• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಎಷ್ಟು ಹೆಚ್ಚಳ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2022-23 ರ ಹಿಂಗಾರು ಮಾರುಕಟ್ಟೆ ಹಂಗಾಮಿಗೆ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ (ಎಂಎಸ್‌ಪಿ) ಹೆಚ್ಚಳವನ್ನು ಅನುಮೋದಿಸಿದೆ.

ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಲು ಸರ್ಕಾರವು -23 ರ ಹಿಂಗಾರು ಮಾರುಕಟ್ಟೆ ಹಂಗಾಮಿಗೆ ಹಿಂಗಾರು ಬೆಳೆಗಳ ಎಂಎಸ್‌ಪಿಯನ್ನು ಹೆಚ್ಚಿಸಿದೆ. ಹಿಂದಿನ ವರ್ಷಕ್ಕಿಂತ ಎಂಎಸ್‌ಪಿಯಲ್ಲಿ ಹೆಚ್ಚಳವನ್ನು ಲೆಂಟಿಲ್ (ಮಸೂರ) ಮತ್ತು ರಾಪ್ಸೀಡ್ಸ್ & ಸಾಸಿವೆ (ಪ್ರತಿ ಕ್ವಿಂಟಾಲ್‌ಗೆ ರೂ .400) ಮತ್ತು ಕಡಲೆ (ಕ್ವಿಂಟಾಲ್‌ಗೆ ರೂ .130) ಗೆ ಮಾಡಲಾಗಿದೆ. ಕುಸುಬೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಾಲ್‌ಗೆ ರೂ .114 ಹೆಚ್ಚಳವಾಗಿದೆ. ವಿವಿಧ ಬೆಲೆಗಳು ಬೆಳೆ ವೈವಿಧ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

 ದೇಶದ 75,000 ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಸಸ್ಯಗಳ ಕೃಷಿ ದೇಶದ 75,000 ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಸಸ್ಯಗಳ ಕೃಷಿ

2022-23 ರ ಮಾರುಕಟ್ಟೆ ಹಂಗಾಮಿಗೆ ಎಲ್ಲಾ ಹಿಂಗಾರು ಬೆಳೆಗಳಿಗೆ ಎಂಎಸ್‌ಪಿ (ರೂ./ಕ್ವಿಂಟಾಲ್‌ನಲ್ಲಿ)

ಎಲ್ಲಾ ಹಿಂಗಾರು ಬೆಳೆಗಳಿಗೆ ಎಂಎಸ್‌ಪಿ (ರೂ./ಕ್ವಿಂಟಾಲ್‌ನಲ್ಲಿ)
ಬೆಳೆ 2021-22ರ ಮಾರುಕಟ್ಟೆ ಹಂಗಾಮಿಗೆ ಎಂಎಸ್‌ಪಿ 2022-23ರ ಮಾರುಕಟ್ಟೆ ಹಂಗಾಮಿಗೆ ಎಂಎಸ್‌ಪಿ 2022-23ರ ಮಾರುಕಟ್ಟೆ ಹಂಗಾಮಿಗೆ ಎಂಎಸ್‌ಪಿ ಉತ್ಪಾದನಾ ವೆಚ್ಚ* 2022-23 ಎಂಎಸ್‌ಪಿಯಲ್ಲಿ ಹೆಚ್ಚಳ(ಸಂಪೂರ್ಣ) ವೆಚ್ಚದ ಮೇಲೆ ಆದಾಯ(ಶೇ.)
ಗೋಧಿ 1975 2015 1008 40 100
ಬಾರ್ಲಿ 1600 1635 1019 35 60
ಕಡಲೆ 5100 5230 3004 130 74
ಮಸೂರ 5100 5500 3079 400 79
ರಾಪ್ ಸೀಡ್& ಸಾಸಿವೆ 4650 5050 2523 400 100
ಕುಸುಬೆ 5327 5441 3627 114 50

ಮಾನವ ದುಡಿಮೆಯ ಕೂಲಿ, ಎತ್ತುಗಳ ಕೆಲಸ/ಯಂತ್ರದ ಕೆಲಸ, ಭೂಮಿಯ ಭೋಗ್ಯಕ್ಕೆ ಪಾವತಿಸಿದ ಹಣ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯನಿರ್ವಹಣೆಗೆ ಡೀಸೆಲ್/ವಿದ್ಯುತ್, ಇತ್ಯಾದಿ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಅಂದಾಜು ಮೌಲ್ಯಗಳು ಇದರಲ್ಲಿ ಸೇರಿವೆ.

2022-23 ರ ಮಾರುಕಟ್ಟೆ ಹಂಗಾಮಿನ ಹಿಂಗಾರು ಬೆಳೆಗಳಿಗೆ ಎಮ್‌ಎಸ್‌ಪಿಯ ಹೆಚ್ಚಳವು ಕೇಂದ್ರ ಬಜೆಟ್ 2018-19ರ ಘೋಷಣೆಗೆ ಅನುಗುಣವಾಗಿದೆ. ಇದರಲ್ಲಿ ಎಮ್‌ಎಸ್‌ಪಿಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸಲಾಗಿದೆ. ಇದು ರೈತರಿಗೆ ಸಮಂಜಸವಾದ ನ್ಯಾಯೋಚಿತ ಬೆಲೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ನಿರೀಕ್ಷಿತ ಆದಾಯವು ಗೋಧಿ ಮತ್ತು ರಾಪ್ಸೀಡ್ ಮತ್ತು ಸಾಸಿವೆಗೆ (ತಲಾ 100%) ಅತಿ ಹೆಚ್ಚು ಎಂದು ಅಂದಾಜಿಸಲಾಗಿದೆ. ದ್ವಿದಳ ಧಾನ್ಯ (79%) ದಲ್ಲಿ; ಕಡಲೆ (74%); ಬಾರ್ಲಿ (60%); ಕುಸುಬೆ (50%) ನಂತರದ ಸ್ಥಾನದಲ್ಲಿವೆ.

 ಕರ್ನಾಟಕದಲ್ಲಿ MSP ಬೆಲೆಗೆ ಹೆಸರು ಮತ್ತು ಉದ್ದು ಖರೀದಿಗೆ ಅಸ್ತು ಕರ್ನಾಟಕದಲ್ಲಿ MSP ಬೆಲೆಗೆ ಹೆಸರು ಮತ್ತು ಉದ್ದು ಖರೀದಿಗೆ ಅಸ್ತು

ರೈತರು ಎಣ್ಣೆಬೀಜಗಳು, ದ್ವಿದಳ ಧಾನ್ಯಗಳು ಮತ್ತು ಒರಟು ಸಿರಿಧಾನ್ಯಗಳನ್ನು ದೊಡ್ಡ ಪ್ರದೇಶದಲ್ಲಿ ಬೆಳೆಯುವುದನ್ನು ಉತ್ತೇಜಿಸಲು ಮತ್ತು ಉತ್ತಮ ತಂತ್ರಜ್ಞಾನ ಮತ್ತು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಾಗೂ ಬೇಡಿಕೆ -ಪೂರೈಕೆ ನಡುವಿನ ಅಸಮತೋಲನವನ್ನು ಸರಿಪಡಿಸಲು ಕಳೆದ ಕೆಲವು ವರ್ಷಗಳಲ್ಲಿ ಎಮ್‌ಎಸ್‌ಪಿಗಳನ್ನು ಈ ಬೆಳೆಗಳ ಪರವಾಗಿ ಮರುಸಂಯೋಜಿಸಲು ಪ್ರಯತ್ನಿಸಲಾಗಿದೆ.

ಹೆಚ್ಚುವರಿಯಾಗಿ, ಕೇಂದ್ರ ಪ್ರಾಯೋಜಿತ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ -ಎಣ್ಣೆ ತಾಳೆ ಯೋಜನೆಯನ್ನು ಇತ್ತೀಚೆಗೆ ಸರ್ಕಾರ ಘೋಷಿಸಿದೆ. ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಒಟ್ಟು ರೂ .11,040 ಕೋಟಿಯೊಂದಿಗೆ, ಈ ಯೋಜನೆಯು ಕ್ಷೇತ್ರದ ವಿಸ್ತರಣೆ ಮತ್ತು ಉತ್ಪಾದಕತೆಗೆ ನೆರವು ನೀಡುವುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಉದ್ಯೋಗ ಸೃಷ್ಟಿಸುತ್ತದೆ.

2018 ರಲ್ಲಿ ಸರ್ಕಾರ ಘೋಷಿಸಿದ ಯೋಜನೆ "ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣಾ ಅಭಿಯಾನ" (PM-AASHA) ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ನೀಡಲು ಸಹಾಯ ಮಾಡುತ್ತದೆ. ಈ ಯೋಜನೆಯು ಮೂರು ಉಪ ಯೋಜನೆಗಳನ್ನು ಒಳಗೊಂಡಿದೆ, ಅವುಗಳೆಂದರೆ, ಬೆಲೆ ಬೆಂಬಲ ಯೋಜನೆ (ಪಿ ಎಸ್ ಎಸ್), ಬೆಲೆ ಕೊರತೆ ಪಾವತಿ ಯೋಜನೆ (ಪಿ ಡಿ ಪಿ ಎಸ್) ಮತ್ತು ಖಾಸಗಿ ಖರೀದಿ ಮತ್ತು ಸಂಗ್ರಹ ಯೋಜನೆ (ಪಿ ಪಿ ಎಸ್ ಎಸ್).

English summary
The Cabinet Committee on Economic Affairs (CCEA) chaired by Narendra Modi has approved the increase in the Minimum Support Prices (MSP) for all mandated Rabi crops for Rabi Marketing Season (RMS) 2022-23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X