ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಆರ್ಭಟ; ಗಗನಕ್ಕೇರಿದ ತರಕಾರಿ ಬೆಲೆ
ಬಾಗಲಕೋಟೆ, ಸೆಪ್ಟೆಂಬರ್, 15: ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳು ಜಲಾವೃತವಾಗಿವೆ. ಪರಿಣಾಮ ಇದೀಗ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದು, ತರಕಾರಿ ಸರಬರಾಜು ಕಡಿಮೆ ಆಗಿದೆ. ಬೆಳೆದಿದ್ದ ತರಕಾರಿಗಳು ಜಮೀನುಗಳಲ್ಲಿ ಕೊಳೆತು ಹೋಗಿವೆ. ಇದು ಬಾಗಲಕೋಟೆ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಬೇರೆ ಜಿಲ್ಲೆಗಳಲ್ಲಿಯೂ ಮಳೆರಾಯ ಅಬ್ಬರಿಸಿದ್ದು, ರೈತರ ಜೀವನವನ್ನೇ ಕಿತ್ತುಕೊಂಡಿದ್ದಾನೆ. ಹೀಗಾಗಿ ಬೇರೆ ಜಿಲ್ಲೆಗಳಿಂದ ಸಹ ತರಕಾರಿ ಸರಿಯಾಗಿ ಸರಬರಾಜು ಆಗದ ಕಾರಣ ಬೆಲೆ ಏರಿಕೆ ಆಗಿದೆ.
ಗಗನಕ್ಕೇರಿದ ತರಕಾರಿಗಳ ಬೆಲೆ
ಜಿಲ್ಲೆಯಲ್ಲಿ ಸತತ ಮಳೆಯಿಂದ ಪ್ರವಾಹದಂತಹ ವಾತಾವರಣ ನಿರ್ಮಾಣವಾಗಿದೆ. ಮೋಡ ಮುಸುಕಿದ ವಾತಾವರಣ ಇದ್ದು, ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಉಂಟು ಮಾಡಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಮತ್ತು ಸರಿಯಾಗಿ ಸೂರ್ಯನ ಕಿರಣಗಳು ಬೀಳದೇ ಇರುವ ಕಾರಣಕ್ಕೆ ಈರುಳ್ಳಿ ಬೆಳೆ ಸರಿಯಾಗಿ ಫಸಲು ಬಾರದೇ ಕೊಳೆತು ಹೋಗಿದೆ. ಮುಂಬರುವ ದಿನಗಳಲ್ಲಿ ಈರುಳ್ಳಿ ಬೆಲೆ ಏರಿಕೆ ಆಗುವ ಭರವಸೆಯಲ್ಲಿ ರೈತರಿದ್ದಾರೆ. ಟೊಮ್ಯಾಟೋ ಕೆ.ಜಿಗೆ 40 ರೂಪಾಯಿ, ಬೀನ್ಸ್ ಕೆಜಿಗೆ 100, ಬ್ಯಾಡಗಿ ಮೆಣಸಿನಕಾಯಿ ಕೆ.ಜಿಗೆ 500 ರೂಪಾಯಿ, ಗುಂಟೂರು ಮೆಣಸಿನಕಾಯಿ ಕೆ.ಜಿ.ಗೆ 300 ರೂಪಾಯಿ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇತ್ತ ತೊಗರಿ ಬೇಳೆಯೂ ಕೆ.ಜಿಗೆ 120 ರೂಪಾಯಿಗೆ ಬಂದು ತಲುಪಿದೆ. ಅಲ್ಲದೇ ಉದ್ದಿನ ಬೇಳೆ ಕೆ.ಜಿ.ಗೆ 145 ರೂಪಾಯಿ, ಅಲಸಂದಿ ಕೆ.ಜಿ.ಗೆ 200 ರೂಪಾಯಿ, ಜೀರಿಗೆ ಕೆ.ಜಿ.ಗೆ 290 ರೂಪಾಯಿ, ಸಾಸಿವೆ ಕೆ.ಜಿ 100 ರೂಪಾಯಿ ಗಡಿ ತಲುಪಿದೆ.

ಬೆಲೆ ಏರಿಕೆ; ಅನ್ನದಾತನಿಗಿಲ್ಲ ಲಾಭ
ಅತೀವೃಷ್ಠಿಯಿಂದ ಇದ್ದಷ್ಟು ಬೆಳೆಗಳನ್ನು ಮಾರುಕಟ್ಟೆಗೆ ತಂದರೂ ಕೂಡ ರೈತನಿಗೆ ಸೂಕ್ತ ಲಾಭ ಸಿಗುತ್ತಿಲ್ಲ. ನಮಗೆ ಹಾಕಿದ ಬಂಡವಾಳ ಸಿಕ್ಕರೆ ಸಾಕು ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರಿಂದ ಖರೀದಿ ಮಾಡುವವರಿಗೆ ಬೆಲೆಯ ಬಿಸಿ ತಟ್ಟುತ್ತಿಲ್ಲ. ಆದರೆ ದಲ್ಲಾಳಿಗಳ ಮೂಲಕ ಮಾರುಕಟ್ಟೆಗೆ ಬರುವ ದಿನಸಿ-ತರಕಾರಿಗಳನ್ನು ಖರೀದಿಸುತ್ತಿರುವ ಗ್ರಾಹಕರಿಗೆ ಬೆಲೆಯೂ ಬಿಸಿ ತುಪ್ಪದಂತೆ ಪರಿಣಮಿಸಿದೆ.
ಗುಣ ಮಟ್ಟದ ತರಕಾರಿಗೆ ಹೆಚ್ಚಾದ ಬೇಡಿಕೆ
ತರಕಾರಿ ಖರೀದಿಗೆ ಹೆಚ್ಚಿನ ಹಣ ಕೊಟ್ಟರೂ, ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಕಡಿಮೆ ಗುಣಮಟ್ಟದ ತರಕಾರಿಯನ್ನು ಅತಿ ಹೆಚ್ಚು ಬೆಲೆ ಕೊಟ್ಟು ಖರೀದಿಸುವಂತಾಗಿದೆ. ಹೀಗಾಗಿ ಗ್ರಾಹಕರು ತರಕಾರಿ ಖರೀದಿಸಲು ಹಿಂದುಮುಂದು ನೋಡುವಂತಾಗಿದೆ. ಮತ್ತೊಂದೆಡೆ ಮಳೆ ನಡುವೆಯೂ ತರಕಾರಿಗಳನ್ನು ಕಿತ್ತು ಮಾರುಕಟ್ಟೆಗೆ ಹಾಕುತ್ತಿರುವ ರೈತರಿಗೂ ಹೆಚ್ಚಿನ ಲಾಭ ಸಿಗದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಬರುತ್ತಿಲ್ಲ. ಜೊತೆಗೆ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ಹೀಗಾಗಿ ಗ್ರಾಹಕರು ಸಹ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಆಗುತ್ತಿದ್ದು, ಇದರ ಕಡೆ ಸರ್ಕಾರ ಗಮನ ಕೊಡಬೇಕು ಎಂದು ನೊಂದ ನಗರ ವಾಸಿಗಳು ಆಗ್ರಹಿಸುತ್ತಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications