"ಕೆಂಪ್" ಕೆಂಪು.. ಒಣಕಾರ ಬೆಡಗಿಯ ಧಾರಣೆ ಏರಿಕೆ-ಅಂಕಿಅಂಶಗಳ ಮಾಹಿತಿ ತಿಳಿಯಿರಿ
ಹಟ್ಟಿ ಚಿನ್ನದ ಗಣಿ, ಜನವರಿ, 29: ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆಯಷ್ಟೇ ಕೆಂಪುರಾಣಿ ಟೊಮೆಟೋ ಬೆಲೆ 150 ರೂಪಾಯಿ ಗಡಿ ದಾಡಿತ್ತು. ಇದೀಗ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಕೆಂಪು ಕೆಂಪು.. ಒಣಕಾರ ಬೆಡಗಿ ಒಣಮೆಣಸಿನಕಾಯಿ ಬೆಲೆ ಏರಿಕೆಯಾಗಿದ್ದು, ಇಲ್ಲಿನ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ದರ ಏರಿಕೆ ಆಗಿರುವುದರಿಂದ ಮೆಣಸಿನಕಾಯಿ ಬೆಳೆ ಬೆಳೆದ ರೈತರು ನಗುಮುಖದಲ್ಲಿದ್ದಾರೆ. ರೈತರು ಒಣಮೆಣಸಿನಕಾಯಿ ಮಾರಾಟ ಮಾಡಲು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದು, ಅಲ್ಲಿ ಹತ್ತಿರದ ತಳಿಯ ಒಣ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ 25,000 ರೂಪಾಯಿ ಇದ್ದು, 38 ಸಾವಿರ ರೂಪಾಯಿ ಬ್ಯಾಡಗಿ ಮತ್ತು ಗುಂಟೂರು ತಳಿ ತಲಾ 16ರಿಂದ 18 ಸಾವಿರದಿಂದ ಧಾರಣೆ ಸಿಗುತ್ತಿದ್ದು, ಇದರಿಂದ ರೈತರು ಮಂದಹಾಸ ಮೂಡಿದಂತಾಗಿದೆ.

ಹಟ್ಟಿ ಸುತ್ತಮುತ್ತ ಗ್ರಾಮಗಳಾದ ಮೇದಿನಾಪೂರ, ಗುಡದನಾಳ, ಗುರುಗುಂಟಾ, ಮಾಚನೂರು, ಆನ್ವರಿ, ಯಲಗಟ್ಟಾ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಎರೆ ಭೂಮಿ ಇರುವ ಇನ್ನಿತರ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ರೈತರು ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಾ ಬಂದಿದ್ದಾರೆ. ಆದರೆ ಈ ಭಾಗದ ರೈತರು ಮೊದಲಿಗಿಂದ ಹೆಚ್ಚಾಗಿ ಒಣಮೆಣಸಿನಕಾಯಿಯನ್ನು ಬೆಳೆಯುತ್ತಿಲ್ಲ.
ರೈತರು ಈರುಳ್ಳಿ ನಡುವಿನ ಕಳೆಯನ್ನು ತೆಗೆಯಲು ಇದೀಗ ಕಳೆನಾಶಕಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೆಣಸಿನಕಾಯಿ ಗಿಡಗಳು ನಾಶವಾಗುತ್ತಿವೆ. ಕೃಷಿ ಕಾರ್ಮಿಕರಿಂದ ಈರುಳ್ಳಿ ಕಳೆ ತೆಗೆಯಲು ಕಾರ್ಮಿಕರು ಸಕಾಲಕ್ಕೆ ಸಿಗುವುದಿಲ್ಲ. ಸಿಕ್ಕರೂ ಖರ್ಚು ಹೆಚ್ಚಳ ಆಗುತ್ತದೆ. ಆದ್ದರಿಂದ ಮೆಣಸಿನಕಾಯಿ ಬೆಳೆಯುವವರ ಪ್ರಮಾಣ ಕಡಿಮೆ ಆಗಿದೆ ಎಂದು ಮಾಚನೂರು ಗ್ರಾಮದ ರೈತ ಬಸವರಾಜ ಸಂಗಟಿ ಹೇಳಿದ್ದಾರೆ ಅಂತಾ ಪ್ರಜಾವಾಣಿಯಲ್ಲಿ ವರದಿಯಾಗಿದೆ.
ಇನ್ನು ಈ ಬಾರಿ ದರ ಹೆಚ್ಚಳ ಆಗಿರುವ ಹಿನ್ನೆಲೆ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆಯಿದ ಎಂದು ಈ ಭಾಗರದ ರೈತರು ಭಾವಿಸಿದ್ದಾರೆ. ಗುಜರಾತ್‌ನಿಂದ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿದ್ದು, ರಾಜ್ಯದ ರೈತರು ಬೆಳೆದ ಮೆಣಸಿನಕಾಯಿ ಬೆಲೆ ಏರಿಕೆ ಆಗಿದೆ ಎಂದು ಇಲ್ಲಿ ರೈತರು ಹೇಳುತ್ತಿದ್ದಾರೆ.
ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲು 5 ಸಾವಿರದವರೆಗೂ ಖರ್ಚಾಗಬಹುದು. ಹೆಚ್ಚು ಔಷಧಿ ಸಿಂಪಡಣೆ ಹಾಗೂ ಕಾರ್ಮಿಕರು ಬೇಕಿಲ್ಲ. ವಾಣಿಜ್ಯ ಬೆಳೆ ಮೆಣಸಿನಕಾಯಿ ಈ ಬಾರಿ ರೈತರ ಕೈ ಹಿಡಿದಿದೆ. ಆದರೆ ಬಾರಿಯೇ ಈ ಭಾಗದ ರೈತರು ಹೆಚ್ಚಾಗಿ ಮೆಣಸಿನಕಾಯಿ ಬೆಳೆ ಬೆಳೆದಿಲ್ಲ. ಇನ್ನು ಈ ಬೆಲೆಯನ್ನು ತಿಳಿದ ರೈತರು ಮುಂದಿನ ಬಾರಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆ ಬೆಳೆಯುವ ಸಾಧ್ಯತೆಯಿದೆ ಎನ್ನಲಾಗಿದೆ.












Click it and Unblock the Notifications