ಭತ್ತ, ಬೆಳೆಕಾಳು ನಾಶದಮೊತ್ತ 1387ಕೋಟಿ ರು
ಬೆಂಗಳೂರು, ಆ.25: ಬೇಸಾಯದ ಈ ಋತುಮಾನದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯಕ್ಕೆ 1,387ಕೋಟಿ ರುನಷ್ಟು ಅಂದಾಜು ನಷ್ಟವಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.
2009-10ರ ಖಾರೀಫ್ ಬೆಳೆಗಳು ಸಂಪೂರ್ಣ ನಾಶವಾಗಿದೆ. ಭತ್ತ, ಧಾನ್ಯ ಬೆಳೆಕಾಳು ನೆಲಕಚ್ಚಿವೆ. ಸುಮಾರು 1,387ಕೋಟಿ ರು ನಷ್ಟವಾಗಿದೆ. ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಇದರಲ್ಲಿ ಬರ ಪರಿಸ್ಥಿತಿಯ ಕಾರಣ ಮಳೆ ಕಾಣದೆ 871 ಕೋಟಿ ರು ನಷ್ಟ ಹಾಗೂ ಅಧಿಕ ಮಳೆ ಸುರಿದು ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ನಾಶದ ಮೊತ್ತ 516 ಕೋಟಿ ರು ಸೇರಿದೆ. ಭತ್ತ, ಜೋಳ, ಧಾನ್ಯಗಳು ಪ್ರಮುಖವಾಗಿ ನಾಶವಾದವುಗಳು. ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ತಂಡ ಸದ್ಯದಲ್ಲೇ ಆಗಮಿಸಿ ಸಮೀಕ್ಷೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದರು.
(ದಟ್ಸ್ ಕನ್ನಡವಾರ್ತೆ)











Click it and Unblock the Notifications