ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಂದ್; ಸಂಘಟನೆಗಳ ಪ್ರಮುಖ ಬೇಡಿಕೆಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಒಟ್ಟಾಗಿ 'ಐಕ್ಯ ಹೋರಾಟ ಸಮಿತಿ' ಎಂಬ ಹೆಸರಿನಲ್ಲಿ ಬಂದ್‌ ಕರೆ ನೀಡಿವೆ.

ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ. ಆಟೋ, ಟ್ಯಾಕ್ಸಿ ಚಾಲಕರು ಸಹ ಬಂದ್‌ಗೆ ಬೆಂಬಲ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಸಹ ಬಂದ್‌ಗೆ ಬೆಂಬಲ ನೀಡಿದೆ ಎಂದು ವೇದಿಕೆ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಹೇಳಿದ್ದಾರೆ.

ಸೆ. 28ರ ಕರ್ನಾಟಕ ಬಂದ್; ಕೆಎಸ್ಆರ್‌ಟಿಸಿಯ ಪ್ರಕಟಣೆ ಸೆ. 28ರ ಕರ್ನಾಟಕ ಬಂದ್; ಕೆಎಸ್ಆರ್‌ಟಿಸಿಯ ಪ್ರಕಟಣೆ

ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಹಾಲು, ದಿನಸಿ, ಆಸ್ಪತ್ರೆ, ಅಂಬ್ಯುಲೆನ್ಸ್‌ಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಮುಂದಾಗಿವೆ.

ಸೋಮವಾರ ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ? ಸೋಮವಾರ ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

Karnataka Bandh: Demands Of The Organizations

ರೈತರ ಜೊತೆಗಿನ ಸಿಎಂ ಸಭೆ ವಿಫಲ; ಸೋಮವಾರ ಕರ್ನಾಟಕ ಬಂದ್ ರೈತರ ಜೊತೆಗಿನ ಸಿಎಂ ಸಭೆ ವಿಫಲ; ಸೋಮವಾರ ಕರ್ನಾಟಕ ಬಂದ್

ಬಂದ್ ಹಿನ್ನಲೆಯಲ್ಲಿ ಬೇಡಿಕೆಗಳ ಪಟ್ಟಿ ಇಲ್ಲಿದೆ.

* ಉಳುವ ಭೂಮಿಯನ್ನು ಉಳ್ಳವರಿಗೆ ಹಸ್ತಾಂತರಿಸುತ್ತಿರುವ ರೈತ ವಿರೋಧಿ ನೀತಿಯನ್ನು ಖಂಡಿಸಿ

* ರೈತರ ಬೆಳೆಯನ್ನು ಕಾರ್ಪೊರೇಟ್ ವಿಷ ಜಾಲಕ್ಕೆ ಸಿಲುಕಿಸುತ್ತಿರುವ ಷಡ್ಯಂತ್ರವನ್ನು ಖಂಡಿಸಿ

* ಗುತ್ತಿಗೆ ಹೆಸರಿನಲ್ಲಿ ಕೃಷಿಯನ್ನು ಕಾರ್ಪೊರೇಟ್ ಜೀತಕ್ಕೆ ತಳ್ಳುತ್ತಿರುವ ದುಷ್ಟತನವನ್ನು ಖಂಡಿಸಿ

* ಖಾಸಗಿಕರಣದ ಹೆಸರಿನಲ್ಲಿ ವಿದ್ಯುತ್ ಸಬ್ಸಿಡಿಯನ್ನು ಕಸಿದುಕೊಳ್ಳುವ ಸಂಚನ್ನು ಖಂಡಿಸಿ

* ಕೈಗಾರಿಕಾ ನಿರಾಳತೆಯ ಹೆಸರಿನಲ್ಲಿ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕೌರ್ಯವನ್ನು ಖಂಡಿಸಿ

* ನವ ಶಿಕ್ಷಣ ನೀತಿಯ ಹೆಸರಿನಲ್ಲಿ ಶಿಕ್ಷಣವನ್ನು ತೂಗುವ ಹಿಂದಿಯನ್ನು ಹೇರುವ ನಯವಂಚನೆಯನ್ನು ಖಂಡಿಸಿ

English summary
Farmers called Karnataka bandh on September 28, 2020. Here are the list of demands by organizations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X