ಚಿತ್ರದುರ್ಗ; ಬೆಲೆ ಕುಸಿತದಿಂದ ಬೇಸತ್ತು ಬದನೆ ಬೆಳೆ ನಾಶಪಡಿಸಿದ ರೈತ
ಚಿತ್ರದುರ್ಗ, ಜುಲೈ 6: ಕೊರೊನಾ ವೈರಸ್ ಹೊಡೆತಕ್ಕೆ ಕೋಟೆನಾಡಿನ ರೈತರು ಕಂಗಾಲಾಗಿ ಹೋಗಿದ್ದಾರೆ. ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿ ಗ್ರಾಮದ ರೈತ ಜಗದೀಶ್ ಗುತ್ತಿಗೆ ಹೊಲ ಪಡೆದು 2.5 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದು, ಬೆಲೆ ಕುಸಿತದಿಂದಾಗಿ ರೋಸಿ ಹೋಗಿ ಸಂಪೂರ್ಣ ಬದನೆಕಾಯಿ ಗಿಡಗಳನ್ನೇ ನಾಶಪಡಿಸಿದ್ದಾರೆ.
Recommended Video
ಕರಿಸಿದ್ದಪ್ಪ ಎಂಬುವರ ಜಮೀನು ಗುತ್ತಿಗೆ ಪಡೆದು ಜಗದೀಶ್ ಬದನೆಕಾಯಿ ಬೆಳೆದಿದ್ದರು. ಗುತ್ತಿಗೆ ಪಡೆದ ಜಮೀನಿನಲ್ಲಿ 50ಕ್ಕೂ ಹೆಚ್ಚು ಲೋಡ್ ಮಣ್ಣು ಹೊಡೆಸಿ ಭೂಮಿ ಹದ ಮಾಡಿ, ಎರಡು ಲಕ್ಷ ರೂ. ಖರ್ಚು ಮಾಡಿ ಬದನೆಕಾಯಿ ಬೆಳೆದಿದ್ದರು. ಜಮೀನು ಗುತ್ತಿಗೆ ಪಡಿದಿದ್ದಕ್ಕೆ ತಕ್ಕಂತೆ ಉತ್ತಮ ಇಳುವರಿ ಕೂಡ ಬಂದಿತ್ತು. ಜಗದೀಶ್ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ ಒಂದು ಕೆ.ಜಿ.ಗೆ 2-3 ರೂಪಾಯಿ ಬೆಲೆ ಬಂದಿದ್ದು, ಇದರಿಂದ ಕಂಗಾಲಾಗಿ ಸಂಪೂರ್ಣ ಬೆಳೆಯನ್ನು ನಾಶ ಪಡಿಸಿದ್ದಾರೆ. ಬೆಳೆಯಿಂದ ನಷ್ಟ ಉಂಟಾಗಿದ್ದು ಬೆಳೆ ನಷ್ಟ ಪರಿಹಾರಕ್ಕೆ ರೈತ ಜಗದೀಶ್ ನಮಗೇನಾದರೂ ದಾರಿ ತೋರಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.












Click it and Unblock the Notifications