ಬಹಳಷ್ಟು ಜಿಲ್ಲೆಗಳಲ್ಲಿ ಕೈಕೊಟ್ಟ ನೈಋತ್ಯ ಮುಂಗಾರು

ನೈಋತ್ಯ ಮುಂಗಾರು ಆರು ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ. 24 ಜಿಲ್ಲೆಗಳಲ್ಲಿ ತೀರ ಕ್ಷೀನವಾಗಿದೆ. ಐದು ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ವಿಪರೀತವೆನಿಸುವಷ್ಟು ಸುರಿದಿದೆ. 16 ಜಿಲ್ಲೆಗಳಲ್ಲಿ ಸಾಧಾರಣವಾಗಿದೆ. 4 ಜಿಲ್ಲೆಗಳಲ್ಲಿ ತುಂಬಾ ತೆಳುವಾಗಿ ಮಳೆಯಾಗಿದೆ. ಒಂದು ಜಿಲ್ಲೆಯಲ್ಲಂತೂ ಮಳೆಯೇ ಆಗಿಲ್ಲ.
ಬುಧವಾರದ ವೇಳೆಗೆ ಬೀದರಿನ ಔರಾದಿನಲ್ಲಿ ಗರಿಷ್ಠ 63.5 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹೆಚ್ಚು ಮಳೆಯಾಗಿದೆ. ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದೆ.
ಚಿಕ್ಕಬಳ್ಳಾಪುರ, ಗುಲ್ಬರ್ಗಾ, ಹಾಸನ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳ ಹಲವಾರು ಭಾಗಗಳಲ್ಲಿ ಸಾಧಾರಣ ಮತ್ತು ತುಸು ಹೆಚ್ಚು ಎನಿಸುವಷ್ಟು ಮಳೆಯಾಗಿದೆ.
ಶಿವಮೊಗ್ಗ, ಚಾಮರಾಜನಗರ, ಯಾದಗೀರ್, ಉತ್ತರ ಕನ್ನಡ, ಗದಗ, ಮೈಸೂರು, ಬೆಳಗಾವಿ, ಮಂಡ್ಯ, ದಾವಣಗೆರೆ, ಬಳ್ಳಾರಿ, ರಾಯಚೂರು, ಹಾವೇರಿ, ಬಿಜಾಪುರ, ಕೊಪ್ಪಳ, ಬೀದರ್, ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಸುಡು ಬಿಸಿಲು ಕಂಡುಬಂದಿದೆ.
ಕರ್ನಾಟಕದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 19ರ ನಡುವಣ ಅವಧಿಯಲ್ಲಿ ಶೇ. 23ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸರಾಸರಿ 764.5 ಮಿಮೀ ಮಳೆಯಾಗಬೇಕಿತ್ತು. ಆದರೆ ಈ ಭಾಗಗಳಲ್ಲಿ 589 ಮಿಮೀ ಮಳೆಯಾಗಿದೆ.


Click it and Unblock the Notifications
