ಬೆಳಗಾವಿಯ ಜೆಡಿಎಸ್ ಸಮಾವೇಶದ ನಿರ್ಣಯಗಳು
ಬೆಳಗಾವಿ, ಜೂ. 30 : ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಎಚ್.ಡಿ.ಕುಮಾರಸ್ವಾಮಿ ಧಾರವಾಡದಿಂದ ಬೆಳಗಾವಿ ತನಕ ನಡೆಸಿದ ಪಾದಯಾತ್ರೆ ಮುಕ್ತಾಯಗೊಂಡಿದೆ. ಬೆಳಗಾವಿಯಲ್ಲಿ ಸೋಮವಾರ ಬೃಹತ್ ಸಮಾವೇಶ ನಡೆಸಿ, ಆಗಸ್ಟ್ 9ರೊಳಗೆ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕುಮಾರಸ್ವಾಮಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ಬೆಳಗಾವಿಯ ಸಿ.ಪಿ.ಹೆಡ್ ಮೈದಾನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿ, ರೈತರ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.[ಕುಮಾರಸ್ವಾಮಿ ಪಾದಯಾತ್ರೆ ಚಿತ್ರಗಳು]
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ಆಗಸ್ಟ್ 9ರೊಳಗಾಗಿ ಈಡೇರಿಸದಿದ್ದರೆ ರಾಜ್ಯಾದ್ಯಂತ ರೈತರೊಂದಿಗೆ 'ಕಾಂಗ್ರೆಸ್ ಸರ್ಕಾರ ಹಠವೋ ಜನಾಂದೋಲನ' ಕೈಗೊಳ್ಳುವುದಾಗಿ ಸಮಾವೇಶದಲ್ಲಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. [ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]
'ರೈತರ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಅನ್ನದಾತ ತಾನು ಬೆಳೆದ ಕಬ್ಬಿನ ಗದ್ದೆಗೆ ಬಿದ್ದು ಸಾಯುವ ಸ್ಥಿತಿ ತಂದ ನಿಮಗೆ ಅವರೆಲ್ಲರ ಶಾಪ ತಟ್ಟದೇ ಇರುವುದಿಲ್ಲ. ಇನ್ನಾದರೂ ರೈತರ ಸಂಕಷ್ಟವನ್ನು ನೋಡಿ' ಎಂದು ದೇವೇಗೌಡರು ಸರ್ಕಾರಕ್ಕೆ ಸಲಹೆ ನೀಡಿದರು. ಸಮಾವೇಶದಲ್ಲಿ 10 ನಿರ್ಣಯಗಳನ್ನು ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು. ಸಮಾವೇಶದ ಚಿತ್ರಗಳು

ಜೆಡಿಎಸ್ ಪಾದಯಾತ್ರೆ ಮುಕ್ತಾಯ
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗಹರಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಧಾರವಾಡದಿಂದ ಬೆಳಗಾವಿ ತನಕ ನಡೆಸಿದ ಪಾದಯಾತ್ರೆ ಮುಕ್ತಾಯಗೊಂಡಿದೆ. ಜೂನ್ 25ಕ್ಕೆ ಆರಂಭವಾದ ಪಾದಯಾತ್ರೆ 29ಕ್ಕೆ ಬೆಳಗಾವಿಯಲ್ಲಿ ಮುಕ್ತಾಯಗೊಂಡಿದೆ.

ಪಾದಯಾತ್ರೆ ಮುಗಿಸಿ ಸಮಾವೇಶ
ಸೋಮವಾರ ಮಧ್ಯಾಹ್ನ ಬೆಳಗಾವಿಯ ಸಿ.ಪಿ.ಹೆಡ್ ಮೈದಾನದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಯಿತು. ಪಾದಯಾತ್ರೆ ಮುಕ್ತಾಯಗೊಂಡ ನಂತರ ಸಮಾವೇಶ ನಡೆಸಿ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಕ್ಕೆ ಆಗಸ್ಟ್ 9ರ ಗಡುವು
ರೈತರ ಸಮಸ್ಯೆಗಳನ್ನು ಪರಿಹರಿಸಲು ಆಗಸ್ಟ್ 9ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡುತ್ತೇವೆ ಎಂದು ಕುಮಾರಸ್ವಾಮಿ ಸಮಾವೇಶದಲ್ಲಿ ಹೇಳಿದರು. ನಂತರವೂ ಸಮಸ್ಯೆ ಬಗೆಹರಿಸದಿದ್ದರೆ ದೇವೇಗೌಡರ ನೇತೃತ್ವದಲ್ಲಿ 'ಕಾಂಗ್ರೆಸ್ ಸರ್ಕಾರ ಹಠವೋ ಜನಾಂದೋಲನ' ಕೈಗೊಳ್ಳುವುದಾಗಿ ಸಮಾವೇಶದಲ್ಲಿ ಎಚ್ಚರಿಕೆ ನೀಡಿದರು.

ಸರ್ಕಾರ ಕಣ್ಣುಮುಚ್ಚಿ ಕುಳಿತಿದೆಯೇ?
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ 600 ಕೋಟಿ ರೂ. ಮೌಲ್ಯದ ಸಕ್ಕರೆ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳುವ ಸರ್ಕಾರ, ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿದರೆ ಬೆಳೆದು ನಿಂತ ಕಬ್ಬನ್ನು ಏನು ಮಾಡುತ್ತೀರಿ?, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆಯೇ? ಎಂದು ಪ್ರಶ್ನಿಸಿದರು.

ಹಳ್ಳಿಗಳ ಅಭಿವೃದ್ಧಿಗಾಗಿ ಏನು ಮಾಡಿದ್ದೀರಿ?
ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡರು, 'ನರೇಂದ್ರ ಮೋದಿ ಅವರು ಶೇ.30ರಷ್ಟು ಜನರು ವಾಸಿಸುವ ದೇಶದ 500 ನಗರಗಳ ಅಭಿವೃದ್ಧಿಗಾಗಿ 44 ಸಾವಿರ ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿದ್ದಾರೆ. ರಾಜ್ಯ ಸರ್ಕಾರವೂ ಹಾಗೆ ಮಾಡುತ್ತಿದೆ. ಹಳ್ಳಿಗಳ ಅಭಿವೃದ್ಧಿಗೆ ಏನು ಮಾಡಿದ್ದೀರಿ?' ಎಂದು ಪ್ರಶ್ನಿಸಿದರು.

ಇನ್ನಾದರೂ ರೈತರ ಸಂಕಷ್ಟವನ್ನು ನೋಡಿ
'ರೈತರ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಅನ್ನದಾತ ತಾನು ಬೆಳೆದ ಕಬ್ಬಿನ ಗದ್ದೆಗೆ ಬಿದ್ದು ಸಾಯುವ ಸ್ಥಿತಿ ತಂದ ನಿಮಗೆ ಅವರೆಲ್ಲರ ಶಾಪ ತಟ್ಟದೇ ಇರುವುದಿಲ್ಲ. ಇನ್ನಾದರೂ ರೈತರ ಸಂಕಷ್ಟವನ್ನು ನೋಡಿ' ಎಂದು ಭಾಷಣ ಮಾಡುವಾಗ ದೇವೇಗೌಡರು ಭಾವುಕರಾದರು.

ಸಮಾವೇಶದ ಹಕ್ಕೊತ್ತಾಯಗಳು
ಸಮಾವೇಶದ ಹಕ್ಕೊತ್ತಾಯಗಳನ್ನು ವೈ.ಎಸ್.ವಿ.ದತ್ತಾ ಮಂಡಿಸಿದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ 10 ಸಾವಿರಕ್ಕೂ ಅಧಿಕ ರೈತರು ಇದಕ್ಕೆ ಸಮ್ಮತಿ ಸೂಚಿಸಿದರು.
* ಕಬ್ಬು ಬೆಳೆಗಾರರಿಗೆ ತಕ್ಷಣವೇ ಸಂಪೂರ್ಣ ಬಾಕಿ ಹಣವನ್ನು ಬೊಕ್ಕಸದಿಂದ ನೀಡಬೇಕು. ಇದನ್ನು ಸರ್ಕಾರ ಬೆಳಗಾವಿ ಅಧಿವೇಶನದಲ್ಲೇ ಘೋಷಣೆ ಮತ್ತು ಅನುಷ್ಠಾನಕ್ಕೆ ತರಬೇಕು.
* ದ್ರಾಕ್ಷಿ ಹಾಗೂ ಇನ್ನಿತರ ಬೆಳೆಗಾರರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.

ಪ್ರಮುಖ ಹಕ್ಕೊತ್ತಾಯಗಳು
* ರೈತರ ಸಾಲ ವಸೂಲಾತಿ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಸಾಲ ತೀರಿಸಲು ಸಾಧ್ಯವಾಗುವಂತಹ ಸರಳ ಪರ್ಯಾಯ ಕ್ರಮಗಳನ್ನು ಘೋಷಿಸಬೇಕು.
* ಕೃಷಿ ಬೆಲೆ ಆಯೋಗವನ್ನು ಬಲಗೊಳಿಸಬೇಕು. ರೈತರೇ ನೀತಿ ನಿರ್ಣಾಯಕರಾಗಿರುವಂತೆ ರೈತ ಪ್ರತಿನಿಧಿಗಳನ್ನು ಸೇರಿಸಬೇಕು.

ಹಕ್ಕೊತ್ತಾಯಗಳು
* ಉ-ಕ ಭಾಗದಲ್ಲಿ ಕುಂಟುತ್ತಾ ಸಾಗಿರುವ ಕಳಸಾ-ಬಂಡೂರಿಯೂ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಬೇಕು.
* ಅಡಕೆ, ಕಾಫಿ, ತೆಂಗು ಬೆಳೆಗಾರರ ನೆರವಿಗೆ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾವಿಸಬೇಕು.












Click it and Unblock the Notifications