ಯೂರಿಯಾ ಬೆಲೆ ಏರಿಕೆ, ಸಿಎಂ ವಿರೋಧ
ನವದೆಹಲಿ,
ಬೆಂಗಳೂರು, ಫೆ. 19 : ಸದ್ಯಕ್ಕೆ ಚಾಲ್ತಿಯಲ್ಲಿರುವ ರಸಗೊಬ್ಬರಗಳ ಬೆಲೆ ನೀತಿಯಲ್ಲಿ ದೂರಗಾಮಿ ಪರಿಣಾಮ ಬೀರುವಂತಹ ವ್ಯಾಪಕ ಸುಧಾರಣಾ ಕ್ರಮಗಳಿಗೆ ಕೇಂದ್ರ ಸರಕಾವು ಚಾಲನೆ ನೀಡಿದೆ. ಯೂರಿಯಾ ಗೊಬ್ಬರದ ಚಿಲ್ಲರೆ ಬೆಲೆಯನ್ನು ಶೇ. 10 ಹೆಚ್ಚಿಸಿ, ಯೂರಿಯಾಯೇತರ ಗೊಬ್ಬರಗಳ ಬೆಲೆಯನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. id="toptextpromo">ಯೂರಿಯಾ
ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸರಕಾರ ಗಾಯದ ಮೇಲೆ ಏಳೆದಿದೆ. ಅಗತ್ಯ ವಸ್ತುಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ದರಗಳು ಗಗನಕ್ಕೆ ಮುಟ್ಟಿವೆ. ದೇಶದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಯೂರಿಯಾ ಬೆಲೆಯನ್ನು ಏರಿಸಿರುವುದು ರೈತ ವಿರೋಧಿ ಕ್ರಮವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಧಾನಿ
ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಹೊಸ ನೀತಿಗೆ ಒಪ್ಪಿಗೆ ಸೂಚಿಸಿತು. ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ರೈತರು ವ್ಯಾಪಕವಾಗಿ ಉಪಯೋಗಿಸುವ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್ ಪಿ) ಸರಕಾರವೇ ನಿಗದಿಪಡಿಸಲಿದೆ. ಸದ್ಯಕ್ಕೆ ಯೂರಿಯಾದ ಚಿಲ್ಲರೆ ಮಾರಾಟ ಬೆಲೆಯನ್ನು ಶೇ. 10 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸರಕಾರ ಹೇಳಿದೆ.











Click it and Unblock the Notifications