ಹಾವೇರಿ ಗೋಲಿಬಾರ್ ಷಡ್ಯಂತ್ರ: ಜಡ್ಜ್ ಶೆಟ್ಟಿ
ಬೆಂಗಳೂರು,ಜೂ.17:
ಹಾವೇರಿಯಲ್ಲಿ ರೈತರ ಪ್ರತಿಭಟನೆ ಸಂದರ್ಭದಲ್ಲಿ ನಡೆದಿದ್ದ ಗಲಭೆ, ಗೋಲಿಬಾರ್, ಸಾವು ನೋವುಗಳ ಕುರಿತು ಸಮಗ್ರ ತನಿಖಾ ವರದಿಯನ್ನು ನ್ಯಾ.ಕೆ.ಜಗನ್ನಾಥ್ ಶೆಟ್ಟಿ ಆಯೋಗ ಬಹಿರಂಗಪಡಿಸಿದೆ. id="toptextpromo">ರಸಗೊಬ್ಬರ
ಪೂರೈಕೆಯಲ್ಲಿ ವ್ಯತ್ಯಯವಾದಾಗ 2008 ಜೂನ್ ತಿಂಗಳಿನಲ್ಲಿ ಸಂಭವಿಸಿದ ಹಾವೇರಿ ಗೋಲಿಬಾರ್ ಘಟನೆ ಸರ್ಕಾರಕ್ಕೆ ಕೆಟ್ಟ ಹೆಸರು ಪ್ರತಿಪಕ್ಷಗಳು ಹೂಡಿದ ತಂತ್ರ. ಘಟನೆಯಲ್ಲಿ ಸಾವನ್ನಪ್ಪಿದವರು ರೈತರೇ ಅಲ್ಲ, ಗೋಲಿಬಾರ್‌ನಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಇಬ್ಬರೂ ರೈತರಲ್ಲ. ರಸಗೊಬ್ಬರ ಹೆಸರಲ್ಲಿ ಸರ್ಕಾರ, ಪೊಲೀಸರನ್ನು ಟಾರ್ಗೆಟ್ ಮಾಡಲಾಗಿತ್ತುಎಂದು ಜಗನ್ನಾಥ್ ಶೆಟ್ಟಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗಲಭೆಕೋರರು
ಪೊಲೀಸ್ ವಾಹನದ ಮೇಲೆ ಕಲ್ಲೆಸೆದು, ಬೆಂಕಿ ಹಚ್ಚಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 24 ಪೊಲೀಸ್ ಸಿಬ್ಬಂದಿಗಳ ಜೀವರಕ್ಷಣೆಗಾಗಿ ಗೋಲಿಬಾರ್ ಮಾಡಲೇಬೇಕಾಗಿತ್ತು. ಆ ನಿಟ್ಟಿನಲ್ಲಿ ಪೊಲೀಸ್ ಫೈರಿಂಗ್ ಅನ್ನು ಸಮರ್ಥಿಸಿಕೊಳ್ಳಬಹುದು. ಇದರಲ್ಲಿ ಪೊಲೀಸರಿಂದ ಯಾವುದೇ ತಪ್ಪಾಗಿಲ್ಲ ಎಂದು ನ್ಯಾ.ಜಗನ್ನಾಥ್ ಶೆಟ್ಟಿ ವರದಿ ಹೇಳಿದೆ.











Click it and Unblock the Notifications