ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು?

|
Google Oneindia Kannada News

Recommended Video

ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು? | Oneindia Kannada

ಬೆಂಗಳೂರು, ನವೆಂಬರ್ 19 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಬಗ್ಗೆ ನೀಡಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಸಹ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆಯಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಮಧ್ಯಾಹ್ನ ರೈತರು ವಾಪಸ್ ಪಡೆದಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ರೈತರು ಸರ್ಕಾರಕ್ಕೆ 15 ದಿನಗಳ ಗುಡುವು ನೀಡಿದ್ದಾರೆ. ಸರ್ಕಾರ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ? ಎಂದು ಕಾದುನೋಡಬೇಕಿದೆ.

ವಿಡಿಯೋ : ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರೈತರುವಿಡಿಯೋ : ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರೈತರು

ಕಬ್ಬಿಗೆ ಬೆಂಬಲ ಬೆಲ ನೀಡುವಂತೆ ಬೆಳಗಾವಿಯಲ್ಲಿ ರೈತರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ ಅವರು,'ಮತ ಹಾಕುವಾಗ ಕುಮಾರಸ್ವಾಮಿ ನೆನಪಿಗೆ ಬಂದಿರಲಿಲ್ಲ. ಈಗ ಹಣ ಕೊಡಿ ಎಂದು ಪ್ರತಿಭಟನೆ ಮಾಡುವುದಕ್ಕೆ ಬಂದಿದ್ದೀಯಾ. ಹಾಗಾದರೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ?' ಎಂದು ರೈತ ಮಹಿಳೆಯನ್ನು ಪ್ರಶ್ನಿಸಿದ್ದರು.

ರೈತರ ಪ್ರತಿಭಟನೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?ರೈತರ ಪ್ರತಿಭಟನೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಸಹ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರು, ಏನು ಹೇಳಿದರು ನೋಡಿ...

ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು!ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು!

ಡಾ.ಜಿ.ಪರಮೇಶ್ವರ ಹೇಳಿಕೆ

ಡಾ.ಜಿ.ಪರಮೇಶ್ವರ ಹೇಳಿಕೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, 'ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಸರ್ಕಾರವು ರೈತರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದೆ. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು' ಎಂದು ಹೇಳಿದರು.

ಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರುಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರು

ರೈತರಿಗೆ ನಾಟಿ ಮಾಡೋಕೆ ಬರಲ್ವಾ?

ರೈತರಿಗೆ ನಾಟಿ ಮಾಡೋಕೆ ಬರಲ್ವಾ?

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರು ಪ್ರತಿಕ್ರಿಯೆ ನೀಡಿದ್ದು, 'ಮುಖ್ಯಮಂತ್ರಿಗಳು ರೈತರ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಮಂಡ್ಯದಲ್ಲಿ ನಾಟಿ ಮಾಡಿ ಬಂದು ಬೆಂಗಳೂರಿನಲ್ಲಿ ಇದ್ದಾರೆ. ಮಂಡ್ಯ ರೈತರಿಗೆ ನಾಟಿ ಮಾಡೋಕೇನು ಬರಲ್ವಾ?, ಎಚ್‌ಡಿಕೆ ಅವರದ್ದು ಬರೀ ಬೂಟಾಟಿಕೆ ಮಾತುಗಳು. ರೈತರ ಪರ ಹೋರಾಟ ಮಾಡಬೇಕಾದ್ರೆ ಜಮೀನು ಇಟ್ಟುಕೊಂಡೆ ಹೋರಾಟ ಮಾಡಬೇಕಾ? ಜಮೀನು ಇಲ್ಲದವರು ಹೋರಾಟ ಮಾಡಬಾರದ?. ಸಿಎಂ ಕೂಡಲೇ ರೈತ ಮಹಿಳೆಯ ಕ್ಷಮೆಯನ್ನು ಕೇಳಬೇಕು' ಎಂದು ಒತ್ತಾಯಿಸಿದರು.

ಎಚ್.ಡಿ.ರೇವಣ್ಣ ಹೇಳಿದ್ದೇನು?

ಎಚ್.ಡಿ.ರೇವಣ್ಣ ಹೇಳಿದ್ದೇನು?

'ರೈತರ ಬಗ್ಗೆ ಕಾಳಜಿ ಇದ್ದರೆ ಯಡಿಯೂರಪ್ಪ ಕೇಂದ್ರಕ್ಕೆ ಮನವಿ ಮಾಡಲಿ. ಯಡಿಯೂರಪ್ಪಗೆ ನಾಚಿಕೆ ಆಗಬೇಕು. 17 ಎಂಪಿಗಳನ್ನು ಇಟ್ಟುಕೊಂಡು ಬಿಜೆಪಿಯವರು ಏನು ಮಾಡುತ್ತಿದ್ದಾರೆ. ಪ್ರತಿಭಟನೆ ಹಿಂದೆ ಯಾರಿದ್ದಾರೆ ಎಂಬುದು ನಮಗೆ ತಿಳಿದಿದೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು' ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

'ನಾನು ಕ್ಷಮೆ ಕೇಳುತ್ತೇನೆ'

'ನಾನು ಕ್ಷಮೆ ಕೇಳುತ್ತೇನೆ'

ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು, 'ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ನಾನು ಕ್ಷಮೆ ಕೇಳಲು ಬಂದಿದ್ದೇನೆ. ನಮ್ಮ ಇಲಾಖೆಯಿಂದ ಯಾವುದೇ ನೋಟಿಸ್ ಕೊಟ್ಟಿಲ್ಲ. ರೈತರಿಗಾಗಿ ನಮ್ಮ ಮುಖ್ಯಮಂತ್ರಿ ಸಮಯ ಕೊಟ್ಟಿದ್ದಾರೆ. ರೈತರಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ರೈತ ಮಹಿಳೆ ಬಗ್ಗೆ ಮಾತನಾಡುವಾಗ ತಾಯಿ ಎಂಬ ಪದ ಬಳಸಿದ್ದಾರೆ' ಎಂದರು.

ಕೈವಾಡ ಇದ್ದರೆ ಬಂಧಿಸಿ

ಕೈವಾಡ ಇದ್ದರೆ ಬಂಧಿಸಿ

'ರೈತರ ಪ್ರತಿಭಟನೆ ಹಿಂದೆ ಕೈವಾಡವಿದೆ ಎಂದು ನಿಮಗೆ ಅನ್ನಿಸಿದರೆ ಅವರನ್ನು ಬಂಧಿಸಿ, ಗುಪ್ತಚರ ಇಲಾಖೆ ನಿಮ್ಮ ಬಳಿಯೇ ಇದೆ. ಯಾರ ಕೈವಾಡವಿದೆ ಎಂದು ನಿಮಗೂ ತಿಳಿದಿರುತ್ತದೆ. ಅಮಾಯಕ ರೈತರನ್ನು ಬಂಧಿಸಬೇಡಿ. ಟಿಪ್ಪು ಜಯಂತಿ ಆಚರಣೆ ಮಾಡಲು ತೋರಿಸಿದ ಆಸಕ್ತಿಯನ್ನು ಸಾಲ ಮನ್ನಾದಲ್ಲಿ ಏಕೆ ತೋರಿಸುತ್ತಿಲ್ಲ' ಎಂದು ಬಿಜೆಪಿ ನಾಯಕ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

English summary
Belagavi farmers upset with Karnataka Chief Minister H.D.Kumaraswamy statement on Farmer Jayashree. Farmers protesting against Chief Minister in various districts. Who said what on HD Kumaraswamy statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X