• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತುಕತೆಗೆ ಮೋದಿ ಕರೆ; ರೈತರ ಮುಂದಿನ ನಡೆಯೇನು?

|

ನವದೆಹಲಿ, ಡಿಸೆಂಬರ್ 26: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರೈತರಿಗೆ ಮಾತುಕತೆಗೆ ಆಹ್ವಾನ ನೀಡಿದ್ದಾರೆ.

ಶುಕ್ರವಾರ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಕಾಯ್ದೆಗೆ ಸಂಬಂಧಿಸಿದ ಚರ್ಚೆಗೆ ರೈತರೊಂದಿಗೆ ಮಾತುಕತೆಗೆ ಸಿದ್ಧ" ಎಂದು ತಿಳಿಸಿದ್ದಾರೆ. ಈ ಬೆನ್ನಲ್ಲೇ ರೈತರು ಶನಿವಾರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುವುದಾಗಿ ತಿಳಿದುಬಂದಿದೆ. ಮುಂದೆ ಓದಿ...

 ತಿಂಗಳಾದರೂ ಮುಗಿಯದ ಬಿಕ್ಕಟ್ಟು

ತಿಂಗಳಾದರೂ ಮುಗಿಯದ ಬಿಕ್ಕಟ್ಟು

ಕೃಷಿ ಕಾಯ್ದೆ ವಿರುದ್ಧವಾಗಿ ರೈತರು ನವೆಂಬರ್ 26ರಿಂದ ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಭಟನೆ ಕೈಗೊಂಡು ತಿಂಗಳು ಕಳೆಯುತ್ತಿದ್ದರೂ ಈ ಬಿಕ್ಕಟ್ಟು ಕೊನೆಯಾಗಿಲ್ಲ. ಈ ನಿಟ್ಟಿನಲ್ಲಿ ನಿನ್ನೆ ಮೋದಿ ಮಾತುಕತೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಶನಿವಾರ ನಲವತ್ತು ರೈತ ಸಂಘಟನೆಗಳು ಮಧ್ಯಾಹ್ನ 2 ಗಂಟೆಗೆ ಸಭೆ ನಡೆಸಲು ತೀರ್ಮಾನಿಸಿವೆ. ಸಭೆಯಲ್ಲಿ ಮುಂದಿನ ಕ್ರಮಗಳ ಕುರಿತು ರೈತರು ತೀರ್ಮಾನ ಕೈಗೊಳ್ಳಲಿದ್ದಾರೆ.

ರೈತರ ಪ್ರತಿಭಟನೆ: ಹೋಟೆಲ್‌ನ ಹಿಂಬಾಗಿಲಿನಿಂದ ಹೆದರಿ ಜಾರಿಕೊಂಡ ಬಿಜೆಪಿ ಮುಖಂಡರು

"ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ"

ಕೃಷಿ ಕಾಯ್ದೆ ಸಂಬಂಧ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ತಮ್ಮ ರಾಜಕೀಯ ಉದ್ದೇಶಗಳಿಗೆ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮೋದಿ ದೂರಿದ್ದರು. ಈ ಸಂಬಂಧ ರೈತರೊಂದಿಗೆ ಮುಕ್ತವಾಗಿ ಮಾತನಾಡಲು ನಾವು ಸಿದ್ಧ. ರೈತರು ಮಾತುಕತೆಗೆ ಮುಂದಾಗಿ ಎಂದು ಕರೆ ನೀಡಿದ್ದರು.

 ವಿರೋಧ ಪಕ್ಷಗಳಿಂದ ವ್ಯಾಪಕ ವಿರೋಧ

ವಿರೋಧ ಪಕ್ಷಗಳಿಂದ ವ್ಯಾಪಕ ವಿರೋಧ

ರೈತರ ಪ್ರತಿಭಟನೆ ಕುರಿತಂತೆ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿ, ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಮೋದಿ ಹರಿಹಾಯ್ದಿದ್ದು, ರಾಜಕೀಯ ಮಾಡಿ, ಆದರೆ ರೈತರನ್ನು ದಾರಿ ತಪ್ಪಿಸಬೇಡಿ ಎಂದು ಎಚ್ಚರಿಕೆ ನೀಡಿದ್ದರು.

ಎಂಎಸ್‌ಪಿ ಖಾತರಿ: ಕೃಷಿ ಕಾಯ್ದೆ ಬೆಂಬಲಿಸುತ್ತಿರುವವರದ್ದೂ ಇದೇ ಬೇಡಿಕೆ

 ರೈತ ಸಂಘಟನೆಗಳಿಂದ ಇಂದು ತೀರ್ಮಾನ

ರೈತ ಸಂಘಟನೆಗಳಿಂದ ಇಂದು ತೀರ್ಮಾನ

ಶುಕ್ರವಾರ ಮೋದಿ ಮಾತುಕತೆಗೆ ಕರೆ ನೀಡಿರುವ ಬೆನ್ನಲ್ಲೇ ರೈತ ಸಂಘಟನೆಗಳು ಇಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿವೆ. ಮಧ್ಯಾಹ್ನ 2 ಗಂಟೆಗೆ ರೈತ ಮುಖಂಡರು ಸಭೆ ನಡೆಸಲಿದ್ದು, ಸರ್ಕಾರದೊಂದಿಗೆ ಯಾವ ಯಾವ ಅಂಶಗಳನ್ನು ಚರ್ಚಿಸಬೇಕು, ಯಾವ ಬೇಡಿಕೆಗಳನ್ನು ಮುಂದಿಡಬೇಕು ಎಂದು ಚರ್ಚೆ ನಡೆಸುವುದಾಗಿ ತಿಳಿದುಬಂದಿದೆ. ಸಭೆ ನಂತರ ಮಾತುಕತೆಯ ದಿನಾಂಕ ನಿಗದಿಪಡಿಸಲಾಗುವುದು.

English summary
Nearly 40 farm unions will hold a meeting today at 2 PM to discuss their future course of action and take a decision on holding talks with the centre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X