ಲಾಲ್ ಬಾಗ್ 'ಗುಲಾಬಿ' ಸಂಸತ್ ಎದುರು ಸೆಲ್ಫಿ ನಿಷೇಧ

ಬೆಂಗಳೂರು, ಆಗಸ್ಟ್, 13: ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ, ಪ್ರೇಯಸಿಯೊಂದಿಗೆ ಲಾಲ್ ಬಾಗ್ ಗೆ ತೆರಳಿ ಗುಲಾಬಿ ಸಂಸತ್ ಭವನದ ಎದುರು ಸೆಲ್ಫಿ ತೆಗೆದುಕೊಳ್ಳಬೇಕು ಎಂಬ ಆಸೆ ಇದ್ದರೆ ಬಿಟ್ಟುಬಿಡಿ. ಲಾಲ್ ಬಾಗ್ ನಲ್ಲಿ ಬೆಂಗಳೂರಿಗರ ಜನಾಕರ್ಷಣೆ ಕೇಂದ್ರವಾಗಿ ನಿಂತಿರುವ ಗುಲಾಬಿ ಸಂಸತ್ ಭವನದ ಎದುರು ಸೆಲ್ಫಿ ತೆಗೆದುಕೊಳ್ಳುವಂತೆ ಇಲ್ಲ.

ವಾರಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಜನಸಂದಣಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿರುವ ತೋಟಗಾರಿಕಾ ಇಲಾಖೆ ಸಂಸತ್ ಭವನದ ಎದುರು ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಜನರ ನಿಯಂತ್ರಣ ಮತ್ತು ಎಲ್ಲರಿಗೂ ಹೂವಿನ ಸಂಸತ್ ಭವನದ ಸೌಂದರ್ಯ ಆಸ್ವಾದನೆ ಮಾಡಲು ಅನಕೂಲವಾಗಲಿ ಎಂಬ ಕಾರಣದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಎಚ್.ಎಸ್.ಶಿವಕುಮಾರ್ ತಿಳಿಸಿದ್ದಾರೆ.[ಲಾಲ್ ಬಾಗ್ ಸಂಸತ್ ಭವನದಲ್ಲಿ 'ಗುಲಾಬಿ' ಅಧಿವೇಶನ]

bengaluru
Photo Credit:

ಪ್ರದರ್ಶನ ಆಗಸ್ಟ್ 15 ರವರೆಗೆ ನಡೆಯಲಿದೆ. ಎಲ್ಲಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 50, ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕವಿದೆ. ರಜಾ ದಿನಗಳಲ್ಲಿ ವಯಸ್ಕರು 60, ಮಕ್ಕಳು 20 ರೂ. ಶುಲ್ಕ ಪಾವತಿ ಮಾಡಬೇಕು.[ಗುಲಾಬಿ ಲೋಕದ ಚಿತ್ರಗಳು]

ಪ್ರವಾಸೋದ್ಯಮ ಇಲಾಖೆ ಬುಧವಾರ ರಾಷ್ಟ್ರೀಯ ಸ್ಮಾರಕಗಳ ಬಳಿ ಭದ್ರತೆಯ ದೃಷ್ಟಿಯಿಂದ ಸೆಲ್ಫಿ ತೆಗೆದುಕೊಳ್ಳುವುದನ್ನು ನಿರ್ಬಂಧ ಮಾಡಿ ಆದೇಶ ಹೊರಡಿಸಿತ್ತು. ಪ್ರವಾಸಿಗರ ಸೋಗಿನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+