2023ನ್ನು ರೈತರ ಆದಾಯ ದುಪ್ಪಟ್ಟು ಮಾಡುವ ವರ್ಷವೆಂದು ಘೋಷಣೆ: ಬಿ.ಸಿ ಪಾಟೀಲ್
ರಾಯಚೂರು, ಜನವರಿ, 12: ಕೃಷಿಕರನ್ನು ಸಶಕ್ತರನ್ನಾಗಿ ಮಾಡಬೇಕಾಗಿದೆ. 2023ನೇ ವರ್ಷವನ್ನು ರೈತರ ಆದಾಯ ದುಪ್ಪಟ್ಟು ಮಾಡುವ ವರ್ಷವೆಂದು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ರಾಯಚೂರಿನಲ್ಲಿ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಮೇಳವನ್ನು ಬುಧವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಾವು ಬೆಳೆದ ಬೆಳೆಯಿಂದ 10 ಪಟ್ಟು ಆದಾಯ ಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೈತರ ಉತ್ಪಾದಕ ಆ್ಯಪ್ ಜಾರಿಗೆ ತರಲಾಗಿದ್ದು, 1,166 ಉತ್ಪಾದನಾ ಸಂಸ್ಥೆಗಳು ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ಇನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಿರಿಧಾನ್ಯಗಳಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು. ಎಲ್ಲರೂ ಸಿರಿಧಾನ್ಯ ಬಳಸುವುದಕ್ಕೆ ಮುಂದಾಗುತ್ತಿದ್ದಾರೆ. ರಾಯಚೂರಿನ ರೈತರು ಸಿರಿಧಾನ್ಯ ಬೆಳೆಯುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.

ರಾಯಚೂರು: ಕೃಷಿ ಮೇಳದಲ್ಲಿ ನೋಡುಗರನ್ನು ಸೆಳೆದ ಫಲಪುಷ್ಪ ಪ್ರದರ್ಶನ
ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ
ಕೃಷಿ ಮೇಳದಲ್ಲಿ ಕೃಷಿ ಯಲ್ಲಿ ಸಾಧನೆ ಮಾಡಿರುವ ಕಲ್ಯಾಣ ಕರ್ನಾಟಕ ಭಾಗದ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆಯರಿಗೆ 2021ಹಾಗೂ 2022ನೇ ಸಾಲಿನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. 2021ನೇ ಸಾಲಿನ ಶ್ರೇಷ್ಠ ಕೃಷಿಕರಾದ ಬೀದರ ಜಿಲ್ಲೆಯ ಸಿಂದ ಬಂದಗಿ ಗ್ರಾಮದ ವಿನೋದ, ಕಲಬುರಗಿ ಜಿಲ್ಲೆಯ ವೀರಗುಡಿ ಗ್ರಾಮದ ಸಿದ್ರಾಮಪ್ಪ, ಯಾದಗಿರಿ ಜಿಲ್ಲೆಯ ವೈಲಗುಂಟೆ ಹುಣಸಗಿಯ ಬಸವರಾಜ್, ರಾಯಚೂರು ಜಿಲ್ಲೆಯ ಎಚ್.ತಿಮ್ಮಾಪುರ ಗ್ರಾಮದ ಸುರೇಶ್ ರೆಡ್ಡಿ, ಕೊಪ್ಪಳ ಜಿಲ್ಲೆಯ ಕಾತರಕಿ ಗ್ರಾಮದ ಶ್ರೀನಿವಾಸ ರೆಡ್ಡಿ, ಬಳ್ಳಾರಿ ಜಿಲ್ಲೆಯ ಚಿಕ್ಕ ಬಳ್ಳಾರಿ ಗ್ರಾಮದ ಕೆ.ಶ್ರೀನಿವಾಸರಾಜು, ವಿಜಯನಗರ ಜಿಲ್ಲೆಯ ಅನಂತಹಳ್ಳಿ ಗ್ರಾಮದ ಕೆ.ರವಿಚಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಪಡೆದ ಮಹಿಳೆಯರ ವಿವರ
2022ನೇ ಸಾಲಿನ ಶ್ರೇಷ್ಠ ಕೃಷಿ ಮಹಿಳೆಯರಾದ ಬೀದರ್ ಜಿಲ್ಲೆಯ ಮಾಳೆಂಗಾವ ಗ್ರಾಮದ ಅಂಬಿಕಾ, ಕಲಬುರಗಿ ಜಿಲ್ಲೆಯ ಚೇಗಂಟಿ ಗ್ರಾಮದ ಸುಷ್ಮಾ, ರಾಯಚೂರು ಜಿಲ್ಲೆಯ ಹಸಮಕಲ್ ಗ್ರಾಮದ ಸರಸ್ವತಿ, ಬಳ್ಳಾರಿ ಜಿಲ್ಲೆಯ ಜೋಗ ಗ್ರಾಮದ ಯಶೋದಾ, ವಿಜಯನಗರ ಜಿಲ್ಲೆಯ ಉಲುವತ್ತಿ ಗ್ರಾಮದ ದಾನಮ್ಮ ಹಾಗೂ ಯಾದಗಿರಿ ಜಿಲ್ಲೆಯ ಸಯದಾಪೂರ ಗ್ರಾಮದ ಯಲ್ಲಮ್ಮ ಅವರನ್ನು ಸನ್ಮಾನಸಲಾಯಿತು. 2022ನೇ ಸಾಲಿನ ಶ್ರೇಷ್ಠ ಕೃಷಿಕರಾದ ಬೀದರ್ ಜಿಲ್ಲೆಯ ಚೀನಕೇರಾ ಗ್ರಾಮದ ಸತೀಶ್, ಕಲಬುರಗಿ ಜಿಲ್ಲೆಯ ಕುಡಳ್ಳಿ ಗ್ರಾಮದ ಅನ್ನಾರಾವ್, ಯಾದಗಿರಿ ಜಿಲ್ಲೆಯ ಭೀಮನಹಳ್ಳಿ ಗ್ರಾಮದ ಬಸನಗೌಡ ಪಾಟೀಲ್, ರಾಯಚೂರು ಜಿಲ್ಲೆಯ ಮಾಸದೊಡ್ಡಿ ಗ್ರಾಮದ ಎನ್. ದೇವೇಂದ್ರಚಾರಿ, ಕೊಪ್ಪಳ ಜಿಲ್ಲೆಯ ಇರಕಲ್ ಗಡ್ಡ ಗ್ರಾಮದ ಸುದೇಶ್ ಕುಮಾರ್, ಕೊಪ್ಪಳ ಜಿಲ್ಲೆಯ ಮಲಕನ ಮರಡಿ ಗ್ರಾಮದ ವೀರನಗೌಡ ಕುಲಕರ್ಣಿ, ಬಳ್ಳಾರಿ ಜಿಲ್ಲೆಯ ರವಿ ಕುಮಾರ್, ವಿಜಯನಗರ ಜಿಲ್ಲೆಯ ಇಟಗಿ ಗ್ರಾಮದ ಪ್ರಕಾಶ್ ಅಂಬಳಿ, ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಸಯ್ಯ ಹಿರೆಮಠ ಹಾಗೂ ರಾಯಚೂರು ಜಿಲ್ಲೆಯ ಮಿಟ್ಟಿ ಕಲ್ಲೂರು ಗ್ರಾಮದ ಅಮರಗುಂಡಪ್ಪ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾದವರ ವಿವರ
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ರಾಜಾ ವೆಂಕಟಪ್ಪ ನಾಯಕ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ರಾಯಚೂರು ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಬಿಜೆಪಿ ಹಿರಿಯ ಮುಖಂಡ ಎನ್.ಶಂಕ್ರಪ್ಪ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ. ದೇಸಾಯಿ, ಕೃಷಿ ಮೇಳದ ಅಧ್ಯಕ್ಷ ಡಾ.ಎಂ.ಕೆ ನಾಯ್ಕ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಕೋರಿ, ತ್ರಿವಿಕ್ರಮ ಜೋಷಿ, ಮಹಾಂತೇಶಗೌಡ.ಬಿ.ಪಾಟೀಲ್, ಜಿ.ಶ್ರೀಧರ ಕೆಸರಹಟ್ಟಿ, ಸುನೀಲ್ ಕುಮಾರ್ ವರ್ಮಾ, ಕೆ.ವಿ ಪ್ರಸಾದ್ ಇದ್ದರು.












Click it and Unblock the Notifications