ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಧಾರವಾಡದ ಕೃಷಿ ವಿವಿಯಲ್ಲಿ ವೇದಿಕೆ ಸಿದ್ಧತೆ

ಧಾರವಾಡದ ಕೃಷಿ ವಿವಿಯಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದ ವೇದಿಕೆ ಸಿದ್ಧತೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ.

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಜನವರಿ, 30: ಧಾರವಾಡದ ಕೃಷಿ ವಿವಿಯಲ್ಲಿ ಮಂಗಳವಾರ (ಜನವರಿ 31) ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಧಾರವಾಡದ ಕೃಷಿ ವಿವಿ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಮಂಗಳವಾರ ಮಧ್ಯಾಹ್ನ 12:30ಕ್ಕೆ ಸಿಎಂ ಧಾರವಾಡಕ್ಕೆ ಆಗಮಿಸಲಿದ್ದಾರೆ. ನೂತನ ಯೋಜನೆಗಳಿಗೆ ಚಾಲನೆ ಸೇರಿದಂತೆ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು 20 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಿಎಂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಸಿಎಂಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸ್ಥಳೀಯ ಸಚಿವರು, ಶಾಸಕರು ಸಾಥ್ ನೀಡಲಿದ್ದಾರೆ.

ಶಾರ್ಟ್ ಸರ್ಕ್ಯೂಟ್‌: ಲೊಕನಹಳ್ಳಿಯಲ್ಲಿ 20 ಹೆಕ್ಟೇರ್‌ಗೂ ಹೆಚ್ಚು ಕಬ್ಬು ಬೆಳೆ, 150ಕ್ಕೂ ಹೆಚ್ಚು ತೆಂಗಿನ ಮರಗಳು ಭಸ್ಮಶಾರ್ಟ್ ಸರ್ಕ್ಯೂಟ್‌: ಲೊಕನಹಳ್ಳಿಯಲ್ಲಿ 20 ಹೆಕ್ಟೇರ್‌ಗೂ ಹೆಚ್ಚು ಕಬ್ಬು ಬೆಳೆ, 150ಕ್ಕೂ ಹೆಚ್ಚು ತೆಂಗಿನ ಮರಗಳು ಭಸ್ಮ

ಪ್ರಕೃತಿ ಸೊಗಡಿನ ವೈಭವ

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ದಿನವೂ ಜನಜಂಗುಳಿಯಿಂದ, ಗದ್ದಲ ಗಲಾಟೆಯಿಂದ ಕೂಡಿರುತ್ತಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸೋಮವಾರ ಸಾಕಷ್ಟು ವೈವಿಧ್ಯಮಯ ಕಲೆಯ ಅನಾವರಣಕ್ಕೆ ಸಾಕ್ಷಿಯಾಯಿತು. ಬಣ್ಣಗಳ ಚಿತ್ತಾರ, ಕಲಾವಿದನ ಕಲ್ಪನೆಗೆ ಬಣ್ಣದ ರಂಗು, ಕುಂಚದಲ್ಲಿ ಅರಳಿದ ಇತಿಹಾಸ, ಸಂಸ್ಕೃತಿ, ಗ್ರಾಮೀಣ ಸೊಗಡು, ಪ್ರಕೃತಿ ಸೊಗಡಿನ ವೈಭವವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆವರಣ ಸಮೀಪದ ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು.

Krishi Pandit Award Ceremony at Dharwad on January 31st

ಕಲಾವಿದನ ಕೈಚಳಕಕ್ಕೆ ಫಿದಾ

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಆವರಣಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿ ಡಾ. ಮಿಣಜಗಿ ಕಲಾ ಆರ್ಟ್ ಗ್ಯಾಲರಿ ವತಿಯಿಂದ ಚಿತ್ರಸಂತೆಯನ್ನು ಆಯೋಜಿಸಲಾಗಿತ್ತು. ಅನೇಕ ಕಲಾವಿದರ ಕುಂಚದಲ್ಲಿ ಅರಳಿದ ಚಿತ್ರಕಲೆಗಳು ಧಾರವಾಡ ಜಿಲ್ಲೆಯ ಕಲಾಸಕ್ತರ ಮನತಣಿಸಿದವು. ಇನ್ನು ದೇಶದ ವಿವಿಧ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಚಿತ್ರಸಂತೆಯ ಸೊಬಗನ್ನು ಇನ್ನೂ ಹೆಚ್ಚಿಸಿವೆ.

ಪರಿಸರ, ವನ್ಯಜೀವಿಗಳು, ದೇವಸ್ಥಾನ, ಹೂವು ಕಟ್ಟುವ ಮಹಿಳೆ, ಗ್ರಾಮೀಣ ಸೊಗಡು, ದಿವಂಗತ ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿ, ಡಾ.ಅಂಬೇಡ್ಕರ್, ಬುದ್ಧ-ಬಸವ, ವಿಶ್ವ ಪ್ರಸಿದ್ಧ ನಾಯಕರು, ರೂಪದರ್ಶಿಯರು, ಕೃಷಿಕರ ಬದುಕು, ದೇವರು, ಕಾಲುದಾರಿ, ಸೂರ್ಯಾಸ್ತ ಹಾಗೂ ಸೂರ್ಯೋದಯ, ನದಿಗಳ ಹರಿವು, ನೀರು ಕುಡಿಯುತ್ತಿರುವ ಜಿಂಕೆ, ದೈವ ಕೋಲ, ಕಾಡು ಹಣ್ಣುಗಳು, ಎಳನೀರಿನ ವ್ಯಾಪಾರಿ, ಪಾನಿಪುರಿ ವ್ಯಾಪಾರಿ, ಹಳೇ ನಗರದ ಸೊಬಗು, ಬೆಟ್ಟಗಳ ಸಾಲು, ಗ್ರಾಮೀಣ ಮನೆ ಹೀಗೆ ಹಲವು ವಿಷಯಗಳು ಕಲಾವಿದನ ಕುಂಚದಲ್ಲಿ ಚಿತ್ರದ ರೂಪ ಪಡೆದಿದ್ದವು. ಮಹಿಳೆಯರ ಭಾವ, ಜಾನಪದ ಸಂಸ್ಕೃತಿ ಹಾಗೂ ಶಿಲ್ಪಕಲೆಗಳ ಚಿತ್ರ ಸೇರಿದಂತೆ ಹತ್ತಾರು ವಿಷಯಗಳು ಕಲಾವಿದನ ಕುಂಚದಲ್ಲಿ ಅರಳಿದ್ದು, ನೋಡುಗರ ಗಮನ ಸೆಳೆದವು.

English summary
Stage Preparation for Krishi Pandit Award Ceremony at Dharwad agriculture university on January 31st, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X