ದರ್ಶನ್ ಪುಟ್ಟಣ್ಣಯ್ಯ ಪರ ತಮಿಳುನಾಡಿನ ರೈತರ ಪ್ರಚಾರ
ಮಂಡ್ಯ, ಮೇ 06: ಮೇಲುಕೋಟೆಯಿಂದ ಸ್ವರಾಜ್ ಇಂಡಿಯಾದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದರ್ಶನ್ ಪುಟ್ಟಣ್ಣಯ್ಯ ಅವರ ಪರ ತಮಿಳುನಾಡಿನ ರೈತರು ಪ್ರಚಾರ ನಡೆಸಿ, ಅಚ್ಚರಿ ಮೂಡಿಸಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ ಪರ ಗುಜರಾತಿನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ, ನಟ ಸೆಂಚುರಿ ಗೌಡ ಅವರು ಪ್ರಚಾರ ನಡೆಸಿದ ಬಳಿಕ ತಮಿಳುನಾಡಿನಿಂದ ಬಂದ ರೈತ ಸಮೂಹ ಬೆಂಬಲ ವ್ಯಕ್ತಪಡಿಸಿದೆ.

ತಮಿಳುನಾಡಿಗೆ 4 ಟಿಎಂಸಿ ನೀರು ಹಂಚುವಂತೆ ಸುಪ್ರೀಂಕೋರ್ತ್ ನಿರ್ದೇಶನ ನೀಡಿರುವ ಸಂದರ್ಭದಲ್ಲೇ, ಕಾವೇರಿ ಕೊಳ್ಳದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರ ಪರ ತಮಿಳುನಾಡಿನ ರೈತರು ಪ್ರಚಾರ ನಡೆಸಿದ್ದಾರೆ.
ತಮಿಳುನಾಡಿನಿಂದ ಬಂದ ರೈತರ ತಂಡವೊಂದು ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರ ಪರ ಮತಯಾಚಿಸಿದ್ದಾರೆ.

ರೈತ ನಾಯಕರಾಗಿದ್ದ, ಈ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದ ನಂತರ ಅವರ ಸ್ಥಾನ ತುಂಬಲು ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಕಣಕ್ಕಿಳಿದಿದ್ದಾರೆ.
ತಮಿಳುನಾಡಿನ ವಿವಿಧ ರೈತ ಸಂಘಟನೆಗಳ 30ಕ್ಕೂ ರೈತರು ಪಾಂಡವಪುರದ ಬೀದಿಗಳಲ್ಲಿ ಮತಯಾಚನೆ ಮಾಡಿ, ದರ್ಶನ್‌ಪುಟ್ಟಣ್ಯರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.












Click it and Unblock the Notifications