ಎರಡು ಗಂಟೆ ಹೆಚ್ಚುವರಿ ವಿದ್ಯುತ್ ನೀಡಿ
ಬೆಂಗಳೂರು,
ಮಾ. 24 : ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದಿನದಲ್ಲಿ ಎರಡು ಗಂಟೆ ಹೆಚ್ಚುವರಿ ವಿದ್ಯುತ್ ಪೂರೈಸುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. id="toptextpromo">ಗ್ರಾಮೀಣ
ಪ್ರದೇಶದಲ್ಲಿ 16 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಅದರಲ್ಲಿ 6 ಗಂಟೆ ತ್ರೀ ಫೇಸ್, 6 ಗಂಟೆ ಸಿಂಗಲ್ ಫೇಸ್, ಹಾಗೂ ರಾತ್ರಿ 7 ರಿಂದ 10 ಗಂಟೆವರೆಗೆ ಸಿಂಗಲ್ ಫೇಸ್ ಅನಿರ್ಬಂಧಿತ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಸರಕಾರ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿತ್ತು. id='are-slot-1' class='oiad oi-axt oiadv'> id='top-searched-articles'>ಸರಕಾರದ
ವಾದ ಆಲಿಸಿದ ನ್ಯಾಯಾಲಯ, ರೈತರಿಗೆ ಅನುಕೂಲವಾಗುವಂತೆ ಈಗ ನಿಗದಿ ಮಾಡಿರುವ ಅವಧಿಗಿಂತ ಎರಡು ಗಂಟೆ ಹೆಚ್ಚುವರಿಯಾಗಿ ತ್ರೀಫೇಸ್ ನಲ್ಲಿ ವಿದ್ಯುತ್ ಪೂರೈಕೆ ಮಾಡಲು ನ್ಯಾ. ವಿ ಗೋಪಾಲಗೌಡ ಹಾಗೂ ನ್ಯಾ. ಬಿ ಎಸ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ.











Click it and Unblock the Notifications