ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್
Recommended Video
ಬೆಂಗಳೂರು, ಏಪ್ರಿಲ್ 27: ಮಂಡ್ಯ ಚುನಾವಣಾ ಅಖಾಡಕ್ಕೆ ಸುಮಲತಾ ಅವರ ಪರವಾಗಿ ದರ್ಶನ್ ಅವರು ಇಳಿದಾಗಿನಿಂದಲೂ ಕುಮಾರಸ್ವಾಮಿ-ದರ್ಶನ್ ಅವರ ನಡುವೆ ಪರೋಕ್ಷ ಮಾತಿನ ಸಮರ ನಡೆಯುತ್ತಲೇ ಇದೆ. ಮತದಾನ ಮುಗಿದಿದ್ದರೂ ಸಹ ಮಾತಿನ ಸಮರ ಅಂತ್ಯವಾದಂತೆ ತೋರುತ್ತಿಲ್ಲ.
ಇಂದು ಬೆಂಗಳೂರಿನ ಕಾಲೇಜೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್ ಅವರು, 'ರೈತರ ಸಾಲಮನ್ನಾ ಮಾಡುವುದು ಬೇಡ, ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ಕೊಡಲಿ ಸಾಕು, ಸಾಲವನ್ನು ಅವರೇ ತೀರಿಸುತ್ತಾರೆ' ಎಂದು ಹೇಳಿದ್ದಾರೆ.
ರೈತ ಸಾಲಮನ್ನಾ ಯೋಜನೆಯನ್ನು ತಂದು ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರನ್ನು ಉದ್ದೇಶವಾಗಿಟ್ಟುಕೊಂಡು ದರ್ಶನ್ ಅವರು ಈ ಮಾತುಗಳು ಹೇಳಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಅವರು, 'ಜೈ ಜವಾನ್, ಜೈ ಕಿಸಾನ್ ಎಂದು ಘೋಷ ವಾಕ್ಯವಿದೆ. ನಾನು ರೈತನೇ ರೈತನಿಲ್ಲದಿದ್ದರೆ ನಾವ್ಯಾರೂ ಇಲ್ಲ, ನಾವೆಲ್ಲಾ ಇಂದು ನೆಮ್ಮದಿಯಾಗಿ ಇದ್ದೀವೆಂದರೆ ಅದಕ್ಕೆ ಸೈನಿಕರು ಕಾರಣ ಅವರಿಬ್ಬರಿಗೂ ಸೆಲ್ಯೂಟ್' ಎಂದು ಹೇಳಿದರು.

'ಸಾಲಮನ್ನಾ ಬಗ್ಗೆ ಮುಂಚೆಯೇ ಮಾತನಾಡಬೇಕು ಎಂದುಕೊಂಡಿದ್ದೆ'
ರೈತರ ಸಾಲದ ಬಗ್ಗೆ ಈ ಹಿಂದೆಯೇ ಕೆಲವು ಕಡೆ ಮಾತನಾಡಬೇಕು ಎಂದುಕೊಂಡಿದ್ದೆ ಸಮಯ ಸೂಕ್ತವಾಗಿಲ್ಲವೆಂದು ಸುಮ್ಮನಾಗಿದ್ದೆ ಎಂದ ದರ್ಶನ್, ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿ ಅವರೇ ಸಾಲ ತೀರಿಸುತ್ತಾರೆ, ಸಾಲಮನ್ನಾ ಮಾಡುವುದು ಬೇಡ ಎಂದು ಹೇಳಿದರು. ದರ್ಶನ್ ಅವರ ಈ ಮಾತನ್ನು ನೆರೆದಿದ್ದವರು ಭಾರಿ ಚಪ್ಪಾಳೆಯೊಂದಿಗೆ ಅನುಮೋದಿಸಿದರು.

'ಯಾವನೋ ಡಿ-ಬಾಸ್ ಅಂತೆ' ಅಂದಿದ್ರು ಕುಮಾರಸ್ವಾಮಿ
ಮಂಡ್ಯ ಚುನಾವಣೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರಾಳಿ ಸುಮಲತಾ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದು ಕುಮಾರಸ್ವಾಮಿ ಅವರಿಗೆ ಅಸಹನೀಯವೆನಿಸಿತ್ತು. 'ಯಾವನೋ ಡಿ-ಬಾಸ್ ಅಂತೆ' ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ಅವರು ದರ್ಶನ್ ಅವರನ್ನು ಸಂಭೋದಿಸಿ ಮಾತನಾಡಿದ್ದರು, ಇದು ಇವರಿಬ್ಬರ ಮಧ್ಯೆ ವೈಷಮ್ಯ ಹುಟ್ಟುಹಾಕಿತ್ತು.

ದರ್ಶನ್ ರೈತನಲ್ಲವೆಂದ ಕುಮಾರಸ್ವಾಮಿಗೆ ಸವಾಲು ಹಾಕಿದ್ದರು
ಚುನಾವಣೆಯ ಸಮಯದಲ್ಲಿ ಮೌನವಾಗಿಯೇ ಇದ್ದ ದರ್ಶನ್ ಅವರು, ಬಹಿರಂಗ ಪ್ರಚಾರದ ಕೊನೆಯ ದಿನ ಬೃಹತ್ ಸಮಾವೇಶದಲ್ಲಿ ಕುಮಾರಸ್ವಾಮಿ ಅವರ ಎಲ್ಲ ವೈಯಕ್ತಿಕ ಟೀಕೆಗಳಿಗೂ ಉತ್ತರ ನೀಡಿದ್ದರು, 'ನಾನು ರೈತ, ನೀವು ಒಂದು ಚೆಂಬು ಹಾಲು ಕರೆದು ತೋರಿಸಿ ಆಗ ಒಪ್ಪಿಕೊಳ್ಳುತ್ತೇನೆ' ಎಂದು ಸವಾಲು ಹಾಕಿದ್ದರು.

ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ನಾಂದಿ?
ಮಂಡ್ಯ ಚುನಾವಣೆ ಸಮಯದಲ್ಲಿ ಪ್ರಾರಂಭವಾಗಿದ್ದ ಇಬ್ಬರ ನಡುವಿನ ಮಾತಿನ ಸಮರ ಮತದಾನ ಮುಗಿದು ಎರಡು ವಾರವಾಗುತ್ತಾ ಬಂದರೂ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ದರ್ಶನ್ ಅವರ ಇಂದಿನ ಹೇಳಿಕೆ ಕುಮಾರಸ್ವಾಮಿ ಅವರನ್ನು ಕೆರಳಿಸುವ ಸಾಧ್ಯತೆ ಇದೆ. ಏಕೆಂದರೆ ಸಾಲಮನ್ನಾ ಯೋಜನೆ ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾಗಿದೆ, ಇದನ್ನು ದರ್ಶನ್ ಅವರು ಇಂದು ಟೀಕಿಸಿದ್ದಾರೆ. ದರ್ಶನ್ ಅವರ ಇಂದಿನ ಹೇಳಿಕೆ ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ನಾಂದಿ ಆಗುವಂತಿದೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications