ನೇಪಥ್ಯಕ್ಕೆ ಸರಿದ ಹೆಂಗಳೆಯರ ನೆಚ್ಚಿನ 'ಮೈಸೂರು ಮಲ್ಲಿಗೆ'
ಮೈಸೂರು, ಏಪ್ರಿಲ್ 23:ಮೈಸೂರು ನಗರಿ ಅಂದರೆ ಸಾಕು ನೆನಪಾಗುವುದು ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ದಸರಾ ಹೀಗೆ ಹತ್ತು ಹಲವು ಹೆಸರುಗಳು. ಅದರೊಟ್ಟಿಗೆ ಮೈಸೂರು ಮಲ್ಲಿಗೆ ತನ್ನದೇ ಆದ ಐತಿಹಾಸಿಕ ಹೆಸರನ್ನು ಎಲ್ಲೆಡೆ ಪಸರಿಸಿದೆ. ಆದರೆ ಇದೇ ಹೂವು ಕಾರಣಾಂತರಗಳಿಂದ ನೇಪಥ್ಯಕ್ಕೆ ಸರಿಯುತ್ತಿದೆ.
ಹೌದು, ಮಲ್ಲಿಗೆ ನಗರಿಯ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಬೆಳೆಯಲ್ಪಡುತ್ತಿದ್ದ ಮೈಸೂರು ಮಲ್ಲಿಗೆ ಈಗ ಕಣ್ಮರೆಯಾಗಿದೆ. ದಿನನಿತ್ಯವೂ ದೇವರಾಜ ಮಾರುಕಟ್ಟೆ ಭಾಗದಲ್ಲಿ ಎರಡು ಸಾಲುಗಳಲ್ಲಿ ದುಬಾರಿ ಬೆಲೆಗೆ ಮೈಸೂರು ಮಲ್ಲಿಗೆ ಹೂ ಮಾರಾಟ ಆಗುತ್ತಿತ್ತು.
ಪ್ರವಾಸಿಗರು ಬಂದರೆ ಸಾಕು ಮೊದಲು ಮೈಸೂರು ಮಲ್ಲಿಗೆಯ ಘಮಲನ್ನು ಪಡೆದು ಮುಡಿದು ತೆರಳದೇ ಇರುತ್ತಿರಲಿಲ್ಲ. ಆದರೆ ಸದ್ಯ ಇದೇ ಮೈಸೂರು ಮಲ್ಲಿಗೆ ಬೆಳೆಯುವವರೇ ಇಲ್ಲದಂತಾಗಿದೆ.
ತಮಿಳುನಾಡಿನ ಸತ್ಯಮಂಗಲ ಮತ್ತು ಕೊಯಮತ್ತೂರುಗಳಲ್ಲಿ ಬೆಳೆದ ಮಲ್ಲಿಗೆ ಮೈಸೂರಿಗೆ ಸದ್ಯ ಬರುತ್ತಿದೆ. ಈ ಕೇಂದ್ರದಿಂದಲೇ ಮೈಸೂರು ಮಲ್ಲಿಗೆ ಹೆಸರಿನಲ್ಲಿ ಬೆಂಗಳೂರು, ಹಾಸನ, ಭದ್ರಾವತಿ, ಶಿವಮೊಗ್ಗ, ಮಂಗಳೂರು ಮುಂತಾದ ಕಡೆ ಕಳುಹಿಸಲಾಗುತ್ತದೆ. ಮೈಸೂರು ಮಲ್ಲಿಗೆ ಎರಡು ವರ್ಷಗಳಿಗೊಮ್ಮೆ ಮಾತ್ರವೇ ಫಲ ಕೊಡುವ ಹೂವು.
ಎರಡು ವರ್ಷದವರೆಗೆ ಅದರ ನಿರ್ವಹಣೆ, ಕೂಲಿ, ಆಳಿನ ಕೆಲಸ ರೈತನ ಹೆಗಲ ಮೇಲೆ ಬೀಳಲಿದೆ. ಅಲ್ಲದೆ ಎರಡು ವರ್ಷದವರೆಗೆ ಯಾವುದೇ ಲಾಭವಿಲ್ಲದ ಕಾರಣ ರೈತರು ಈ ಹೂ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆ ಗೊತ್ತಾ?

ರೈತರಿಗೆ ಸಹಾಯ ಧನ
ತೋಟಗಾರಿಕಾ ಇಲಾಖೆ ಸಹ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ ಉಳಿಸಲು ಸಾಕಷ್ಟು ಉತ್ತೇಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ಈ ಬೆಳೆಗಳನ್ನು ಗುಂಪು ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಾಮಾನ್ಯ ರೈತರಿಗೆ ಶೇ.50ರಷ್ಟು ಮತ್ತು ಎಸ್ಸಿ ಎಸ್ಟಿಗಳಿಗೆ ಶೇ.90 ಸಹಾಯಧನ ನೀಡುತ್ತಿದೆ.

ಇಳುವರಿ ಬಹಳ ಕಡಿಮೆ
ಮೈಸೂರು ಮಲ್ಲಿಗೆ ಇಳುವರಿ ಬಹಳ ಕಡಿಮೆ, ಸುಗಂಧ ಹೆಚ್ಚು. ಮಾತ್ರವಲ್ಲ ವರ್ಷಕ್ಕೆ ಮಾರ್ಚ್ ನಂತರ ಮೇ ವರೆಗೆ ಮಾತ್ರವೇ ಹೂ ಬಿಡುತ್ತದೆ. ಅಷ್ಟೇ ಬೇಗ ಅರಳಿ, ಅಷ್ಟೇ ಬೇಗ ಮುದುಡುತ್ತದೆ.

ಬೆಳೆಯುವುದನ್ನೇ ಬಿಟ್ಟಿದ್ದಾರೆ
ಇನ್ನು ತಮಿಳುನಾಡಿನ ಗಿಡ ವರ್ಷಪೂರ್ತಿ ಹೂ ಬಿಡಲಿದ್ದು, ಪರಿಮಳ ಕಡಿಮೆ ಇದ್ದರೂ ನೋಡಲು ಸುಂದರವಾಗಿ ಕಾಣಿಸುತ್ತದೆ. ಬೇಗ ಬಾಡದ ಹಿನ್ನೆಲೆಯಲ್ಲಿ ಬೇರೆಡೆಗೆ ರಫ್ತು ಮಾಡುವುದಕ್ಕೂ ಸಹಕಾರಿ ಆಗಿರುವುದರಿಂದ ಆ ಹೂವಿಗೆ ಹೆಚ್ಚು ಬೇಡಿಕೆ. ರೈತರು ಮೈಸೂರು ಮಲ್ಲಿಗೆ ಬೆಳೆಯುವುದನ್ನೇ ಬಿಟ್ಟಿದ್ದಾರೆ ಎನ್ನುತ್ತಾರೆ ಹೂ ಬೆಳೆಗಾರರು.

ಹೆಚ್ಚು ಜನರು ಕೊಳ್ಳುವುದಿಲ್ಲ
ಮೈಸೂರು ಮಲ್ಲಿಗೆಗೆ ಹೋಲಿಸಿದರೆ ತಮಿಳುನಾಡಿನ ಮಲ್ಲಿಗೆಯ ಬೆಲೆಯಲ್ಲೂ ಸಹ ವ್ಯತಾಸವಿದೆ. ಮೈಸೂರು ಮಲ್ಲಿಗೆಯ ಬೆಲೆ ಅಧಿಕವಾಗಿದ್ದು, ಹೆಚ್ಚು ಜನರು ಕೊಳ್ಳುವುದಿಲ್ಲ ಎಂಬುದು ಹೂವಿನ ವ್ಯಾಪಾರಿಗಳ ನಿಲುವು. ಬೆಳೆ ಇಲ್ಲದೇ ಮೈಸೂರು ಮಲ್ಲಿಗೆ ನೇಪಥ್ಯಕ್ಕೆ ಸರಿಯುತ್ತಿರುವುದು ಮಾತ್ರ ಬೇಸರದ ಸಂಗತಿ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications