ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Kodagu Coffee Mela : ಡಿಸೆಂಬರ್ 10, 11ರಂದು ಕೊಡಗು ಕಾಫಿ ಮೇಳ

|
Google Oneindia Kannada News

ಮಡಿಕೇರಿ, ಡಿಸೆಂಬರ್ 06; ಕೊಡಗು ಕಾಫಿ ಮೇಳಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಮಡಿಕೇರಿಯ ರಾಜಾಸೀಟ್‌ನಲ್ಲಿ ಮೊದಲ ಬಾರಿಗೆ ಕೊಡಗು ಕಾಫಿ ಮೇಳ ನಡೆಯಲಿದೆ ಎಂದು ಕೊಡಗು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮಾತನಾಡಿ, "ಡಿಸೆಂಬರ್ 10 ಮತ್ತು 11ರಂದು ಕೊಡಗು ಕಾಫಿ ಮೇಳವು ನಗರದ ರಾಜಾಸೀಟ್‌ನಲ್ಲಿ ನಡೆಯಲಿದೆ" ಎಂದು ಹೇಳಿದರು.

Namma Metro ನಿಲ್ದಾಣಗಳಲ್ಲಿ ತಿಂಡಿ, ಟೀ-ಕಾಫಿ ಒದಗಿಸುವ ಕಿಯೋಸ್ಕ್ ಸ್ಥಾಪನೆNamma Metro ನಿಲ್ದಾಣಗಳಲ್ಲಿ ತಿಂಡಿ, ಟೀ-ಕಾಫಿ ಒದಗಿಸುವ ಕಿಯೋಸ್ಕ್ ಸ್ಥಾಪನೆ

ಕಾಫಿ ಮಂಡಳಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಎರಡನೇ ಶನಿವಾರ ಮತ್ತು ಭಾನುವಾರ ಗ್ರೇಟರ್ ರಾಜಸೀಟ್‌ನಲ್ಲಿ ಕೊಡಗು ಕಾಫಿ ಮೇಳವನ್ನು ಆಯೋಜಿಸಲಾಗಿದೆ" ಎಂದರು.

ಕೇರಳದಲ್ಲಿ ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನಕೇರಳದಲ್ಲಿ ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನ

Kodagu Coffe Mela At Raja Seat Madikeri December 10 And 11

"ವಾರಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜಸೀಟ್‌ಗೆ ಭೇಟಿ ನೀಡುತ್ತಾರೆ. ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೊಡಗು ಕಾಫಿ ಮೇಳ ಆಯೋಜಿಸಲಾಗಿದೆ" ಎಂದು ತಿಳಿಸಿದರು.

ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷಕ್ಕೆ ಯತ್ನ: ಆರೋಪ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷಕ್ಕೆ ಯತ್ನ: ಆರೋಪ

ಕೊಡಗು ಜಿಲ್ಲೆಯಲ್ಲಿ ಉತ್ಕೃಷ್ಟ ಕಾಫಿ ಬೆಳೆ ಬೆಳೆಯುತ್ತಿದ್ದು, ಈ ಕಾಫಿ ಬೆಳೆಯಿಂದ ಕಾಫಿ ಉತ್ಪಾದನೆ ಮತ್ತು ಮಾರಾಟ, ಕಾಫಿ ಬೀಜದಿಂದ ಚಿಕೋರಿ ಬಳಸಿ ಕಾಫಿ ಪುಡಿ ಮಾಡುವುದು ಹೀಗೆ ಪ್ರತಿ ಹಂತದಲ್ಲಿ ವಿವರಿಸಲಾಗುತ್ತದೆ. ಕೊಡಗಿನ ಕಾಫಿಯನ್ನು ಎಲ್ಲಾ ಕಡೆ ಪರಿಚಯಿಸುವುದು ಈ ಮೇಳದ ಉದ್ದೇಶವಾಗಿದೆ.

ಒಂದು ಜಿಲ್ಲೆ, ಒಂದು ಉತ್ಪನ್ನ; ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೊಡಗು ಜಿಲ್ಲೆಗೆ ಕಾಫಿ ಬೆಳೆ ಆಯ್ಕೆಯಾಗಿದ್ದು, ಕಾಫಿ ಬೆಳೆಗೆ ಮತ್ತಷ್ಟು ಮಾರುಕಟ್ಟೆ ಒದಗಿಸಬೇಕಿದೆ. ಕಾಫಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಇದುವರೆಗೆ 12 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. 479 ರೈತರಿಗೆ ಕಾಫಿ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ.

Kodagu Coffe Mela At Raja Seat Madikeri December 10 And 11

ರಾಜಾಸೀಟ್ ಬಳಿ ಇರುವ ಕೂರ್ಗ್ ವಿಲೇಜ್‍ಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳ ಕ್ರೀಯಾಶೀಲ ಚಟುವಟಿಕೆಗೆ ಒತ್ತು ನೀಡಲಾಗುತ್ತದೆ. ನೆಹರು ಮಂಟದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

ಕಾಫಿ ಮೇಳದಲ್ಲಿ ವಿವಿಧ ಬ್ರಾಂಡ್‌ಗಳ ಕಾಫಿ, ಸ್ವಸಹಾಯ ಗುಂಪುಗಳ ಉತ್ಪನ್ನಗಳು ಬ್ರೂಯಿಂಗ್ ಯಂತ್ರೋಪಕರಣಗಳು ಪ್ರದರ್ಶನದಲ್ಲಿ ಇರಲಿವೆ. ಡಿಸೆಂಬರ್ 24 ಮತ್ತು 25ರಂದು ಜೇನುಮೇಳ ಹಾಗೂ ಜನವರಿ 2ನೇ ವಾರದಲ್ಲಿ ವೈನ್ ಮೇಳ ಸಹ ಆಯೋಜನೆ ಮಾಡಲು ಚಿಂತನೆ ನಡೆಸಲಾಗಿದೆ.

ಕೊಡಗು ಕಾಫಿ ಮೇಳದಲ್ಲಿ ಸ್ಟಾಲ್ ನಿರ್ಮಾಣಕ್ಕೆ ಸಹ ದರ ನಿಗದಿ ಮಾಡಲಾಗಿದೆ. ಕನಿಷ್ಠ 5 ರಿಂದ 15 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

English summary
Kodagu coffee mela at Raja seat Madikeri on December 10 and 11. First time Kodagu coffee mlea will be held at Raja seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X