ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 12, 13 ರಂದು ಶಿವಮೊಗ್ಗದಲ್ಲಿ ಕೃಷಿ ಮೇಳ

|
Google Oneindia Kannada News

ಶಿವಮೊಗ್ಗ, ನವೆಂಬರ್ 10; ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನವುಲೆ, ಶಿವಮೊಗ್ಗ ಇಲ್ಲಿ ಕೃಷಿ ಮೇಳ-2021 ಆಯೋಜನೆ ಮಾಡಲಾಗಿದೆ. ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ರೈತರಿಗೆ ಆಹ್ವಾನ ನೀಡಲಾಗಿದೆ.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಜಂಟಿಯಾಗಿ ನವೆಂಬರ್ 12 ಮತ್ತು 13ರಂದು ಕೃಷಿ ಮೇಳ ಆಯೋಜಿಸಿವೆ.

ನ.29ರಂದು ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್‌ಗಳಲ್ಲಿ ರೈತರ ನ.29ರಂದು ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್‌ಗಳಲ್ಲಿ ರೈತರ

ನವೆಂಬರ್ 12ರಂದು ಬೆಳಗ್ಗೆ 10.30ಕ್ಕೆ ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಬಿ. ಸಿ. ಪಾಟೀಲ್ ಕೃಷಿ ಮೇಳವನ್ನು ಉದ್ಘಾಟಿಸಿಲಿದ್ದಾರೆ.

Krishi Mela

ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪವಸ್ತುಪ್ರದರ್ಶನದ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಬೆಳೆ ಪ್ರಾತ್ಯಕ್ಷಿಕೆ ಸಸ್ಯಕಾಶಿ ಉದ್ಘಾಟನೆ ಮಾಡಲಿದ್ದಾರೆ.

ಗುಲ್ಬರ್ಗಾದ ನಿಸರ್ಗ ಕೃಷಿ ಉತ್ಪಾದಕ ಕಂಪನಿ ಜೊತೆ ಫ್ಲಿಪ್ ಕಾರ್ಟ್ ಪಾಲುದಾರಿಕೆ ಗುಲ್ಬರ್ಗಾದ ನಿಸರ್ಗ ಕೃಷಿ ಉತ್ಪಾದಕ ಕಂಪನಿ ಜೊತೆ ಫ್ಲಿಪ್ ಕಾರ್ಟ್ ಪಾಲುದಾರಿಕೆ

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶ್ರೇಷ್ಟ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂಸದ ಬಿ. ವೈ. ರಾಘವೇಂದ್ರ ತಾಂತ್ರಿಕತೆ ಮತ್ತು ತಳಿಗಳ ಬಿಡುಗಡೆ ಮಾಡುವರು. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ. ಬಿ. ಅಶೋಕ್ ನಾಯ್ಕ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಹಾಗೂ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡುವರು.

ಜಿಕೆವಿಕೆ ಆವರಣದಲ್ಲಿ ನ.11ರಿಂದ 14ರ ವರೆಗೆ ಕೃಷಿ ಮೇಳಜಿಕೆವಿಕೆ ಆವರಣದಲ್ಲಿ ನ.11ರಿಂದ 14ರ ವರೆಗೆ ಕೃಷಿ ಮೇಳ

ಮುಖ್ಯ ಅತಿಥಿಗಳಾಗಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರು, ಅಧಿಕಾರಿಗಳು, ಅಬ್ಬಲಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಸರ್ಕಾರದ ಅಪರ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ವಿವಿಧ ಗೋಷ್ಠಿಗಳು; ನವೆಂಬರ್ 13ರಂದು ಬೆಳಗ್ಗೆ 10.30ಕ್ಕೆ 'ಕೋವಿಡ್ ನಂತರದ ಕೃಷಿ-ರೈತರ ಆದಾಯ ದ್ವಿಗುಣ ಮತ್ತು ಪೌಷ್ಟಿಕಾಂಶಗಳ ಭದ್ರತೆ' ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಂ. ಜೆ. ಚಂದ್ರೇಗೌಡ, ಪ್ರಧಾನ ವಿಜ್ಞಾನಿ, ಅಟಾರಿ, ಬೆಂಗಳೂರು. ಡಾ. ರೂಪ. ಟಿ. ಆರ್ ಪ್ರಧಾನ ವಿಜ್ಞಾನಿ ಐಐಹೆಚ್‍ಆರ್, ಬೆಂಗಳೂರು. ಪ್ರಕಾಶ್ ಜಿ. ಆರ್. ಎಸ್‍ಜಿಎಂ ಟೆಕ್ನಾಲಜೀಸ್ ಶಿವಮೊಗ್ಗ. ಡಾ. ಸಿ. ನಾರಾಯಣಸ್ವಾಮಿ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕರು, ಇಫ್ಕೋ ಬೆಂಗಳೂರು ಪಾಲ್ಗೊಳ್ಳುವರು.

ಮಧ್ಯಾಹ್ನ 2ಗಂಟೆಗೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಸದಸ್ಯರು ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡುವರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಕೆ. ನಾಯಕ್ ಅಧ್ಯಕ್ಷತೆ ವಹಿಸುವರು.

ನವೆಂಬರ್ 11 ರಿಂದ ಕೃಷಿ ಮೇಳ; ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಕೃಷಿ ಮೇಳವನ್ನು ನವೆಂಬರ್ 11 ರಿಂದ 14ರ ತನಕ ಆಯೋಜನೆ ಮಾಡಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್. ರಾಜೇಂದ್ರ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕೃಷಿ ಮೇಳದಲ್ಲಿ ಕೃಷಿ ಸಾಧಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಶಾಸಕ ಕೃಷ್ಣಬೈರೇಗೌಡ, ಕೃಷಿ ಸಚಿವ ಬಿ. ಸಿ. ಪಾಟೀಲ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯ ಕೃಷಿಮೇಳದಲ್ಲಿ ಹೆಚ್ಚು ಇಳುವರಿ ನೀಡುವ ಮತ್ತು ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿರುವ 2 ಭತ್ತದ ತಳಿ, ಬುಡಕೊಳೆ ರೋಗ ನಿರೋಧಕ ಶಕ್ತಿ ಇರುವ ರಾಗಿ ಸೇರಿದಂತೆ ಒಟ್ಟು 10 ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ನವೆಂಬರ್ 12 ರಿಂದ 14ರ ತನಕ ಪ್ರತಿದಿನ ಬೆಳಗ್ಗೆ 10.30 ರಿಂದ 12.30ರ ತನಕ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿಗಳು ನಡೆಯಲಿವೆ.

English summary
The university of agricultural and horticultural sciences Shivamogga organized Krishi Mela 2021 on November 12 and 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X