ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯ ಬೆಳೆಗೆ ಅನುಕೂಲವಾಗುವಂತೆ ನೀರು ಹರಿಸಲು ರೈತರ ಮನವಿ

|
Google Oneindia Kannada News

ಕೊಪ್ಪಳ, ನವೆಂಬರ್ 27; ಬೇಸಿಗೆಯ ಬೆಳೆ ತೆಗೆಯಲು ಅನುಕೂಲವಾಗುವಂತೆ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳ ಕೊನೆಯವರೆಗೆ ನೀರು ಹರಿಸಬೇಕು ಎಂದು ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರು ಮತ್ತು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ ನಡೆಸಿದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಕಾಲುವೆಯಿಂದ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಬೇಡಿ ಎಂಬುದಕ್ಕೆ ವಿವಿಧ ಸಂಘಗಳ ರೈತ ಮುಖಂಡರು ಮತ್ತು ರೈತರು ಧ್ವನಿಗೂಡಿಸಿದರು. ಬೇಸಿಗೆ ಬೆಳೆ ತೆಗೆಯಲು ನೀರು ಬೇಕು ಎಂದು ಸರ್ವಾನುಮತದಿಂದ ಮನವಿ ಮಾಡಿದರು.

ಗದಗ: ಏತ ನೀರಾವರಿ ಯೋಜನೆಗೆ ಮರುಜೀವ, ನರಗುಂದದ ರೈತರಿಗೆ ಶುಭಸುದ್ದಿಗದಗ: ಏತ ನೀರಾವರಿ ಯೋಜನೆಗೆ ಮರುಜೀವ, ನರಗುಂದದ ರೈತರಿಗೆ ಶುಭಸುದ್ದಿ

ಕರ್ನಾಟಕ ರೈತ ಸಂಘದ ಚಾಮರಸ ಮಾಲಿಪಾಟೀಲ ಮಾತನಾಡಿ, "ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ಪ್ರದೇಶದಲ್ಲಿನ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆಗಳಿಗೆ ಕಳೆದ ವರ್ಷ ಸಮಪರ್ಕ ನೀರು ಸಿಗಲಿಲ್ಲ. ಭತ್ತದ ಕಟಾವು ಮುಗಿದ ಬಳಿಕ ಬೇರೆ ಬೆಳೆಗಳನ್ನು ಬೆಳೆಯಲು 1000 ಕ್ಯೂಸೆಕ್ ನೀರು ಹರಿಸಿದರೆ ರಾಯಚೂರು, ಮಾನ್ವಿ, ಶಿರವಾರ ಭಾಗದ ರೈತರಿಗೆ ಅನುಕೂಲವಾಗಲಿದೆ" ಎಂದರು.

ಬಜೆಟ್: ನೀರಾವರಿ ಯೋಜನೆಗಳಿಗೆ ಭರಪೂರ ಅನುದಾನ ಮಂಜೂರುಬಜೆಟ್: ನೀರಾವರಿ ಯೋಜನೆಗಳಿಗೆ ಭರಪೂರ ಅನುದಾನ ಮಂಜೂರು

Farmers Demand For Tungabhadra Water Till Summer Crops

ಬಳ್ಳಾರಿ ಕೃಷಿಕ ಸಮಾಜದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, "ಶಿರಗುಪ್ಪ ತಾಲೂಕಿನಲ್ಲಿ ಹತ್ತಿ ಬೆಳೆ, ಬಳ್ಳಾರಿಯಲ್ಲಿ ಮೆನಸಿನಕಾಯಿ ಸಂಪೂರ್ಣ ನಾಶವಾಗಿದೆ. ಈ ಭಾಗದವರು ಜನವರಿಯಲ್ಲಿ ತೆಗೆಯುವ ಬೆಳೆಗೆ ನೀರಿನ ಪ್ರಮಾಣ ಕಡಿಮೆಯಾಗಬಾರದು" ಎಂದು ತಿಳಿಸಿದರು.

ವಿಶ್ವದ ದೊಡ್ಡ ಏತ ನೀರಾವರಿ ಯೋಜನೆ ವೀಕ್ಷಿಸಿದ ಚಾಮರಾಜನಗರ ರೈತರುವಿಶ್ವದ ದೊಡ್ಡ ಏತ ನೀರಾವರಿ ಯೋಜನೆ ವೀಕ್ಷಿಸಿದ ಚಾಮರಾಜನಗರ ರೈತರು

Farmers Demand For Tungabhadra Water Till Summer Crops

ರೈತ ಮುಖಂಡರಾದ ಎಂ. ಗೋವಿಂದಪ್ಪ ಮಾತನಾಡಿ, "ಮಳೆ ಹೆಚ್ಚು ಬಿದ್ದು ನೀರು ನಿಂತು ಮೊದಲನೇ ಬೆಳೆ ಹಾನಿಯಾಗಿದೆ. ಎರಡನೇ ಬೆಳೆಗೆ ಅನುಕೂಲವಾಗಲು ಮಾರ್ಚ, ಏಪ್ರಿಲ್‌ವರೆಗೆ ನೀರು ಕೊಡಬೇಕು" ಎಂದು ಮನವಿ ಮಾಡಿದರು.

ರೈತ ಮುಖಂಡರಾದ ಎಂ. ಗೋವಿಂದಪ್ಪ ಮಾತನಾಡಿ, "ಮಳೆ ಹೆಚ್ಚು ಬಿದ್ದು ನೀರು ನಿಂತು ಮೊದಲನೇ ಬೆಳೆ ಹಾನಿಯಾಗಿದೆ. ಎರಡನೇ ಬೆಳೆಗೆ ಅನುಕೂಲವಾಗಲು ಮಾರ್ಚ, ಏಪ್ರಿಲ್‌ವರೆಗೆ ನೀರು ಕೊಡಬೇಕು" ಎಂದು ಮನವಿ ಮಾಡಿದರು.

ರಾಯಚೂರು ಭಾಗದ ರೈತ ಮುಖಂಡ ಶರಣಪ್ಪ ಮಾತನಾಡಿ, "400 ಟಿಎಂಸಿನಷ್ಟು ನೀರು ತುಂಗಭದ್ರಾ ಜಲಾಶಯದಿಂದ ಅನವಶ್ಯಕ ಹರಿದು ಹೋಗುತ್ತಿದೆ. ಹೀಗಾಗಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ, ಕಾಲುವೆಗಳ ಆಧುನೀಕರಣಕ್ಕೆ ಒತ್ತು ಕೊಡಬೇಕು. ರೈತರಿಗೆ ನೀರಾವಾರಿ ಸಹಾಯವಾಣಿ ಆರಂಭಿಸಬೇಕು. ಡಿಸೆಂಬರ್ ಮಾಹೆಯೊಳಗೆ ಭದ್ರಾ ಜಲಾಶಯದಿಂದ 6 ಟಿಎಂಸಿ ನೀರು ಪಡೆದರೆ ಬಲದಂಡೆ ಮೇಲ್ಮಟ್ಟದ ಕಾಲುವೆಯ ವ್ಯಾಪ್ತಿಯ 2 ಲಕ್ಷ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಅನುಕೂಲವಾಗಲಿದೆ" ಎಂದರು.

ಕೆರೆಗೆ ನೀರು ತುಂಬಿಸಲು ಆಗ್ರಹ; ಜನ ಮತ್ತು ಜಾನುವಾರುಗೆ ಕುಡಿಯಲು ಅನುಕೂಲವಾಗುವಂತೆ ಬಾದನಟ್ಟಿ ಗ್ರಾಮದ ಕೆರೆಗೆ ಕಾಲುವೆಯಿಂದ ನೀರು ತುಂಬಿಸಬೇಕು ಎಂದು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಮನವಿ ಮನವಿ ಮಾಡಿದರು.

ಮೇಲಿನಿಂದ ಕೆಳಭಾಗದವರೆಗೆ ಗೇಜ್ ನಿರ್ಹಹಣೆ ಮಾಡುವಲ್ಲಿ, ಸುರಂಗ ಮಾರ್ಗ ವಿಸ್ತರಣೆ ಮಾಡುವಲ್ಲಿ, ನೀರಾವರಿ ಕಾಮಗಾರಿ ಮಾಡುವಲ್ಲಿ, ಕಾಲುವೆ ದುರಸ್ತಿ ಮಾಡುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಿದರು.

ಸಚಿವರ ಹೇಳಿಕೆ; ಸಚಿವರಾದ ಆನಂದ್ ಸಿಂಗ್ ಮಾತನಾಡಿ, "ನೀರಿನ ಲಭ್ಯತೆ ಆಧರಿಸಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ, ತುಂಗಭದ್ರಾ ಬಲದಂಡೆ ಕಾಲುವೆ, ರಾಯ ಬಸಣ್ಣ ಕಾಲುವೆ, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ಗಳಿಗೆ ನೀರು ಹಂಚಿಕೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.

ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, "ರೈತರು ಮತ್ತು ಜನಪ್ರತಿನಿಧಿಗಳ ಸಲಹೆ ಪಡೆದ ಬಳಿಕ, ನೀರಿನ ಲಭ್ಯತೆಯು ಇರುವವರಿಗೆ ಮಾತ್ರ ನೀರು ಬಿಡುಗಡೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದರು.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿಸೆಂಬರ್ 1ರಿಂದ ಡಿಸೆಂಬರ್ 15ರವರೆಗೆ ಸರಾಸರಿ 2000 ಕ್ಯೂಸೆಕ್, ಡಿ.16ರಿಂದ ಡಿ.30ರವರೆಗೆ ಸರಾಸರಿ 2500 ಕ್ಯೂಸೆಕ್, 2023ರ ಜನವರಿ 1ರಿಂದ ಮಾರ್ಚ 31ರವರೆಗೆ ಸರಾಸರಿ 3500 ಕ್ಯೂಸೆಕ್, ಕುಡಿಯುವ ನೀರಿಗಾಗಿ 2023ರ ಏಪ್ರೀಲ್ 1ರಿಂದ ಏಪ್ರಿಲ್ 10ರವರೆಗೆ 1484 ಕ್ಯುಸೆಕ್ ಮತ್ತು ಏಪ್ರಿಲ್ 11ರಿಂದ ಮೇ 10ರವರೆಗೆ 100 ಕ್ಯುಸೆಕನಂತೆ ವಿಜಯನಗರ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

English summary
Ballari, Vijayanagar and Raichur farmers demand for Tungabhadra water till summer crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X