ಶ್ರೀಸಾಮಾನ್ಯರ ಕೈಗೆಟುಕುವ ಸಿಹಿ ದ್ರಾಕ್ಷಿ

ಸುವರ್ಣ ಮಹೋತ್ಸವ ಅಂಗವಾಗಿ ಫೆ.10 ರಿಂದ ನಗರದ ನಾನಾ ಹಾಪ್ ಕಾಮ್ಸ್‌ನ ಮಳಿಗೆಗಳಲ್ಲಿ ದ್ರಾಕ್ಷಿಮೇಳ ನಡೆಯಲಿದೆ. ಮೇಳವು ಮೂರು ತಿಂಗಳು ನಡೆಯುತ್ತದೆ. ಮೊದಲಿಗೆ ಹಡ್ಸನ್‌ವೃತ್ತ, ಲಾಲ್‌ಬಾಗ್, ಜಯನಗರ, ಬನಶಂಕರಿ, ರಾಜಾಜಿನಗರ, ಕೋರಮಂಗಲ, ಪದ್ಮನಾಭನಗರ, ಇಂದಿರಾನಗರ ಮುಂತಾದೆಡೆ ಜರುಗಲಿದೆ.
ಬಿಜಾಪುರ ಮತ್ತಿತರ ಕಡೆಗಳಲ್ಲಿ ಅಧಿಕ ಮಳೆಯಾಗಿರುವುದರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆಗಳಲ್ಲಿ ಶೇ.20ರಷ್ಟು ಹೆಚ್ಚಾಗಲಿವೆ. 2 ಹಾಗೂ 5 ಕೆ.ಜಿ.ಯ ಬಾಕ್ಸ್‌ಗಳಲ್ಲಿ ಹಣ್ಣುಗಳು ಲಭ್ಯವಿದ್ದು, ಎರಡು ದಿನಗಳಿಗೊಮ್ಮೆ ದರ ನಿಗದಿಪಡಿಸಲಾಗುವುದು ಎಂದು ಮುನೇಗೌಡ ಹೇಳಿದರು.
ದ್ರಾಕ್ಷಿ ದರ (ಕೆ.ಜಿ.ಗೆ)
ಬೆಂಗಳೂರು ಬ್ಲೂ- 18 ರೂ.
ಫ್ಲೇಮ್- 46 ರೂ.
ತಾಜ್ ಗಜೇಶ್-47 ರೂ.
ಥಾಮ್ಸನ್ ಸೀಡ್‌ಲೆಸ್-32 ರೂ.
ಕೃಷ್ಣ ಶರದ್-60 ರೂ.
ಶರದ್-48 ರೂ.
ದಿಲ್‌ಕುಷ್-15 ರೂ.
ಅನಾಬಿಷಾ- 15 ರೂ.
ರೆಡ್‌ಗ್ಲೋಬ್- 150 ರೂ.
ಸೊನಾಲಿಕಾ-46 ರೂ.












Click it and Unblock the Notifications