ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಟಿಬಿ ಜಯಚಂದ್ರ ಅಸಮಾಧಾನ

ತುಮಕೂರು, ನವೆಂಬರ್ 20: ರೈತ ಮಹಿಳೆಗೆ ಅಷ್ಟು ಲಘುವಾಗಿ ಕುಮಾರಸ್ವಾಮಿಯವರು ಮಾತನಾಡಬಾರದಿತ್ತು ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ರೈತರ ಪ್ರತಿಭಟನೆ, ಕುಮಾರಸ್ವಾಮಿ ಕ್ಷಮೆ ಕೇಳಬೇಕೆನ್ನುವ ಪಟ್ಟು ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳು ನನಗೆ ಬೇಸರ ತಂದಿದೆ, ಮಾತನಾಡುವಾಗ ಸೂಕ್ಷ್ಮವಾಗಿ ಎಚ್ಚರ ವಹಿಸಿ ಮಾತನಾಡಬೇಕು ಎಂದರು.

ರೈತರ ಸಮಸ್ಯೆಯನ್ನು ಸಹಾನುಭೂತಿಯಿಂದ ಆಲಿಸಬೇಕು, ಅವರ ಮನವಿಯನ್ನು ಜಾಗೃತೆಯಿಂದ ಪರಿಗಣಿಸಬೇಕು, ರೈತರ ಸಮಸ್ಯೆಗಳು ಬಂದಾಗ ನಾನು ಕೂಡ ಬಹಳ ಪ್ರಾಮುಖ್ಯತೆ ಕೊಟ್ಟು ಚರ್ಚೆ ಮಾಡುತ್ತಿದ್ದೆ, ರೈತರು ಈಗ ಬಹಳ ಕಷ್ಟದಲ್ಲಿದ್ದಾರೆ, ನೂತಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ರಾಜ್ಯದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡೂ ಆಗಿವೆ. ಹಾಗಾಗಿ ರೈತರಿಗೆ ಕಷ್ಟ ಬಂದಿದೆ. ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು, ರೈತರ ಸಾಲಮನ್ನಾ ವಿಚಾರ ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ ಎಂದರು.

Former minister jayachandra express his displeasure over HDK

ನಾನು ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ದೂರ ಉಳಿದಿಲ್ಲ. ಅವರ ಜತೆ ಇದ್ದೇನೆ. ಶಿರಾದಲ್ಲಿ ಎಸ್‍ಡಿಪಿಐ ಪಕ್ಷ ತಲೆ ಎತ್ತಿದೆ. ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದಾಗ ನನಗೆ ಗೊತ್ತಿಲ್ಲ ಎಂದರು. ಶಿರಾದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.

ಕಾನೂನು ಬಾಹಿರ ಚಟುವಟಿಕೆಗಳು ಎಲ್ಲೆ ಮೀರಿ ನಡೆಯುತ್ತಿವೆ ಎಂಬ ಮಾಹಿತಿ ಇದೆ ಎಂದು ಕೇಳಿದ ಪ್ರಶ್ನೆಗೆ ನೂತನ ಶಾಸಕರಿದ್ದಾರೆ. ಈ ಬಗ್ಗೆ ಅವರನ್ನು ಕೇಳಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+