ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಹತ್ತಿ ಬೆಳೆ ಉಳಿಸೋಕೆ ಕೃಷಿ ಇಲಾಖೆಯಿಂದ ಮಾರ್ಗಸೂಚಿ

ಹಲವು ರೈತರಿಗೆ ಆದಾಯದ ಮೂಲವಾಗಿರುವ ಬಿಟಿ ಹತ್ತಿ ಬೆಳೆಗೆ ಸೋಂಕಿರುವ ಗುಲಾಬಿ ಕಾಯಿಕೊರಕ ಹುಳದ ಹತೋಟಿಗೆ ಕೃಷಿ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಬಿ.ಟಿ. ಹತ್ತಿ ಬೆಳೆಗಾರರಿಗೆ ತಲೆನೋವಾಗಿರುವ ಗುಲಾಬಿ ಕಾಯಿಕೊರಕ ಹುಳದ ಹತೋಟಿ ಅಗತ್ಯ ಎಂಬುದನ್ನು ಮನಗಂಡಿರುವ ಕೃಷಿ ಇಲಾಖೆ ಕೆಲವು ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ರೈತರನ್ನು ವಿನಂತಿಸಿದೆ. ಕೃಷಿ ಇಲಾಖೆ ಸೂಚಿಸಿದ ಕೆಲವು ಕ್ರಮಗಳು ಹೀಗಿವೆ:

* ಜಮೀನು ನಿರ್ಮಲೀಕರಣ: ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು. ತೆರೆಯದ ಮತ್ತು ಅರ್ಧ ತೆರೆದಿರುವ ಕಾಯಿಗಳನ್ನು ಹತ್ತಿ ಗಿಡದಿಂದ ಕಿತ್ತು ನಾಶಪಡಿಸುವುದು.[ಕರ್ನಾಟಕ ಪರೀಕ್ಷಾ ಮಂಡಳಿಗೆ ಮುಖ್ಯಮಂತ್ರಿಗಳಿಂದ ಚೆಕ್ ಹಸ್ತಾಂತರ]

Guidelines to farmers to protect their cotton crops

* ಜಿನ್ ನಿರ್ಮಲೀಕರಣ: ಜಿನ್ನಿಂಗ್ ಮಾಡಿದ ನಂತರ ಬಾಧೆಗೆ ತುತ್ತಾದ ಹತ್ತಿ ಬೀಜಗಳನ್ನು ನಾಶ ಮಾಡುವುದರಿಂದ ಈ ಬೀಜಗಳಲ್ಲಿ ಸುಪ್ತಾವಸ್ಥೆಯಲ್ಲಿರುವ ಮರಿಹುಳುಗಳನ್ನು ನಾಶಮಾಡಬಹುದು. ಜಿನ್ನಿನಲ್ಲಿ ಲಿಂಗಾಕರ್ಷಕ ಬಲೆಗಳನ್ನು ಸ್ಥಾಪಿಸುವುದು ಅಷ್ಟೇ ಮಹತ್ವದ್ದಾಗಿರುತ್ತದೆ..

* ಬಿತ್ತನೆ ಕಾಲಾವಧಿ ಬಹಳ ಮುಖ್ಯವಾಗಿರುವುದರಿಂದ ವಲಯವಾರು (sowing window) ಮಾಹಿತಿ ಪಡೆದು ಅದರಂತೆ ಬಿತ್ತನೆ ಮಾಡಬೇಕು. ಬಿ.ಟಿ. ಹತ್ತಿಯ ಜೊತೆಗೆ ಬಿ.ಟಿ. ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಬೆಳೆಯುವುದಾಗಿದೆ.

* ಜಮೀನಿನನಲ್ಲಿ ಲಿಂಗಾಕರ್ಷಕ ಬಲೆಗಳನ್ನು ಹೂ ಬಿಡುವ ಹಂತದಲ್ಲಿ ಉಪಯೋಗಿಸುವುದು. (20 ರಿಂದ 35 ಬಲೆಗಳು ಪ್ರತಿ ಹೆಕ್ಟೆರ್ ಗೆ)

* 100 ದಿನಗಳ ಕಡಿಮೆ ಇರುವ ಬೆಳೆಯಲ್ಲಿ ಹೂ ಬಿಡುವ ಹಂತದಲ್ಲಿ ಪ್ರೋಫೆನೋಫಾಸ್ ಕೀಟನಾಶಕವನ್ನು ಸಿಂಪಡಿಸುವುದರಿಂದ ಶೇ. 50 ರಷ್ಟು ನಷ್ಟವನ್ನು ಕಡಿಮೆಗೊಳಿಸಬಹುದು. 100 ದಿನಗಳಿಗಿಂತ ಹೆಚ್ಚಿನ ಕಾಲಾವಧಿಯಾಗಿರುವ ಬೆಳೆಯಲ್ಲಿ ಫೈರಾತ್ರೈಡ್ ಕೀಟನಾಶಕವನ್ನು ಸಿಂಪಡಿಸುವುದರಿಂದ ನಷ್ಟವನ್ನು ಕಡಿಮೆಗೊಳಿಸುತ್ತದೆ (ಲ್ಯಾಮ್ ಡಾ/ಸೈಪರ್ ಮೆತ್ರಿನ್ 0.5 ಎಂ.ಎಲ್. ಪ್ರತಿ ಲೀಟರ್ ಗೆ)

ಕೃಷಿ ಇಲಾಖೆ ನೀಡಿದ ಈ ಎಲ್ಲ ಸೂಚನೆಗಳನ್ನು ರೈತರು ಪಾಲಿಸಿದಲ್ಲಿ ತಮ್ಮ ಬಿ.ಟಿ. ಹತ್ತಿ ಬೆಳೆಯನ್ನು ಉಳಿಸಿಕೊಳ್ಳಬಹುದು.

English summary
The Agriculture department of Karnataka has introduced some guidelines to protect BT cotton crops. It requests cotton farmers to follow its rules to save their agricultural products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X