'ಬೆಳೆ ವಿಮೆ ಕಂಪನಿಗಳಿಂದ ರಾಜ್ಯದ ರೈತರಿಗೆ ಸಾವಿರಾರು ಕೋಟಿ ಮೋಸ'
ಬೆಂಗಳೂರು, ನವೆಂಬರ್ 27: ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಸಾವಿರಾರು ಕೋಟಿ ರೂ ಮೋಸವಾಗಿದೆ ಎಂದು ಕೆಪಿಸಿಸಿ ಕಿಸಾನ್ ಮಂಚ್ ಆರೋಪಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನವ ಮಿಗಾ, ಕೇಂದ್ರದ ಮೋದಿ ಸರ್ಕಾರ ಬೆಳೆ ವಿಮೆಯಲ್ಲಿ ರೈತರ ಹಣವನ್ನು ಲೂಟಿ ಮಾಡಿದೆ ಎಂದು ಸಿಡಿಯನ್ನು ಕೂಡ ಬಿಡುಗಡೆ ಮಾಡಿದರು.
ರಫೇಲ್ ಹಗರಣದಂತೆ ಬೆಳೆ ವಿಮೆಯಲ್ಲೂ ಹಗರಣ ನಡೆದಿದೆ. 15 ಸಾವಿರ ಕೋಟಿ ರೂ ಅಕ್ರಮ ನಡೆದಿದೆ. ಅದಾನಿ ಮತ್ತು ಅಂಬಾನಿ ವಿಮೆ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಫಸಲ್ ಭೀಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.

ರೈತರಿಂದ 2014-15ರಲ್ಲಿ 20 ಸಾವಿರ ಕೋಟಿ ರೂ ಇನ್ಶೂರೆನ್ಸ್ ಪ್ರೀಮಿಯಂ ಹಣ ಜಮಾ ಆಗಿತ್ತು, ಇದರಲ್ಲಿ 5 ಸಾವಿರ ಕೋಟಿ ಮಾತ್ರ ರೈತರಿಗೆ ಪರಿಹಾರ ಸಿಕ್ಕಿದೆ. ಉಳಿದ 15 ಸಾವಿರ ಕೋಟಿ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು.
ಬೀದರ್ ಜಿಲ್ಲೆಯಲ್ಲಿ 3,22,೦೦೦ ಸಾವಿರ ಜನರು ನೋಂದಾಯಿಸಿದ್ದಾರೆ ಪರಿಹಾರ ಬಂದಿರುವುದು 1,672 ರೈತರಿಗೆ ಮಾತ್ರ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications