ಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು

ತಾಳಿಭಾಗ್ಯ, ಶಾಲಾಮಕ್ಕಳಿಗೆ ಸೈಕಲ್ ಮುಂತಾದ ಜನಪ್ರಿಯ ಯೋಜನೆಗಳಿಗೆ ಕೊಕ್. ಕೇವಲ ಮೇಲ್ವರ್ಗ ಮತ್ತು ಮೇಲ್ಜಾತಿಗಳನ್ನು ಮಾತ್ರ ಪ್ರೀತಿ ಮಾಡಬಾರದೆಂಬ ಎಚ್ಚರ ಅಂಕಿಅಂಕಿಗಳಲ್ಲಿ ಕಾಣ ಸಿಗುತ್ತದೆ. ಎಲ್ಲರನ್ನೂ ಸಂತುಷ್ಟಗೊಳಿಸುವ ಯತ್ನದಲ್ಲಿ ಸಾಗಿದ ಮುಂಗಡಪತ್ರ ಎನ್ನಲು ಅಡ್ಡಿಯಿಲ್ಲ. ಒಟ್ಟಾರೆ, ಅನೇಕರನ್ನು ಏಕಕಾಲಕ್ಕೆ ಓಲೈಸಲು ಹೆಣಗಿದ ಯಡ್ಡಿ ಬಜೆಟ್ ಎಂದು ಬಣ್ಣಿಸಬಹುದು.
ವಿಹಂಗಮ ಮುನ್ನೋಟ:
* ಡಾ. ಬಿಎಸ್ ಯಡಿಯೂರಪ್ಪ ಅವರ 4 ನೇ ಬಜೆಟ್
* ಬಿಜೆಪಿ ಸರ್ಕಾರದ 2 ನೇ ಬಜೆಟ್
* ಒಟ್ಟು ಯೋಜನಾ ಗಾತ್ರ 29, 500 ಕೋಟಿ ರು.ಗಳು
* ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಟಿಬದ್ಧ
* ಮನರಂಜನೆ, ಉನ್ನತ ಕೈಗಾರಿಕೆ, ತಂತ್ರಜ್ಞಾನ, ಕ್ರೀಡೆ, ಪರಿಸರ ಕ್ಷೇತ್ರಕ್ಕೆ ಸೊನ್ನೆ
* ಆರ್ಥಿಕ ಬಿಕ್ಕಟ್ಟು, ಉದ್ಯೋಗ ಸೃಷ್ಟಿ ಕಡೆ ಗಮನವಿಲ್ಲ.
* ಕನ್ನಡ ನಾಡು ನುಡಿಗೆ ಮಹತ್ವ.
*ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಮಹತ್ವವಿಲ್ಲ.
* ಮೂಗಿಗೆ ತುಪ್ಪ ಸವರುವ ಬಜೆಟ್, ಗೊತ್ತು ಗುರಿಯಿಲ್ಲ, ಜಾತಿವಾರು ಅನುದಾನ, ಚುನಾವಣಾ ದೃಷ್ಟಿಯುಳ್ಳ ಬಜೆಟ್ ಎಂದು ಪ್ರತಿಪಕ್ಷ ನಾಯಕರ ಟೀಕೆ
ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು?
ಕೃಷಿ/ರೈತ/ಪಶುಸಂಗೋಪನೆ
*ಕೃಷಿ ಅಭಿವೃದ್ಧಿಗೆ ರು.2,440 ಕೋಟಿ.
*ರೈತರ ವಿದ್ಯುತ್ ಸರಬರಾಜಿಗೆ 2,100 ಕೋಟಿ ರು
*ಸಾವಯವ ಕೃಷಿಗೆ ರು.100 ಕೋಟಿ ಸಹಾಯ ಧನ
*ಸಾವಿರ ರೈತರಿಗೆ ವಿದೇಶಿ ಪ್ರವಾಸ ಯೋಗ
*ರೈತರಿಗೆ ಶೇ. 3 ರ ಬಡ್ಡಿ ದರದಂತೆ ಸಾಲ ಸೌಲಭ್ಯ
*ಬೆಳಗಾವಿಯಲ್ಲಿ ತೋಟಗಾರಿಕಾ ಮಾರುಕಟ್ಟೆ ಸ್ಥಾಪನೆ
*ಬೆಳಗಾವಿ ತೋಟಗಾರಿಕಾ ಮಾರುಕಟ್ಟೆಗೆ 100 ಕೋಟಿ ರು.
*ಪ್ರತಿ ತಾಲೂಕಿನಲ್ಲೂ ಗೋ ಶಾಲೆ ಸ್ಥಾಪನೆ,
*ಪ್ರತಿ ಗೋಶಾಲೆಗೆ ರು.10 ಲಕ್ಷ ಅನುದಾನ
*ಈ ಸಾಲಿನಲ್ಲಿ ಸಾವಿರ ರೈತರಿಗೆ ವಿದೇಶ ಪ್ರವಾಸ.
*ಕೋಲಾರಕ್ಕೆ ತೋಟಗಾರಿಕಾ ಕಾಲೇಜು
*ರಾಯಚೂರು ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ
*ಬೆಂಬಲ ಬೆಲೆ ಒದಗಿಸಲು ರು.100 ಕೋಟಿ ಮೀಸಲು
*ಗದಗ ಪಶುವೈದ್ಯ ಕಾಲೇಜಿಗೆ ರು.5 ಕೋಟಿ.
*ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ರು.750 ಕೋಟಿ.
*ಚಾಮರಾಜ ನಗರದಲ್ಲಿ ಅರಿಷಿಣ ಮಾರುಕಟ್ಟೆ.
*ಕೃಷಿ ಸಂಬಂಧಿಸಿದ ಸೇವೆಗಳಿಗೆ ರು.2,112 ಕೋಟಿ.
*ರಾಜ್ಯ ಪಶುವೈದ್ಯ ವಿಶ್ವವಿದ್ಯಾಲಯಕ್ಕೆ ರು.10 ಕೋಟಿ.
ಹೈನುಗಾರಿಕೆ 1000 ನೂತನ ಹಾಲು ಉತ್ಪಾದಕ ಸಂಘ
ವಿದ್ಯುತ್
*ವಿದ್ಯುತ್ ವಲಯದ ಯೋಜನೆಗಳಿಗೆ 6,107 ಕೋಟಿ ರು
*ರೈತರ ವಿದ್ಯುತ್ ಸರಬರಾಜಿಗೆ 2,100 ಕೋಟಿ ರು
*ಶಕ್ತಿ ಮೂಲಗಳ ವರ್ಧನೆಗೆ ರು. 3126 ಕೋಟಿ.
ನೀರಾವರಿ
*ನೀರಾವರಿ ಕ್ಷೇತ್ರಕ್ಕೆ ರು.4741 ಕೋಟಿ.
*ಭದ್ರಾ ಮೇಲ್ದಂಡೆ ಯೋಜನೆಗೆ ರು.500 ಕೋಟಿ.
*ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ರು.800 ಕೋಟಿ.
*ಕೆರೆಗಳ ಅಭಿವೃದ್ಧಿಗೆ ರು.764 ಕೋಟಿ
*ಭಾರಿ ಮತ್ತ್ತು ಮಧ್ಯಮ ನೀರಾವರಿಗೆ ರು.3096 ಕೋಟಿ.
*ಕೃಷ್ಣ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನ-ಭರವಸೆ.
*ಚಾಮರಾಜ ನಗರದಲ್ಲಿ ಶೈತ್ಯಾಗಾರಕ್ಕೆ ರು.10 ಕೋಟಿ.
ಶಿಕ್ಷಣ/ ಉದ್ಯೋಗ/ತಂತ್ರಜ್ಞಾನ
*ಶಿಕ್ಷಣ ಕ್ಷೇತ್ರಕ್ಕೆ ರು.8,880 ಕೋಟಿ.
*ಗದಗಿನ ಪಶುವೈದ್ಯ ಕಾಲೇಜಿಗೆ 5 ಕೋಟಿ ರು
*ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಹೆಸರು
*ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯ
*ಉದ್ಯೋಗ ಮೇಳ ಪ್ರತಿ ಜಿಲ್ಲೆಗೂ ವಿಸ್ತರಣೆ
* ಕನ್ನಡ ವಿಶ್ವಕೋಶ ಅಭಿವೃದ್ಧಿಗೆ 2ಕೋಟಿ
*ವಿಶೇಷ ಪ್ರದೇಶ ಯೋಜನೆಗೆ ರು. 188 ಕೋಟಿ.
*ಕಾರ್ಮಿಕ, ಉದ್ಯೋಗ ವಲಯಕ್ಕೆ ರು. 167 ಕೋಟಿ.
*ಉದ್ಯೋಗ ಮೇಳದಿಂದ 13 ಸಾವಿರ ನಿರುದ್ಯೋಗಿಗಳಿಗೆ ಅನುಕೂಲ.
*ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ರು.35 ಕೋಟಿ.
*ಕಿತ್ತೂರು ಚೆನ್ನಮ್ಮ ವಿದ್ಯಾಶಾಲೆಗೆ ರು.2 ಕೋಟಿ.
*ರಾಮನಗರ ಜಾನಪದ ಪರಿಷತ್ ಗೆ 1 ಕೋಟಿ.
*ಚಿತ್ರದುರ್ಗದಲ್ಲಿ ಐಐಎಸ್ ಸಿ ಶಾಲೆಗೆ ಸಾವಿರ ಎಕರೆ ಜಾಗ.
*144 ಕಿತ್ತೂರು ಚೆನ್ನಮ್ಮ ಶಾಲೆಗೆ ರು. 100 ಕೋಟಿ.
*ಬೆಂಗಳೂರಿನಲ್ಲಿ ಸಂಸ್ಕೃತ ವೇದ ವಿವಿ ರು. 5 ಕೋಟಿ.
*ಹುಬ್ಬಳ್ಳಿ ಕಾನೂನು ವಿವಿಗೆ ರು.5 ಕೋಟಿ.
* ಗುಲ್ಬರ್ಗದಲ್ಲಿ ಐಟಿ ಪಾರ್ಕ್ ಗೆ ರು.5 ಕೋಟಿ
*ಮೈ ಶುಗರ್ ಕಂಪನಿ ಪುನಶ್ಚೇತನಕ್ಕೆ ರು. 50 ಕೋಟಿ.
*ತುಮಕೂರು, ಬಿಜಾಪುರ ವಿವಿಗೆ ರು.10 ಕೋಟಿ.
*ಗಂಗಾವತಿ ನೂತನ ಇಂಜಿನಿಯರಿಂಗ್ ಕಾಲೇಜು ರು.10 ಕೋಟಿ.
*ಚಿಕ್ಕಬಳ್ಳಾಪುರದಲ್ಲಿ ವಿಶ್ವೇಶ್ವರಯ್ಯ ಮ್ಯೂಸಿಯಂ
*ಮೈಸೂರು ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆ
......ಇನ್ನೂ ಇದೆ
ಪೂರಕ ಓದಿಗೆ:
ನಗರಾಭಿವೃದ್ಧಿ,ಚಿಲ್ಲರೆಪಲ್ಲರೆಗೆ ಕರಡಿಪಾಲು
ಕರ್ನಾಟಕ ಬಜೆಟ್ 09 ಮುಖ್ಯಾಂಶಗಳು











Click it and Unblock the Notifications