ಸಾಲಬಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
ಬೆಳಗಾವಿ, ಡಿಸೆಂಬರ್ 29 : ಸಾಲಬಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಶುಕ್ರವಾರ ನಡೆದಿದೆ.
ಸಾಲಬಾದೆ ತಾಳಲಾರದೆ ವೆಂಕನಗೌಡ ಲಕ್ಷ್ಮಣಗೌಡ(32) ರೈತ ತನ್ನ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

12 ಎಕರೆ ಕೃಷಿ ಜಮೀನು ಹೊಂದಿರುವ ಅವರು ರಾಮದುರ್ಗ ಎಸ್.ಬಿ.ಐ ಬ್ಯಾಂಕಿನಲ್ಲಿ3 ಲಕ್ಷ, ಮುದೇನೂರು ಪಿ.ಕೆ.ಪಿ.ಎಸ್ ನಲ್ಲಿ30 ಸಾವಿರ, ಕೈಗಡ 1 ಲಕ್ಷಕ್ಕಿಂತಲೂ ಅಧಿಕ ಸೇರಿದಂತೆ 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎಂದು ಕುಟುಬ ಮೂಲದಿಂದ ತಿಳಿದುಬಂದಿದೆ. ಮೃತ ರೈತನಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.












Click it and Unblock the Notifications