Get Updates
Get notified of breaking news, exclusive insights, and must-see stories!

ದಕ್ಷಿಣ ಕನ್ನಡದಲ್ಲಿ ಮಳೆ ನಾಪತ್ತೆ , ರೈತರು ಕಂಗಾಲು

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮಳೆ ನಾಪತ್ತೆಯಾಗಿದೆ. ಎಡೆಬಿಡದೆ ಮಳೆ ಸುರಿಯಬೇಕಿದ್ದ ಜುಲೈ ತಿಂಗಳಲ್ಲಿ ಮಳೆಯೇ ಇಲ್ಲ. ತುಳುವರ ಆಟಿ ತಿಂಗಳು (ಆಷಾಢದಂತೆ) ಎಂದರೆ ಭಾರಿ ಮಳೆಯ ಕಪ್ಪು ದಿನಗಳ ತಿಂಗಳು. ಆದರೆ, ಈ ಬಾರಿ ಪರಿಸ್ಥಿತಿ ವ್ಯತಿರಿಕ್ತ. ಬೇಸಿಗೆ ಕಾಲದಂತಹ ಬಿರು ಬಿಸಿಲು.

ಆರ್ದ್ರ, ಪುನರ್ವಸು , ಪುಷ್ಯಗಳು ಮಳೆ ಸುರಿಸು-ವ ನಕ್ಷತ್ರಗಳೆಂಬುದು ದ.ಕ. ಜಿಲ್ಲೆಯ ಕೃಷಿಕರ ಲೆಕ್ಕಾಚಾರ. ಈ ಬಾರಿ ಲೆಕ್ಕಾಚಾರ ತಪ್ಪಿದೆ. ಮಳೆ ಇಲ್ಲದೆ ಕೃಷಿಗೆ ನೀರಿನ ಅಭಾವವುಂಟಾಗಿದೆ.

ಮಳೆರಾಯನ ಈ ಮುನಿಸಿನಿಂದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಬೆಟ್ಟುಗದ್ದೆಗಳು ಒಣಗುತ್ತಿವೆ. ಹಸಿರು ಪೈರು ಹಳದಿಯಾಗುತ್ತಿದೆ. ಪಂಪ್‌ಸೆಟ್‌ ಇದ್ದವರು ಅದರ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಖಾರಿಫ್‌ ಬೆಳೆಯನ್ನು ಉಳಿಸಿಕೊಳ್ಳುವ ಚಿಂತೆಯ ಜೊತೆಗೆ ಎರಡನೇ ಮತ್ತು 3 ನೇ ಬೆಳೆಯ ಕತೆ ಏನು ಎಂಬ ಪ್ರಶ್ನೆ ರೈತನನ್ನು ಕಾಡುತ್ತಿದೆ.

ಈ ಬಾರಿ ಮುಂಗಾರು ಸಕಾಲಕ್ಕೆ ಆರಂಭವಾಗಿ ಭರ್ಜರಿಯಾಗಿ ಸುರಿದಿತ್ತು. ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ದಕ್ಷಿಣ ಕನ್ನಡ ಎತ್ತರ - ತಗ್ಗು ಪ್ರದೇಶವಾಗಿದ್ದು , ಎತ್ತರದಲ್ಲಿರುವ ಬೆಟ್ಟುಗದ್ದೆಗಳಲ್ಲಿ ಬೆಳೆಗೆ ಮಳೆಯೇ ಆಧಾರ. ಒಟ್ಟು ವಿಸ್ತೀರ್ಣದಲ್ಲಿ ಶೇ. 30 ರಷ್ಟು ಭತ್ತದ ಕೃಷಿ ಆರಂಭವಾಗಿದೆ. ಈಗ ಮತ್ತೆ ಮಳೆಗಾಗಿ ಕಾಯುತ್ತಿದ್ದಾರೆ. ಉಡುಪಿ ಜಿಲ್ಲೆಯ ಕೆಲ ಭಾಗ-ದಲ್ಲಿ ಭತ್ತಕ್ಕೆ ಕಳೆ ರೋಗ , ಸೈನಿಕ ಹುಳುವಿನ ಬಾ-ಧೆಯಂತಹ ತೊಂದರೆಗಳೂ ಕಂಡು ಬಂದು ಕೃಷಿಕನ್ನು ಹೆದರಿಸಿವೆ.

ಪ್ರತಿ ವರ್ಷವೂ ಜುಲೈ ತಿಂಗಳಲ್ಲಿ ಕನಿಷ್ಟ 2 ಅಥವಾ 3 ದಿನಗಳಾದರೂ ಶಾಲಾ ಕಾಲೇಜುಗಳಿಗೆ -ಮ-ಳೆ-ಯಿಂ-ದಾ-ಗಿ ರಜೆ ಘೋಷಿಸಲಾಗುತ್ತಿತ್ತು. ಆದರೆ ಈ ಬಾರಿ ರಜೆ ಘೋಷಿಸಬೇಕಾದ ಪರಿಸ್ಥಿತಿಯನ್ನು ಮಳೆ ನಿರ್ಮಿಸಲೇ ಇಲ್ಲ.

1998ರಲ್ಲಿ ಸುಳ್ಯ, ಬೆಳ್ತಂಗಡಿ, ಪುತ್ತೂರು , ಭಂಟ್ವಾಳ, ಮಂಗಳೂರು ತಾಲೂಕುಗಳಲ್ಲಿ ಜುಲೈ ತಿಂಗಳಲ್ಲಿ 6055.1 ಮಿಮೀ ಮಳೆಯಾಗಿತ್ತು. 1999ರಲ್ಲಿ ಮಳೆಯ ಪ್ರಮಾಣ 6656.5 ಮಿಮೀ ಮತ್ತು 2000ನೇ ಇಸವಿಯಲ್ಲಿ ಸದ್ಯಕ್ಕೆ 3, 519 ಮಿಮೀ ಮಳೆಯಾಗಿದೆ. ಈವರೆಗೆ ಸಾಕಷ್ಟು ಮಳೆಯಾಗಬೇಕಾಗಿದ್ದು, ಒಟ್ಟು ಪ್ರಮಾಣದಲ್ಲಿ ಈ ವರ್ಷ ಅರ್ಧಕ್ಕರ್ಧ ಕುಸಿದಿದೆ ಎಂದೇ ಹೇಳಬಹುದು.

ಹಳ್ಳಿಗಳಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಇರುತ್ತಿದ್ದ ಒರತೆ ನೀರು ಈ ಬಾರಿ ಆಗಸ್ಟ್‌ ಆರಂಭಕ್ಕೇ ಬತ್ತಿ ಹೋಗಿದೆ. ಬಯಲು ಪ್ರದೇಶದ ಬೆಳೆಗೂ ನೀರು ಹಾಯಿಸಬೇಕಾಗಿದೆ. ಈಗ ನಾಪತ್ತೆಯಾಗಿರುವ ಮಳೆ ಮತ್ತೆ ಕಟಾವಿನ ಸಮಯಕ್ಕೆ ಬಂದರೆ ಕೈಗೆ ಬಂದ ಕಾಳು ತುತ್ತು ಬಾಯಿಗೆ ಬರುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+