5 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು ಅದನ್ನು ನ್ಯಾಯಾಧಿಕರಣ ಮಾನ್ಯ ಮಾಡಿದೆ. ಇದು ಮಹದಾಯಿ ಜಲಾನಯನ ಪ್ರದೇಶದಿಂದ ನೇರವಾಗಿ ಬಳಸಿಕೊಳ್ಳಬೇಕಿರುವ ನೀರು. ಇದನ್ನು ಸ್ಥಳೀಯವಾಗಿಯಷ್ಟೆ ಬಳಸಿಕೊಳ್ಳಬಹುದೇ ವಿನಃ ನಾಲೆಗಳಿಗೆ ಹರಿಸುವಂತಿಲ್ಲ.

ಹೈಡ್ರೋ ಎಲೆಕ್ಟ್ರಿಕ್ ಮಾದರಿ ವಿದ್ಯುತ್ ಉತ್ಪಾದನೆ
ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಮೂಲಕ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರವು 14.971 ಟಿಎಂಸಿ ಅಡಿ ನೀರನ್ನು ಕೇಳಿತ್ತು. ಇದರಲ್ಲಿ ಆವಿಯಾಗುವ 0.40 ಟಿಎಂಸಿ ಅಡಿಯೂ ಸೇರಿತ್ತು. ಆದರೆ ನ್ಯಾಯಾಧಿಕರಣವು 8.02 ಟಿಎಂಸಿ ಅಡಿ ನೀರನ್ನು ನೀಡಿದೆ. ಇದರಲ್ಲಿ ಆವಿಯಾಗುವ ಅಂದಾಜು 0.40 ಟಿಎಂಸಿ ಅಡಿ ನೀರು ಸಹ ಸೇರಿದೆ.

ಮಲಪ್ರಭಾ ನದಿಪಾತ್ರಕ್ಕೆ ಹರಿಸಲು ನೀರು
ಮಲಪ್ರಭಾ ನದಿಪಾತ್ರದಲ್ಲಿ ನಿರ್ಮಿಸಲು ಯೋಜಿಸಿರುವ ಕೊಟ್ನಿ ಅಣೆಕಟ್ಟೆಗೆ ಮಹದಾಯಿ ಜಲಾನಯನದಿಂದ 7 ಟಿಎಂಸಿ ಅಡಿ ನೀರು ಕೇಳಲಾಗಿತ್ತು. ಆ ನೀರನ್ನು ಮಲಪ್ರಭಾ ನದಿ ಪಾತ್ರಕ್ಕೆ ಹರಿಸುವ ಯೋಜನೆ ಇದಾಗಿತ್ತು. ಆದರೆ ಇದಕ್ಕೆ ನ್ಯಾಯಾಧಿಕರಣ ಒಪ್ಪಿಗೆ ನೀಡಿಲ್ಲ.

ಮಲಪ್ರಭಾ ಅಣೆಕಟ್ಟೆಗೆ ನೀರು
ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ತಾಲ್ಲೂಕುಗಳಿಗೆ ಕುಡಿಯುವ ನೀರಿಗೆ 2 ಟಿಎಂಸಿ ಅಡಿ ನೀರು, ಇದೇ ತಾಲ್ಲೂಕುಗಳಿಗೆ ಕೃಷಿಗೆ ಮತ್ತು ಅಂತರ್ಜಲ ಹೆಚ್ಚಿಸಲು 3 ಟಿಎಂಸಿ ಅಡಿ ನೀರು ಮತ್ತು ಮಲಪ್ರಭಾ ಅಣೆಕಟ್ಟೆಗೆ ಪಂಪ್ ಮಾಡಲು 2 ಟಿಎಂಸಿ ಅಂದರೆ ಒಟ್ಟು 7 ಟಿಎಂಸಿ ಅಡಿ ನೀರನ್ನು ರಾಜ್ಯ ಸರ್ಕಾರ ಕೇಳಿತ್ತು. ಆದರೆ ಗೋವಾ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಹಾಗಾಗಿ ಅಂತಿಮ ತೀರ್ಪಿನಲ್ಲಿ ನ್ಯಾಯಾಧಿಕರಣವು ಇದಕ್ಕೆ ಒಪ್ಪಿಗೆ ನೀಡಿಲ್ಲ.
-
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು?












Click it and Unblock the Notifications