ಬಂಡಿ ಅಲ್ಲ.. ಭಾರೀ ಮೊತ್ತದ BMW ಕಾರಿನಲ್ಲಿ ಜಾನುವಾರುಗಳಿಗೆ ಹುಲ್ಲು ತಂದ ಅನ್ನದಾತ, ವಿಡಿಯೋ ವೈರಲ್
ನವದೆಹಲಿ, ಸೆಪ್ಟೆಂಬರ್, 09: ಭಾರತ ಒಂದು ಕೃಷಿ ಪ್ರಧಾನ ರಾಷ್ಟವಾಗಿದೆ. ಜೊತೆ ದನಗಳ ಸಾಕಾಣಿಕೆಯಲ್ಲೂ ಮುಂಚೂಣಿಯಲ್ಲಿದೆ. ಸಾಮಾನ್ಯವಾಗಿ ಇಲ್ಲಿನ ರೈತರು ಬೆಳಗ್ಗೆ ಆದರೆ ಸಾಕು ಜಾನುವಾರುಗಳಿಗೆ ಮೇವು ತರಲು ಎತ್ತಿನ ಬಂಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಇದೀಗ ಇಲ್ಲೊಬ್ಬ ರೈತ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರಿನಲ್ಲಿ ದನಗಳಿಗೆ ಮೇವು ತಂದ ಘಟನೆ ನಡೆದಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದು ಯಾವ ರಾಜ್ಯದಲ್ಲಿ ಅಂತೀರಾ ಇಲ್ಲಿದೆ ನೋಡಿ ವಿಡಿಯೋ ಸಮೇತ ವಿವರ.
ಹದಗೆಟ್ಟ ರಾಜಕಾರಣದಿಂದ ಭಾರತದಲ್ಲಿ ಅನ್ನದಾತ ಸಾಲದಲ್ಲಿ ಹುಟ್ಟಿ, ಸಾಲದಲ್ಲಿಯೇ ಬೆಳೆದು, ಸಾಲದಲ್ಲೇ ಸಾಯುತ್ತಾನೆ ಎನ್ನುವುದು ಈಗಲೂ ಪ್ರಸ್ತುತದಲ್ಲಿದೆ. ಆಗಂತ ಎಲ್ಲಾ ರೈತರು ಬಡವರಲ್ಲ. ಅದರಲ್ಲೂ ಕೆಲವು ಮಂದಿ ಐಷಾರಾಮಿ ಜೀವನ ನಡೆಸುತ್ತಾರೆ. ಸದ್ಯ ಇದೀಗ ಬಿಹಾರದ ರೈತನೊಬ್ಬ ತನ್ನ ಜಾನುವಾರುಗಳಿಗೆ ಮೇವನ್ನು ಬಿಎಂಡಬ್ಲ್ಯೂ ಕಾರಿನಲ್ಲಿ ಸಾಗಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

'ಟುಡೆ ಬಿಹಾರ್ ನ್ಯೂಸ್' ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೃರಲ್ ಆಗಿದೆ. ಈ ಬಿಎಂಡಬ್ಲ್ಯೂ 5 ಸೀರಿಯಸ್ ಸೆಡಾನ್ ಮಾಲೀಕನನ್ನು ಅಂಶು ಕುಮಾರ್ ಎಂದು ಗುರುತಿಸಲಾಗಿದೆ. ಇವರು, ವೃತ್ತಿಯಲ್ಲಿ ಕೃಷಿಕರಾಗಿದ್ದು, ಜೊತೆಯಲ್ಲಿಯೇ ಟೂರ್ - ಟ್ರಾವೆಲ್ ವ್ಯವಹಾರವನ್ನು ನಡೆಸುತ್ತಿದ್ದಾರೆ ಎನ್ನುವ ಮಹಿತಿ ತಿಳಿದುಬಂದಿದೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಕಾರು ಕಂಡುಬಂದಿದೆ. ಆದರೆ, ನಿರ್ದಿಷ್ಟ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಡಿಯೋದಲ್ಲಿ ಬಿಎಂಡಬ್ಲ್ಯೂ ಕಾರಿನ ಮೇಲ್ಚಾವಣೆ ಮೇಲೆ ಜಾನುವಾರುಗಳಿಗಾಗಿ ಹಸಿರು ಹುಲ್ಲನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಇದರೊಟ್ಟಿಗೆ, ನಂಬರ್ ಪ್ಲೇಟ್ ಇಲ್ಲದಿರುವುದು ಪ್ರಮುಖವಾಗಿ ಹೈಲೈಟ್ ಆಗಿರುವುದನ್ನು ಗಮನಿಸಬಹುದಾಗಿದೆ.
ಈ ಬಗ್ಗೆ ಕಾರು ಮಾಲೀಕ ಅಂಶು ಕುಮಾರ್ ಅವರು ಮಾತನಾಡಿದ್ದು, "ನಗರ ಪ್ರದೇಶದಲ್ಲಿ ಉತ್ತಮವಾದ ಹಸಿರು ಮೇವು ಸಿಗುವುದಿಲ್ಲ. ಆದ್ದರಿಂದ ಜಾನುವಾರುಗಳ ಆಹಾರಕ್ಕಾಗಿ ಮೇವು ತರಲು ಬಿಎಂಡಬ್ಲ್ಯು ಕಾರಿನಲ್ಲಿ ಹೋಗಿದ್ದೆ. ಅವುಗಳಿಗೆ ಹಸಿರು ಹುಲ್ಲನ್ನು ನೀಡಿದರೆ, ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ನೀಡುತ್ತೇವೆ. ಯಾರೂ ರಸ್ತೆಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.
ರೈತ ಅಂಶು ಕುಮಾರ್ ಟೊಯೊಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೊದಂತಹ ಪ್ರೀಮಿಯಂ ಕಾರುಗಳ ಮಾಲೀಕರು ಆಗಿದ್ದಾರೆ. ಕೆಲವೊಬ್ಬರು ಆತ, ಕಳ್ಳತನವಾಗಿರುವ ಬಿಎಂಡಬ್ಲ್ಯು ಕಾರನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಗಳು ಈವರೆಗೂ ಸಾಬೀತಾಗಿಲ್ಲ.












Click it and Unblock the Notifications