ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಪ್ರಸ್ತಾವ: ರೈತರಿಂದ ತಿರಸ್ಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 5: ನೂತನ ಕೃಷಿ ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಲು ಸಿದ್ಧ ಇರುವುದಾಗಿ ಕೇಂದ್ರ ಸರ್ಕಾರ ಮುಂದಿರಿಸಿದ ರಾಜಿ ಸಂಧಾನದ ಆಫರ್ ಅನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ. ಪ್ರತಿಭಟನೆ ಶುರುವಾದ ಹತ್ತು ದಿನಗಳಲ್ಲಿ ಮೂರನೇ ಬಾರಿ ನಡೆಯುತ್ತಿರುವ ಸಭೆಯಲ್ಲಿ ಕೇಂದ್ರದ ಮೂವರು ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ರೈತರು, ಮೂರೂ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಳ್ಳುವಂತೆ ತಮ್ಮ ಬೇಡಿಕೆಗೆ ಪಟ್ಟು ಹಿಡಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ನಿರ್ಣಾಯಕ ಸಂಧಾನ ಸಭೆಯಿಂದ ಹೊರನಡೆಯುವುದಾಗಿ 40 ರೈತ ಸಂಘಟನೆಗಳ ಪ್ರತಿನಿಧಿಗಳು ಎಚ್ಚರಿಕೆ ನೀಡಿದರು. ಶನಿವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರ್ಕಾರ ಲಿಖಿತ ಪ್ರಸ್ತಾವ ಸಲ್ಲಿಸಿತು.

ಕೃಷಿ ಮಸೂದೆ ವಿರೋಧಿಸಿ ಡಿ.8 ರಂದು ಭಾರತ ಬಂದ್: ಎಡ ಪಕ್ಷಗಳ ಬೆಂಬಲಕೃಷಿ ಮಸೂದೆ ವಿರೋಧಿಸಿ ಡಿ.8 ರಂದು ಭಾರತ ಬಂದ್: ಎಡ ಪಕ್ಷಗಳ ಬೆಂಬಲ

ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ರೈತರ ಬೇಡಿಕೆಗಳನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ, ಬೇಕಿದ್ದರೆ ಕಾಯ್ದೆಗಳಿಗೆ ತಿದ್ದುಪಡಿ ಮಾಡುವುದಾಗಿ ಹೇಳಿತು. ಇದಕ್ಕೆ ಜಗ್ಗದ ರೈತರು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೆ ಬೇರೆ ಯಾವ ದಾರಿಯೂ ಇಲ್ಲ ಎಂದು ಮತ್ತೆ ಪ್ರತಿಪಾದಿಸಿದರು.

 Farmers Rejects Governments Proposal Of Amendment For Farm Laws

ಈ ಬಾರಿ ಸಭೆಯ ವೇಳೆಯೂ ರೈತರು ಕೇಂದ್ರ ಸರ್ಕಾರದ ಆತಿಥ್ಯವನ್ನು ನಿರಾಕರಿಸಿದರು. ತಾವೇ ತಂದಿದ್ದ ಟೀ, ತಿನಿಸುಗಳನ್ನು ಸೇವಿಸಿದರು.

ರೈತ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿರುವ ಡಿಸೆಂಬರ್ 8ರ ಭಾರತ್ ಬಂದ್‌ಗೆ ಹತ್ತು ಕೇಂದ್ರ ವ್ಯಾಪಾರ ಒಕ್ಕೂಟಗಳು ಬೆಂಬಲ ಘೋಷಿಸಿವೆ. ಇನ್ನೊಂದೆಡೆ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯತ್ತ ತೆರಳುತ್ತಿದ್ದ ರೈತರು ಬ್ಯಾರಿಕೇಡ್‌ಗಳನ್ನು ಮುರಿಯುವ ಪ್ರಯತ್ನದಲ್ಲಿದ್ದಾಗ ಈ ಬಂಧನ ನಡೆದಿದೆ.

English summary
Farmers unions have rejected the proposal made by Centre for the amendment for farm laws and further talks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X