ರೈತರ ಖಾತೆಗೆ ಹಣ ಹಾಕಲು ಅನುಮತಿ ಕೊಡಿ: ಆಯೋಗಕ್ಕೆ ರಾಜ್ಯ ಪತ್ರ
ಬೆಂಗಳೂರು, ಮಾರ್ಚ್ 27: ಸಾಲಮನ್ನಾ ಫಲಾನುಭವಿ ರೈತರುಗಳ ಖಾತೆಗೆ ಹಣ ಹಾಕಲು ಅವಕಾಶ ಮಾಡಿಕೊಡಿ ಎಂದು ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣಾ ನೀತಿ ಸಂಹಿತೆ ಇರುವ ಕಾರಣ ರಾಜ್ಯ ಸರ್ಕಾರದ ಯೋಜನೆಯಾದ ಸಾಲ ಮನ್ನಾದ ಹಣವನ್ನು ರೈತರ ಖಾತೆಗೆ ಹಾಕದಂತೆ ಚುನಾವಣಾ ಆಯೋಗ ಸೂಚಿಸಿತ್ತು.
ರೈತ ಫಲಾನುಭವಿಗಳಿಗೆ ಸಾಲಮನ್ನಾ ಮೊತ್ತ ಬಿಡುಗಡೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ಕೋರಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
— H D Kumaraswamy (@hd_kumaraswamy) March 27, 2019
ಚುನಾವಣಾ ಆಯೋಗವು ಕೇಂದ್ರ ಸರ್ಕಾರದ #pmksn ಯೋಜನೆ ಹಣಪಾವತಿಗೆ ಅನುಮತಿ ನೀಡಿರುವ ಮಾದರಿಯಲ್ಲೇ ರಾಜ್ಯದ ಮನವಿಗೂ ಸಕಾರಾತ್ಮಕ ಸ್ಪಂದನೆಯನ್ನು ನಿರೀಕ್ಷಿಸುತ್ತೇವೆ.
ಆದರೆ ಪ್ರಧಾನಿ ಅವರ 'ಕಿಸ್ಸಾನ್ ಸಮ್ಮಾನ್ ನಿಧಿ' ಯೋಜನೆಯ ಮೂಲಕ ರೈತರ ಖಾತೆಗೆ 2000 ರೂಪಾಯಿ ಹಣ ವರ್ಗಾವಣೆ ಆಗುತ್ತಿರುವುದು ನಿಂತಿಲ್ಲ ಹೀಗಾಗಿ, ನಮಗೂ ರೈತರ ಖಾತೆಗೆ ಹಣ ಹಾಕಲು ಅವಕಾಶ ಕೊಡಿ ಎಂದು ರಾಜ್ಯ ಸರ್ಕಾರವು ಪತ್ರ ಬರೆದಿದೆ.

ಸರ್ಕಾರದ ಪರವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ರೈತರ ಖಾತೆಗೆ ಹಣ ವರ್ಗಾಯಿಸಲು ಅವಕಾಶ ಕೊಡಿ ಎಂದು ಕೋರಿದ್ದಾರೆ.
ಇದೇ ವಿಷಯವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ತೀವ್ರ ಅಸಮಾಧಾನವನ್ನು ಕೆಲವು ದಿನಗಳ ಹಿಂದೆ ವ್ಯಕ್ತಪಡಿಸಿದ್ದರು. ಕೇಂದ್ರದ ಯೋಜನೆಗೆ ನೀತಿ ಸಂಹಿತೆ ವಿಧಿಸಲಾಗಿಲ್ಲ, ಆದರೆ ನಮ್ಮ ಯೋಜನೆಗೆ ಮಾತ್ರ ನೀತಿ ಸಂಹಿತೆ ಹೇರಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದರು.












Click it and Unblock the Notifications